ರೈತರು ಹಸಿರು ಟವೆಲ್ ಸ್ವಾರ್ಥಕ್ಕಾಗಿ ಬಳಸಬೇಡಿ

KannadaprabhaNewsNetwork |  
Published : Jul 23, 2024, 12:31 AM IST
೨೨ಕೆಎಲ್‌ಆರ್-೩ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೋಲಾರದ ಕುವೆಂಪು ಬಡಾವಣೆಯ ರೈತ ಸಂಘದ ಕಛೇರಿಯಲ್ಲಿ ೪೪ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ದಸಂಸ ರಾಜ್ಯ ಮುಖಂಡ ಟಿ.ವಿಜಿಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ದೇಶದಲ್ಲಿ ಎರಡು ವರ್ಗಗಳನ್ನು ನೋಡಬಹುದಾಗಿದೆ ಒಂದು ದುಡಿಯುವ ವರ್ಗ, ಇನ್ನೊಂದು ಸೋಮಾರಿಯ ವರ್ಗ. ರೈತರು ದುಡಿಯುವ ವರ್ಗವಾಗಿದ್ದಾರೆ ದೇಶದ ಬೆನ್ನೆಲುಬು ಕೂಡ ಆಗಿದ್ದಾರೆ. ರೈತರು ಒಗ್ಗಟ್ಟಾದರೆ ಇಡೀ ಅಧಿಕಾರಿ ವರ್ಗ ನಿಮ್ಮ ಬಳಿ ಬರುತ್ತದೆ. ಅಂತಹ ಶಕ್ತಿ ಬೆಳಸಿಕೊಳ್ಳಿ

ಕನ್ನಡಪ್ರಭ ವಾರ್ತೆ ಕೋಲಾರಹಸಿರು ಟವೆಲ್‌ಗೆ ಸಾಕಷ್ಟು ಇತಿಹಾಸವಿದೆ, ತ್ಯಾಗ ಬಲಿದಾನದ ನಡುವೆ ರೈತರಿಗೆ ಹಾಗೂ ಬಡವರ ಎಷ್ಟೋ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸದೆ ಜನರ ಹಿತಕ್ಕೆ ಬಳಕೆಯಾಗುವಂತೆ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ದಸಂಸ ರಾಜ್ಯ ಮುಖಂಡ ಟಿ. ವಿಜಿಕುಮಾರ್ ತಿಳಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಕುವೆಂಪು ಬಡಾವಣೆಯ ರೈತ ಸಂಘದ ಕಚೇರಿಯಲ್ಲಿ ೪೪ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಹಣಕ್ಕಾಗಿ ಟವೆಲ್‌ ಬಳಸಬೇಡಿ

ನಿಜವಾದ ರೈತ ಸಂಘಟನೆ ಯಾವತ್ತೂ ರೈತ ವಿರೋಧಿ ಕೆಲಸ ಮಾಡಲ್ಲ. ಕೇವಲ ಹಣಕ್ಕಾಗಿ ಹಸಿರು ಟವೆಲ್ ಬಳಕೆಯಾಗಬಾರದು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹಸಿರು ಟವೆಲ್‌ ಬಳಕೆಯಾಗಬೇಕು ಎಂದು ತಿಳಿಸಿದರು.ದೇಶದಲ್ಲಿ ಎರಡು ವರ್ಗಗಳನ್ನು ನೋಡಬಹುದಾಗಿದೆ ಒಂದು ದುಡಿಯುವ ವರ್ಗ, ಇನ್ನೊಂದು ಸೋಮಾರಿಯ ವರ್ಗ. ರೈತರು ದುಡಿಯುವ ವರ್ಗವಾಗಿದ್ದಾರೆ ದೇಶದ ಬೆನ್ನೆಲುಬು ಕೂಡ ಆಗಿದ್ದಾರೆ. ರೈತರು ಒಗ್ಗಟ್ಟಾದರೆ ಇಡೀ ಅಧಿಕಾರಿ ವರ್ಗ ನಿಮ್ಮ ಬಳಿ ಬರುತ್ತದೆ. ಅಂತಹ ಶಕ್ತಿ ಬೆಳಸಿಕೊಳ್ಳಿ ರೈತ ಸಂಘಟನೆ ಕೂಡ ಸಮಾನತೆಯನ್ನು ಬಯಸುವುದಾಗಿದ್ದು ರೈತ ಸಂಘವೇ ದೇಶದ ಮುಂದಿನ ಶಕ್ತಿಯಾಗಿ ಬೆಳೆಯಬೇಕು ಎಂದು ಆಶಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ಉಪನ್ಯಾಸಕ ಅರಿವು ಶಿವಪ್ಪ, ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಉಪನ್ಯಾಸಕ ಜಯರಾಮ್, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್, ಕಾರ್ಯಾಧ್ಯಕ್ಷ ರಮೇಶ್, ಜಿಲ್ಲಾ ಮುಖಂಡರಾದ ಪ್ರಭಾಕರ್, ಬೈಚೇಗೌಡ, ನರಸಿಂಹಯ್ಯ, ತಾಲೂಕು ಅಧ್ಯಕ್ಷರಾದ ಮಂಜುನಾಥ್, ವೆಂಕಟಸ್ವಾಮಿ, ತಿಮ್ಮರೆಡ್ಡಿ, ಸುಬ್ರಮಣಿ, ನಾಗಪ್ಪ, ಮಹಿಳಾ ಮುಖಂಡರಾದ ರಾಧಮ್ಮ, ಭಾರತಮ್ಮ ಇದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ