ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಬೋರಾಪುರ ಗ್ರಾಮದ ಬಸವರಾಜು ಜಮೀನಿನಲ್ಲಿ ಕೃಷಿ ಭಾಗ್ಯ ಯೋಜನೆ ಅಡಿ ನಿರ್ಮಿಸಿರುವ ಕೃಷಿ ಹೊಂಡ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಆಧಾರದ ಮೇಲೆ ಕೃಷಿ ಹೊಂಡ ನಿರ್ಮಿಸಿಕೊಳ್ಳಬೇಕು ಎಂದರು.
ಕೃಷಿ ಹೊಂಡ ನಿರ್ಮಾಣಕ್ಕೆ ಮುನ್ ಕೃಷಿ ಇಲಾಖೆಯ ಸಲಹೆಯಂತೆ ಕಡ್ಡಾಯವಾಗಿ ಐದು ಪಟ್ಟುಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಬದುಗಳ ನಿರ್ಮಾಣ ಹಾಗೂ ಭೂಮಿಯಿಂದ ನೀರು ಹಿಂಗುವುದನ್ನು ತಡೆಗಟ್ಟಲು ಪಾಲಿಥಿನ್ ಹೊದಿಕೆ ಅಳವಡಿಸಿಕೊಳ್ಳಬೇಕು ಎಂದರು.ಕೃಷಿ ಹೊಂಡ ನಿರ್ಮಾಣಕ್ಕೆ ಕಡ್ಡಾಯವಾಗಿ ಐದು ಪಟ್ಟುಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಬದುಗಳ ನಿರ್ಮಾಣ ಹಾಗೂ ಭೂಮಿಯಿಂದ ನೀರು ಹಿಂಗುವುದನ್ನು ತಡೆಗಟ್ಟಲು ಪಾಲಿಥಿನ್ ಹೊದಿಕೆ ಅಳವಡಿಸಿಕೊಳ್ಳಬೇಕು. ಮನುಷ್ಯರು ಮತ್ತು ಕಾಡುಪ್ರಾಣಿಗಳು ಪ್ರವೇಶ ಮಾಡಿ ಸಾವು-ನೋವುಗಳು ಉಂಟಾಗದಂತೆ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಬೇಕು ಎಂದರು.
ಭತ್ತದ ಬೆಳೆಗೆ ಕಾಡುತ್ತಿರುವ ಕೀಟಗಳ ಹಾವಳಿ ಹತೋಟಿಗೆ ಬರುತ್ತದೆ. ಅಲ್ಲದೇ, ಕಳೆ ನಿರ್ವಹಣೆ ಯಾಂತ್ರಿಕ ನಾಟಿ ಪದ್ಧತಿಯಿಂದ ಸುಲಭವಾಗಿ ಮಾಡಬಹುದು. ರೈತರು ಸರ್ಕಾರ ಕೃಷಿ ಇಲಾಖೆ ಮೂಲಕ ಅನುಷ್ಠಾನಗೊಳಿಸಿರುವ ಕೃಷಿ ಯಾಂತ್ರಿಕ ಯೋಜನೆ ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.