ರೈತರ ಬೆಳೆಗಳಿಗೆ ಉತ್ತಮ ಲಾಭ ಪಡೆಯಬೇಕು

KannadaprabhaNewsNetwork |  
Published : Sep 10, 2026, 01:15 AM IST
    ಸಿಕೆಬಿ-1 ತಾಲ್ಲೂಕಿನ  ಪೆರೆಸಂದ್ರಗ್ರಾಮದ  ಶ್ರೀ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ   ಮಂಡಿಕಲ್ಲು ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ನ ಐದನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ 2025-26 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯಸಭೆಯಲ್ಲಿ  ಪ್ರಗತಿಪರ ರೈತರನ್ನ ಗೌರವಿಸಿ ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಕಂಪನಿಯು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ದಳ್ಳಾಳಿಗಳ ಮಧ್ಯಸ್ಥಿಕೆ ಇಲ್ಲದೆ ಖರೀದಿದಾರರಿಗೆ ನೇರ ಸಂಪರ್ಕ ಕಲ್ಪಿಸಿ ಉತ್ತಮ ಬೆಲೆಯನ್ನು ಕೊಡಿಸಬೇಕು.

ರೈತ ಉತ್ಪಾದಕರ ಕಂಪನಿ ಲಿಮಿಟೆಡ್ (ಎಫ್‌ಪಿಒ) ಐದನೇ ವರ್ಷದ ವಾರ್ಷಿಕ ಮಹಾಸಭೆ । ಮಾದರಿ ಮಳಿಗೆಯಾಗಿ ರೂಪುಗೊಳ್ಳಲಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರೈತರು ತಮ್ಮದೇ ಉತ್ಪಾದನೆ ಬೆಳೆಗಳಿಂದ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಬ್ರಾಂಡಿಂಗ್‌ನೊಂದಿಗೆ ಉತ್ತಮ ವಹಿವಾಟು ನಡೆಸಿ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೆ ಹೆಚ್ಚು ಲಾಭ ಪಡೆಯಬೇಕು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕಿ ದೀಪಶ್ರೀ ಜಿ. ತಿಳಿಸಿದರು.

ತಾಲೂಕಿನ ಪೆರೇಸಂದ್ರ ಗ್ರಾಮದ ಶ್ರೀ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮಂಡಿಕಲ್ಲು ರೈತ ಉತ್ಪಾದಕರ ಕಂಪನಿ ಲಿಮಿಟೆಡ್ (ಎಫ್‌ಪಿಒ) ಐದನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ 2025-26 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಕಂಪನಿಯು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ದಳ್ಳಾಳಿಗಳ ಮಧ್ಯಸ್ಥಿಕೆ ಇಲ್ಲದೆ ಖರೀದಿದಾರರಿಗೆ ನೇರ ಸಂಪರ್ಕ ಕಲ್ಪಿಸಿ ಉತ್ತಮ ಬೆಲೆಯನ್ನು ಕೊಡಿಸಬೇಕು. ಗ್ರಾಮ ಹಾಗೂ ಪಂಚಾಯಿತಿ ಮಟ್ಟದಲ್ಲಿ ರೈತ ಆಸಕ್ತಿ ಗುಂಪುಗಳನ್ನು ರಚನೆ ಮಾಡಿಕೊಂಡು ಆಗಿಂದಾಗ್ಗೆ ರೈತರ ಸಭೆಗಳನ್ನು ಮಾಡಬೇಕು. ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳು ಸದುಪಯೋಗಪಡಿಸಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯ ಮಾದರಿ ಎಫ್‌ಪಿಒ ಕಂಪನಿಯಾಗಿ ಬೆಳೆಯಬೇಕು ಎಂದು ಆಶಿಸಿದರು.

ರೈತರಿಂದ ರೈತರಿಗಾಗಿ ರೈತರಿಗೋಸ್ಕರ ತಾವೇ ನಿರ್ಮಾಣ ಮಾಡಿ ಕೊಂಡಿರುವಂತಹ ಮಂಡಿಕಲ್ಲು ಎಫ್‌ಪಿಒ ಕಂಪನಿ ಐದನೇ ವರ್ಷದ ಅವಧಿಗೆ ಸಾವಿರ ಷೇರುಗಳನ್ನು ಪಡೆದು ಹಾಗೂ ಸರ್ಕಾರದಿಂದ ಇಕ್ವಿಟಿ ಗ್ರಾಂಡ್‌ನ್ನು ಪಡೆದು ರಸಗೊಬ್ಬರಗಳು ಹಾಗೂ ಕೀಟನಾಶಕಗಳ ರೈತರ ಪರಿಕರಗಳ ಮಾರಾಟವನ್ನು ಮಳಿಗೆಯನ್ನು ಆರಂಭಿಸಿ ಕಂಪನಿಗೆ ಲಾಭ ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇದೊಂದು ಜಿಲ್ಲೆಗೆ ಮಾದರಿ ಮಳಿಗೆಯಾಗಿ ರೂಪುಗೊಳ್ಳಲಿ ಎಂದರು.

ಸಹಾಯಕ ಕೃಷಿ ನಿರ್ದೇಶಕ ಸಿ ಮುನಿರಾಜು ಮಾತನಾಡಿ, ಸರ್ಕಾರದಿಂದ ಹಲವಾರು ಯೋಜನೆಗಳು ಎಫ್‌ಪಿಒ ಮುಖಾಂತರ ರೈತರಿಗೆ ಹಲವು ಬೆಳೆಗಳನ್ನು ಬೆಳೆಯಲು ಬೇಕಾಗಿರುವ ತರಬೇತಿಗಳನ್ನು ಸ್ವಂತ ಕಂಪನಿ ಮುಖಾಂತರ ನೀಡಲಾಗುತ್ತಿದೆ. ಅವರು ಬೆಳೆದಂತಹ ಹಣ್ಣು ತರಕಾರಿಗಳು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದೇ ರೀತಿ ಸ್ಥಳೀಯ ಕೃಷಿ ಉತ್ಪನ್ನಗಳನ್ನು ಬ್ರಾಂಡಿಂಗ್ ಮಾಡಿ ಮಾರಾಟದಿಂದ ಉತ್ತಮ ಲಾಭ ಗಳಿಸಿ ಮಾಡಿದಾಗ ಮಾತ್ರ ಕಂಪನಿ ಅರ್ಥಪೂರ್ಣಗೊಳ್ಳುತ್ತದೆ ಎಂದರು.

ಕಂಪನಿಯ ಸಂಸ್ಥಾಪಕ ನಿರ್ದೇಶಕ ವಿ. ಮಧುಚಂದ್ರ ಕಂಪನಿ ಸ್ಥಾಪನೆ, ಅದಕ್ಕೆ ಪಟ್ಟ ಪರಿಶ್ರಮ ಹಲವಾರು ಮುಖಂಡರ ಮಾರ್ಗದರ್ಶನ ಸಹಕಾರ ಮತ್ತು ಕಂಪನಿ 5 ವರ್ಷಗಳಿಂದ ಯಾವ ರೀತಿ ಹಂತ ಹಂತವಾಗಿ ಅಭಿವೃದ್ಧಿಯೊಂದಿಗೆ ರೈತರಿಗೆ ಸೇವಾ ಸೌಲಭ್ಯಗಳು ನೀಡುತ್ತಾ, ರೈತರು ಬೆಳೆದಂತಹ ಬೆಳೆಗಳಿಗೆ ಉತ್ತಮ ಬೆಲೆ ಕೊಡಿಸುವ ಪ್ರಾಮಾಣಿಕ ಪ್ರಯತ್ನವು ಕಂಪನಿ ಮಾಡುತ್ತಾ ಬಂದಿದೆ. ಮುಂದಿನ ದಿನದಲ್ಲಿ ಎಲ್ಲಾ ಷೇರುದಾರರು ಕಂಪನಿಯಲ್ಲಿ ಸಿಗುವಂತ ಎಲ್ಲಾ ರಸಗೊಬ್ಬರಗಳು ಮತ್ತು ಪರಿಕರಗಳನ್ನು ಖರೀದಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಹೆಚ್ಚು ರಸಗೊಬ್ಬರಗಳನ್ನು ಮತ್ತು ಪರಿಕರಗಳನ್ನು ಖರೀದಿ ಮಾಡಿದ ರೈತರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಂಪನಿಯ ಅಧ್ಯಕ್ಷ ಎಂ.ದಯಾನಂದ್, ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಶ್ರೀಧರ್, ಉಪಾಧ್ಯಕ್ಷ ರಜತಾದ್ರಿ, ಬೊಮ್ಮನಹಳ್ಳಿ ಬಿ.ಎಸ್. ನಾಗರಾಜ್, ಎಚ್.ಕೆ. ದೇವರಾಜ್, ಆರ್‌ಎಸ್ ಅನಿಲ್, ಮಹಿಳಾ ನಿರ್ದೇಶಕರಾದ ಆರತಿ ಜಿ., ಆರ್. ಹರ್ಷಿತಾ, ಮಂಜುಳಾ ಜಿ.ವಿ., ಭಾವನಾ ಎಂ.ಎಸ್., ಶೋಭಾ ಎ., ಕಂಪನಿಯ ಸಿಇಓ ಸಿ.ಎಂ. ಗಾಯಿತ್ರಿ, ನರಸಿಂಹಮೂರ್ತಿ, ಜೋನಲ್ ಲೀಡ್ ಕಮ್ಯೂನಿಟಿ ಎಂಗೇಜ್ಮೆಂಟ್ ವೃತ್ತಿ ಕಂಪನಿಯ ಆರ್. ರಾಮಕೃಷ್ಣಪ್ಪ, ಜಿಲ್ಲಾ ಲೀಡ್ ವೃತ್ತಿ ಕಂಪನಿ, ಮಂಜಪ್ಪ, ರಾಜೇಶ್ ಕುಮಾರ್ ಎಂ.ಎ.ಅಕೌಂಟೆಂಟ್, ಆಕ್ಟಿವೇಟರ್ ಪವಿತ್ರ ಜಿ.ಎಲ್, ವಿನೋದರಾಜ್ ಎ, ಸುದೀಪ್ ಬಿ.ಎ. ಇದ್ದರು.

ಸಿಕೆಬಿ-1 ಪೆರೇಸಂದ್ರ ಗ್ರಾಮದ ಶ್ರೀ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮಂಡಿಕಲ್ಲು ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ನ ಐದನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ರೇಯ ಕಾಲೇಜು ಲಾಕ್‌ಡೌನ್‌: 2ನೇ ದಿನಕ್ಕೆ ಕಾಲಿಟ್ಟ ಧರಣಿ
ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು