ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು: ಸುನೀಲ್ ಕುಮಾರ್

KannadaprabhaNewsNetwork |  
Published : Nov 22, 2025, 02:15 AM IST
 ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಕರುಗುಂದದ ದಿವಾಕರ ಗೌಡ ಅವರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ  ರೈತ ಪಾಠ ಶಾಲೆ ಹಾಗೂ ನೈಸರ್ಗಿಕ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾತಿಯ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು ಎಂದು ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಸಲಹೆ ನೀಡಿದರು.

- ಕರುಗುಂದ ದಿವಾಕರ ಗೌಡರ ಜಮೀನಿನಲ್ಲಿ ರೈತ ಪಾಠ ಶಾಲೆ, ನೈಸರ್ಗಿಕ ಕೃಷಿ ಅಭಿಯಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು ಎಂದು ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಸಲಹೆ ನೀಡಿದರು.

ಬುಧವಾರ ಕಡಹಿನಬೈಲು ಗ್ರಾಪಂ ಕರುಗುಂದದ ದಿವಾಕರ ಗೌಡರ ಜಮೀನಿನಲ್ಲಿ ಕೃಷಿ ಇಲಾಖೆ ಆಶ್ರಯದಲ್ಲಿ ನಡೆದ ರೈತ ಪಾಠ ಶಾಲೆ ಹಾಗೂ ನೈಸರ್ಗಿಕ ಕೃಷಿ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲೆ ಕಾಫಿ ಬೆಳೆಗೆ ಹೆಸರುವಾಸಿ. ಈ ಭಾಗದಲ್ಲಿ ಭತ್ತ, ಅಡಕೆ, ಕಾಫಿ ,ತೆಂಗು, ಕಾಳು ಮೆಣಸು ಬೆಳೆ ಬೆಳೆಯಬಹುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ವಾಣಿ ನರೇಂದ್ರ ಮಾತನಾಡಿ, ರೈತರು ಕೃಷಿ ಇಲಾಖೆಯಿಂದ ಉತ್ತಮ ಗುಣಮಟ್ಟದ ಭತ್ತದ ಬೀಜ ಪಡೆಯಬೇಕು. ಕಾಲ,ಕಾಲಕ್ಕೆ ಕೃಷಿ ಇಲಾಖೆ ಮಾರ್ಗದರ್ಶನ, ಸಲಹೆ ಪಡೆಯಬೇಕು ಎಂದರು.

ಇನ್ನೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿ,ನರಸಿಂಹರಾಜಪುರ ತಾಲೂಕು ಭತ್ತದ ಕಣಜ ಎಂದೇ ಹೆಸರು ಪಡೆದಿದೆ. ಇಲ್ಲಿನ ಮೂಲ ಬೆಳೆಯೇ ಭತ್ತವಾಗಿದೆ. ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಪಡೆದು ಕೃಷಿ ಮಾಡಿದರೆ ಅಧಿಕ ಬೆಳೆ ಬೆಳೆಯಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಕೃಷಿ ಇಲಾಖೆಯ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ಸಿಬ್ಬಂದಿಗಳಾದ ರಂಜಿತ ಹಾಗೂ ಪವನ ಮಣ್ಣು ಪರೀಕ್ಷೆಯಲ್ಲಿ ಮಣ್ಣು ತೆಗೆಯುವ ವಿಧಾನ ಹಾಗೂ ಮಣ್ಣು ಪರೀಕ್ಷೆಗೆ ಕಳಿಸುವ ರೀತಿಯ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಕರುಗುಂದ ದಿವಾಕರ ಗೌಡ, ಕೆ.ಸಿ.ಜಗದೀಶ್, ಚಂದ್ರೇಗೌಡ, ಆಲಂದೂರಿನ ರೈತರಾದ ಎ.ಪಿ.ಅಂಬರೀಶ್, ಸುರೇಶ್, ಎಲಿಯಾಸ್, ನರೇಂದ್ರ, ಇಂದ್ರಮ್ಮ, ಪವಿತ್ರ, ಶಿಲ್ಪ, ಉಪೇಂದ್ರ, ವೆಂಕಟೇಶ್, ಕೃಷಿ ಸಖಿ ಪ್ರೀತಿ ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ದೈಹಿಕ ಕ್ರೀಡೆಯ ಜೊತೆಗೆ ಬೌದ್ಧಿಕ ಕ್ರೀಡೆಗೂ ಒತ್ತು ನೀಡಿ: ಶಾಸಕ ಸುಬ್ಬಾರೆಡ್ಡಿ
ಸೈಬರ್ ವಂಚನೆಗಳ ತಡೆಯಲು ಕೆನರಾ ಬ್ಯಾಂಕ್‌ ಆದ್ಯತೆ