ಕನ್ನಡಪ್ರಭ ವಾರ್ತೆ ವಡಗೇರಾ
ತಾಲೂಕಿನ ಹಯ್ಯಾಳ ಬಿ. ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಹತ್ವಕಾಂಕ್ಷಿ ಯೋಜನೆ ಅಡಿಯಲ್ಲಿ ಮಣ್ಣಿನ ಆರೋಗ್ಯ ತಪಾಸಣೆ ಚೀಟಿಗಳನ್ನು ವಿತರಿಸಿ ಅವರು ಮಾತನಾಡಿದರು.
ಬೆಳೆಗಳ ಉತ್ತಮ ಬೆಳವಣಿಗೆಗೆ 16 ಪೋಷಕಾಂಶಗಳ ಅವಶ್ಯಕತೆಯಿದ್ದು, ಇವುಗಳಲ್ಲಿ ಬಹುಪಾಲು ಪೋಷಕಾಂಶಗಳು ಮಣ್ಣಿನಿಂದ ದೊರೆಯುತ್ತವೆ. ಆದ್ದರಿಂದ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆಗಳನ್ನು ತೆಗೆಯಬಹುದು ಎಂದರು.ಮಣ್ಣಿನ ಪರೀಕ್ಷೆಯಿಂದ ತಮ್ಮ ಭೂಮಿಯ ಮಣ್ಣಿನ ವಿವರ ಪೋಷಕಾಂಶಗಳ ಲಭ್ಯತೆ ಮತ್ತು ಅವುಗಳ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ. ಮಣ್ಣಿನ ಪರೀಕ್ಷೆಗಳ ಆಧಾರಿತದ ಮೇಲೆ ಗೊಬ್ಬರಗಳನ್ನು ಬಳಸಲು ಅನುಕೂಲವಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ರೈತರು ಇದ್ದರು.
-----30ವೈಡಿಆರ್4: ವಡಗೇರಾ ತಾಲೂಕಿನ ಹಯ್ಯಾಳ ಬಿ. ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮಣ್ಣು ಪರೀಕ್ಷೆ ಮಾಡಿಸಿಕೊಂಡ ರೈತರಿಗೆ ಮಣ್ಣಿನ ಆರೋಗ್ಯ ತಪಾಸಣೆ ಚೀಟಿಗಳನ್ನು ವಿತರಿಸಲಾಯಿತು.