ರೈತರು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ: ಶಿವಪ್ಪ ಅಂಕದ

KannadaprabhaNewsNetwork |  
Published : Dec 24, 2025, 02:45 AM IST
23ಎಂಡಿಜಿ2. ಮುಂಡರಗಿ ಪಟ್ಟಣದ ಪಕ್ಕೀರಪ್ಪ ಬಳ್ಳಾರಿ ಅವರ ಜಮೀಮಿನಲ್ಲಿ ಮಂಗಳವಾರ ಕೃಷಿ ಇಲಾಖೆ ಮುಂಡರಗಿ ಹಾಗೂ ತಾಲೂಕು ಕೃಷಿಕ ಸಮಾಜದ ವತಿಯಿಂದ ಆತ್ಮ ಯೋಜನೆಯಡಿಯಲ್ಲಿ ಜರುಗಿದ ರೈತ ದಿನಾಚರಣೆ ಕಾರ್ಯಕ್ರಮ. | Kannada Prabha

ಸಾರಾಂಶ

ಸರ್ಕಾರ ರೈತರು ಸ್ಪಿಂಕ್ಲರ್ ನೀರಾವರಿ ಮಾಡಲು ಪೈಪು ಹಾಗೂ ಇತರೆ ಸಲಕರಣೆಗಳನ್ನು ನೀಡುತ್ತಿದೆ. ಜಮೀನುಗಳಲ್ಲಿ ಕೃಷಿ ಹೊಂಡ, ಬದುವು ನಿರ್ಮಾಣ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು.

ಮುಂಡರಗಿ: ಸರ್ಕಾರ ರೈತರಿಗಾಗಿ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪ ಅಂಕದ ತಿಳಿಸಿದರು.

ಮಂಗಳವಾರ ಕೃಷಿ ಇಲಾಖೆ, ಮುಂಡರಗಿ ಹಾಗೂ ತಾಲೂಕು ಕೃಷಿಕ ಸಮಾಜದ ವತಿಯಿಂದ ಆತ್ಮ ಯೋಜನೆಯಡಿಯಲ್ಲಿ ಪಟ್ಟಣದ ಫಕ್ಕೀರಪ್ಪ ಬಳ್ಳಾರಿ ಅವರ ಜಮೀನಿನಲ್ಲಿ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ರೈತರು ಸ್ಪಿಂಕ್ಲರ್ ನೀರಾವರಿ ಮಾಡಲು ಪೈಪು ಹಾಗೂ ಇತರೆ ಸಲಕರಣೆಗಳನ್ನು ನೀಡುತ್ತಿದೆ. ಜಮೀನುಗಳಲ್ಲಿ ಕೃಷಿ ಹೊಂಡ, ಬದುವು ನಿರ್ಮಾಣ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ಮಾಜಿ ಪ್ರಧಾನಿ ದಿ. ಚೌಧರಿ ಚರಣಸಿಂಗ್ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ರೈತರು ಏಕಬೆಳೆ ಪದ್ಧತಿ ಅನುಸರಿಸದೇ ಅಕ್ಕಡಿ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬೆಳೆಯಬೇಕು. ಸಾವಯವ ಗೊಬ್ಬರನ್ನು ತಾವೇ ಸ್ವತಃ ತಯಾರಿಸಿ ಬಳಕೆ ಮಾಡುವುದರಿಂದ ವ್ಯವಸಾಯದ ಖರ್ಚನ್ನು ಕಡಿಮೆಗೊಳಿಸಬಹುದು ಎಂದರು.

ಅವಿನಾಶ ಮಹಾಮನಿ ಮಾತನಾಡಿ, ಸಾವಯವ ಕೃಷಿಯನ್ನು ಅಳವಡಿಸಿಕೊಂಡರೆ ಮಾತ್ರ ಮಣ್ಣನ್ನು ಜೀವಂತವಾಗಿಟ್ಟುಕೊಳ್ಳಬಹುದು. ಜೋಳ ಮತ್ತು ಕಡಲೆ ಬೆಳೆಯ ಸಸ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ಶರಣಪ್ಪ ಮಲ್ಲಾಪೂರ ಮಾತನಾಡಿದರು. ಜಮೀನಿನ ಮಾಲೀಕ ಫಕ್ಕೀರಪ್ಪ ಬಳ್ಳಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2025ನೇ ಸಾಲಿನಲ್ಲಿ ಕೃಷಿ ವಿಶ್ವವಿದ್ಯಾಲಯದಿಂದ ಕೊಡಮಾಡುವ ಶೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾದ ಗರಡಪ್ಪ ಜಂತ್ಲಿ, 2024- 25ನೇ ಸಾಲಿನ ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ಶರಣಪ್ಪ ಪವಾಡಿ, ರಾಘವೇಂದ್ರ ಕುರಿಯವರ, ಅನ್ನಕ್ಕ ಕೊರ್ಲಹಳ್ಳಿ, ಹಾಲೇಶ ಲಿಂಗಶೆಟ್ಟರ್, ಮಲ್ಲನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಶರತ ಕುರಿ, ಶಿವಾನಂದ ಇಟಗಿ, ಶಿವಪ್ಪ ಚಿಕ್ಕಣ್ಣವರ, ಮುಂಡರಗಿ ಮತ್ತು ಡಂಬಳ ರೈತ ಸಂಪರ್ಕ ಕೇಂದ್ರದ ವೀರೇಶ, ಎಸ್.ಬಿ. ರಾಮೇನಹಳ್ಳಿ ಉಪಸ್ಥಿತರಿದ್ದರು. ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಗೌರಿಶಂಕರ ಸಜ್ಜನರ, ಸಹಾಯಕ ತಾಂತ್ರಿಕ ವ್ಯವಸ್ತಾಪಕಿ ಅಕ್ಕಮಹಾದೇವಿ ಸಲೂಡಿ, ಉಮೇಶ ಬಳ್ಳಾರಿ, ಮುತ್ತಣ್ಣ ಬಳ್ಳಾರಿ, ಕನಕಪ್ಪ ಕುರಿ, ಶಿವಪ್ಪ ಬಳ್ಳಾರಿ, ಧಶರತ ಕುರಿ, ರಾಮಣ್ಣ ಉಳ್ಳಾಗಡ್ಡಿ, ಈಶಪ್ಪ ಕುಂಬಾರ, ಶರಣಪ್ಪ ಚನ್ನಳ್ಳಿ, ಯಕ್ಲಾಸಪೂರ, ಮುಂಡರಗಿ, ಹೆಸರೂರ, ಬೂದಿಹಾಳ, ಮುಂಡರಗಿ ಸುತ್ತಮುತ್ತಲಿನ ರೈತರು, ಕೃಷಿ ಸಖಿಯರು ಮತ್ತು ರೈತ ಮಹಿಳೆಯರು ಉಪಸ್ಥಿತರಿದ್ದರು, ಗುಡದಪ್ಪ ಲಿಂಗಶೆಟ್ಟರ ಸ್ವಾಗತಿಸಿ, ನಿರೂಪಿಸಿದರು. ಗೌರಿಶಂಕರ ಸಜ್ಜನರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ