ಧಾರವಾಡ:
ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು, ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ದುಡಿಯುತ್ತಿದ್ದಾರೆ. ರೈತ ಮಹಿಳೆಯರಿಗೆ ಉತ್ತಮ ಸ್ಥಾನಮಾನ ನೀಡಬೇಕು. ಅವರ ಶ್ರಮಕ್ಕೆ ತಕ್ಕ ಗೌರವ ಹಾಗೂ ಅವಕಾಶ ಕಲ್ಪಿಸಬೇಕು ಎಂದರು.ಲಾಭದಾಯಕ ಕೃಷಿ, ಅಭಿವೃದ್ಧಿ ಆಧಾರಿತ ಕೃಷಿ ಹಾಗೂ ತಂತ್ರಜ್ಞಾನ ವ್ಯವಸ್ಥೆಗಳು ಕೃಷಿ ಕ್ಷೇತ್ರಕ್ಕೆ ಬಲ ತುಂಬಿವೆ. ಹೊಸ ಹೊಸ ಆವಿಷ್ಕಾರಗಳು, ಉತ್ತಮ ಗುಣಮಟ್ಟದ ಬೀಜ, ಆಧುನಿಕ ಯಂತ್ರೋಪಕರಣ ಹಾಗೂ ಹೊಸ ಸಂಶೋಧನೆಗಳನ್ನು ರೈತರಿಗೆ ಪರಿಚಯಿಸುವಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮಹತ್ವದ ಕಾರ್ಯ ಮಾಡುತ್ತಿದೆ. ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ಕರ್ನಾಟಕದಲ್ಲಿಯೇ ಧಾರವಾಡ ಕೃಷಿ ಮೇಳ ಉತ್ತಮ ಕೃಷಿ ಮೇಳವಾಗಿ ಗುರುತಿಸಿಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ವಿವಿಧ ಜಿಲ್ಲೆಗಳ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ಲಕ್ಷ್ಮಣ ಕುಂಬಾರ, ಕೆಂಪವ್ವ ಮಾಯನ್ನವರ, ಹಾವೇರಿ ಜಿಲ್ಲೆಯ ನಾಗರಾಜ ಹುಲಗೂರು, ಕಾವ್ಯಾ ಕುಂಟನಹೊಸಳ್ಳಿ, ಗದಗ ಜಿಲ್ಲೆಯ ವೀರೇಶ ನೇಗಲಿ, ನಿರ್ಮಲಾ ಕವಲೂರು, ವಿಜಯಪುರ ಜಿಲ್ಲೆಯ ಮಲ್ಲಪ್ಪ ಗುಡ್ಲ, ಶಿಲ್ಪಾ ನಾಯಕ, ಬಾಗಲಕೋಟೆ ಜಿಲ್ಲೆಯ ತಿಪ್ಪಣ್ಣ ಗೌಡರ, ಕೀರ್ತಿ ಜನವಾಡ, ಉತ್ತರ ಕನ್ನಡ ಜಿಲ್ಲೆಯ ಮಂಜುನಾಥ ಕರಲೇಕರ, ಪುಷ್ಪಾ ಗುಲ್ಯಾನವರ, ಧಾರವಾಡ ಜಿಲ್ಲೆಯ ಮಂಜಯ್ಯ ಅಣ್ಣಿಗೇರಿ ಹಾಗೂ ಕಲಾವತಿ ಚವನಗೌಡರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅದೇ ರೀತಿ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ನಾಗರಾಜ ತಲ್ಲೂರು, ಹಾವೇರಿ ಜಿಲ್ಲೆಯ ಈರಪ್ಪ ಬಾರಕೇರ, ಗದಗ ಜಿಲ್ಲೆಯ ಪ್ರವೀಣ ನಾಯಕ, ವಿಜಯಪುರ ಜಿಲ್ಲೆಯ ನೂರಂದಪ್ಪ ಮಂಗಾನವರ, ಬಾಗಲಕೋಟೆ ಜಿಲ್ಲೆಯ ಚೇತನ ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ವಿನಯಕುಮಾರ್ ನಾಯಕ ಹಾಗೂ ಧಾರವಾಡ ಜಿಲ್ಲೆಯ ಸಂಜು ಮೊರಬದ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ, ಕೃಷಿ ಬೆಲೆ ಆಯೋಗದ ಅಶೋಕ ದಳವಾಯಿ, ಕೃಷಿಕ ಸಮಾಜದ ವೀರೇಂದ್ರ ಪಾಟೀಲ, ಮಲ್ಲನಗೌಡ, ಡಾ. ವಿಷ್ಣುವರ್ಧನ, ಮಹಾದೇವಪ್ಪ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ಬಿ. ಪ್ರಕಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ನೂತನ ತಳಿಗಳನ್ನೂ ಬಿಡುಗಡೆ ಮಾಡಲಾಯಿತು.