ರೈತರು ವಾರ್ಷಿಕ ಸರಾಸರಿ ಆದಾಯ ಹೆಚ್ಚಿಸಿಕೊಳ್ಳಬೇಕು-ಮಾರುತಿ

KannadaprabhaNewsNetwork |  
Published : Jun 29, 2026, 02:30 AM IST
ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ರೈತರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ರೈತರು ಜಮೀನನ್ನು ಖಾಲಿ ಬಿಡದೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಲಾಭದಾಯಕ ಬೆಳೆಗಳಲ್ಲೊಂದಾದ, ಪಲ್ಪವುಡ್ ಸಸಿಗಳನ್ನು ನೆಟ್ಟು ಬೆಳೆಸುವುದರೊಂದಿಗೆ ತಮ್ಮ ವಾರ್ಷಿಕ ಸರಾಸರಿ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕುಮಾರಪಟ್ಟಣ ಗ್ರಾಸಿಂ ಇಂಡಸ್ಟ್ರೀಸ್‌ನ ಮರ ಸಂಗ್ರಹ ಹಾಗೂ ಸಸ್ಯ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಾಧಿಕಾರಿ ಮಾರುತಿ ಪಾಟೀಲ್‌ ಹೇಳಿದರು.

ಕುಮಾರಪಟ್ಟಣ: ರೈತರು ಜಮೀನನ್ನು ಖಾಲಿ ಬಿಡದೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಲಾಭದಾಯಕ ಬೆಳೆಗಳಲ್ಲೊಂದಾದ, ಪಲ್ಪವುಡ್ ಸಸಿಗಳನ್ನು ನೆಟ್ಟು ಬೆಳೆಸುವುದರೊಂದಿಗೆ ತಮ್ಮ ವಾರ್ಷಿಕ ಸರಾಸರಿ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕುಮಾರಪಟ್ಟಣ ಗ್ರಾಸಿಂ ಇಂಡಸ್ಟ್ರೀಸ್‌ನ ಮರ ಸಂಗ್ರಹ ಹಾಗೂ ಸಸ್ಯ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಾಧಿಕಾರಿ ಮಾರುತಿ ಪಾಟೀಲ್‌ ಹೇಳಿದರು.

ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರಪಟ್ಟಣಂ ಗ್ರಾಸಿಯಂ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ಬೆಳೆಸಿರುವ ನೀಲಗಿರಿ, ಸರ್ವೇ ಪ್ಲಾಟ್‌ನಲ್ಲಿ ಏರ್ಪಡಿಸಿದ್ದ, ನೀಲಗಿರಿ ಮತ್ತು ಸರ್ವೇ ಗಿಡಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಣ್ಣಿನ ಗುಣಧರ್ಮ ಹಾಗೂ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ, ಹೆಚ್ಚಿನ ಇಳುವರಿ ನೀಡುವ ಗುಣಮಟ್ಟದ ಸಸಿಗಳನ್ನು ನಾವು ರೈತರಿಗೆ ಉಚಿತವಾಗಿ ವಿತರಿಸುತ್ತಿದ್ದೇವೆ. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. "ರೈತರು ಯಾವಾಗಲೂ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಕೃಷಿ ಮಾಡಬೇಕು. ಕೃಷಿ ಅರಣ್ಯದಜೊತೆಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ದೇಸಿ ತಳಿಯ ಹಸು, ಮೇಕೆ, ಕುರಿ ಹಾಗೂ ಕೋಳಿ ಸಾಕಾಣಿಕೆಯನ್ನು ಕೃಷಿಯೊಂದಿಗೆ ಸಂಯೋಜಿಸಿ ಜೀವನೋಪಾಯವನ್ನು ರೂಪಿಸಿಕೊಳ್ಳಬೇಕು. ಏಕಬೆಳೆ ಪದ್ಧತಿಯಿಂದ ನಷ್ಟ ಅನುಭವಿಸುವುದಕ್ಕಿಂತ ಸಮಗ್ರ ಕೃಷಿ ಅರಣ್ಯ ಬೆಳೆಗಳಾದ ಸರ್ವೇ, ನೀಲಗಿರಿ, ಹೆಬ್ಬೇವು, ತೇಗ ಮುಂತಾದ ಮರಗಳನ್ನು ಬೆಳೆಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದರು.ಸಾನಿಧ್ಯವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬ ರೈತರೂ ತಮ್ಮಜಮೀನಿನ ಖಾಲಿ ಪ್ರದೇಶಕ್ಕೆ ಸೂಕ್ತವಾದ ಗಿಡ-ಮರಗಳನ್ನು ಬೆಳೆಸಿ ಆರ್ಥಿಕ ಸ್ವಾವಲಂಬಿಗಳಾಗಲು ಮುಂದಾಗಬೇಕೆಂದು ಜಾಗೃತಿ ಮೂಡಿಸಿದರು.ಪ್ರಗತಿಪರ ರೈತರನ್ನು ಅಭಿನಂದಿಸಿದ ಗ್ರಾಸಿಂ ಇಂಡಸ್ಟ್ರೀಸ್‌ನ ಅಧ್ಯಕ್ಷರು ಹಾಗೂ ಮುಖ್ಯಸ್ಥರಾದ ಸೌಮ್ಯಕಾಂತ್ ಮೋಹಂತಿ ಮಾತನಾಡಿ, ಇಂದಿನ ಹವಾಮಾನ ವೈಪರಿತ್ಯಗಳಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಪರಿಸ್ಥಿತಿಗಳಲ್ಲಿಯೂ ಸ್ಥಿರ ಆದಾಯವನ್ನು ಪಡೆಯಲು ರೈತರು ಕೃಷಿ ಅರಣ್ಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.

ಇಂಡಸ್ಟ್ರೀಸ್‌ ಉಪಾಧ್ಯಕ್ಷರಾದ ಶುಭಾಷ್‌ಕುಮಾರ್ ಶರ್ಮ ಮಾತನಾಡಿ, ರೈತರು ಬೆಳೆಸಿದ ಮರಗಳನ್ನು ನಾವು ಮಾರುಕಟ್ಟೆ ದರದಲ್ಲಿ ಖರೀದಿಸುತ್ತೇವೆ. ಇದರಿಂದ ರೈತರಿಗೆ ಸ್ಥಿರ ಆದಾಯ ದೊರೆಯುವುದರ ಜೊತೆಗೆ ಕಾರ್ಖಾನೆಗೆ ಅಗತ್ಯವಾದ ಕಚ್ಚಾ ವಸ್ತುವು ಲಭ್ಯವಾಗುತ್ತದೆ ಎಂದರು. ಹಾವೇರಿ, ಬಳ್ಳಾರಿ, ವಿಜಯನಗರ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ರೈತರು ಕೇಳಿದ ಹಲವಾರು ಪ್ರಶ್ನೆಗಳಿಗೆ ಸಸ್ಯ ಸಂಪನ್ಮೂಲ ಅಭಿವೃದ್ಧಿ ಮುಖ್ಯಾಧಿಕಾರಿ ಮಾರುತಿ ಪಾಟೀಲ್, ಅರಣ್ಯ ಕೃಷಿ ವಿಜ್ಞಾನಿ ಡಾ. ರಾಮಕೃಷ್ಣ ಹೆಗಡೆ ಅವರುಗಳು ನೀಲಗಿರಿ ಮತ್ತು ಸರ್ವೆ ಮರಗಳಿಂದ ಕೈಗಾರಿಕೆಗಳ ಮೂಲಕ ಉತ್ಪಾದನೆಯಾಗುವ ಉತ್ಪನ್ನಗಳ ಹಾಗೂ ಅವುಗಳ ಉಪಯೋಗ ಹಾಗೂ ಲಾಭದ ಬಗ್ಗೆ ಛಾಯಾ ಚಿತ್ರಗಳ ಪ್ರದರ್ಶನದ ಮೂಲಕ, ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಜ್ಞಾನಿಗಳು ಕೂಲಂಕಷವಾಗಿ ಚರ್ಚಿಸಿ ಉತ್ತರಿಸಿದರು. ಮಂಜುನಾಥ ಶಿಡೆನೂರ ರೈತಗೀತೆ ಹಾಡಿದರು. ಸುರೇಶ್ ಬುಳ್ಳಜ್ಜನವರ ಕಾರ್ಯಕ್ರಮ ನಿರೂಪಿಸಿದರು. ಎನ್.ಪಿ. ಪಾಟೀಲ್‌ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಾರಂಗ 100ನೇ ಮನೆ ಶತಸ್ಕೃತಿ ಹಸ್ತಾಂತರ
ಆರೋಗ್ಯವಂತ ಮಕ್ಕಳು ಭವಿಷ್ಯದ ನಾಯಕರು: ಯಶ್ ಪಾಲ್