ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ವಡ್ಡರಹಳ್ಳಿ ಡೈರಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸಂಘದ ಮೇಲಂತಸ್ಥಿನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಸಹಕಾರ ಸಂಘಗಳು ಎಂದರೆ ಎಲ್ಲರೂ ಪರಸ್ಪರ ಕೈಜೋಡಿಸಿ ಸಂಘವನ್ನು ಅಭಿವೃದ್ಧಿಪಡಿಸುವುದು. ಸಂಘಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಿದ್ದರೆ ಅವುಗಳನ್ನು ಸರಿಪಡಿಸಿಕೊಂಡು ಸಂಘಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೆಲಸ ಮಾಡಬೇಕು ಎಂದು ತಿಳಿಸಿದರು.ಹೈನುಗಾರಿಕೆ ರೈತನ ಬದುಕಿನ ಅವಿಭಾಜ್ಯ ಅಂಗ. ರೈತರು ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿಯ ಜತೆಯಲ್ಲಿ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡು ಆರ್ಥಿಕವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಹೈನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಣ್ಣಿಸಿದರು.
ಡೈರಿ ಅಧ್ಯಕ್ಷ ಟಿ.ಸ್ವಾಮೀಗೌಡ ಮಾತನಾಡಿ, ಡೈರಿಯಲ್ಲಿ 98 ಸಾವಿರ ಬೋನಸ್ ಇದ್ದು, ಶೀಘ್ರ ವಿತರಣೆ ಮಾಡಲಾಗುವುದು, ಸಭಾಂಗಣ ನಿರ್ಮಾಣಕ್ಕೆ ಶಾಸಕರ ಬಳಿ ಅನುದಾನಕ್ಕೆ ಬೇಡಿಕೆ ಇಡಲಾಗಿದ್ದು, 5 ಲಕ್ಷ ರು. ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಉಷಾ, ಡೈರಿ ಉಪಾಧ್ಯಕ್ಷ ಶಿವಪ್ಪ, ನಿರ್ದೇಶಕರಾದ ವಿ.ಎಸ್.ನಿಂಗೇಗೌಡ, ಬಚ್ಚೇಗೌಡ, ಕಾಳೇಗೌಡ, ಮಂಚಮ್ಮ,ಲತಾ, ಕಾಳಯ್ಯ, ಕಾರ್ಯದರ್ಶಿ ವಿ.ಕೆ.ಗೋವಿಂದ ರಾಜು, ಯ.ಚಿಕ್ಕೆಗೌಡ, ಜವರೇಗೌಡ, ಗವೀಗೌಡ, ಸತ್ಯಪ್ಪ, ಮಾ.ಕಾಳೇಗೌಡ, ದಾಸಶೆಟ್ಟಿ, ಕಾಳೇಗೌಡ, ಮಂಚೇಗೌಡ, ಎನ್.ಸ್ವಾಮಿಗೌಡ, ಕಾಳಯ್ಯ, ಪರೀಕ್ಷ ಸತೀಶ್ ಕುಮಾರ್ ಸೇರಿ ಹಲವರು ಹಾಜರಿದ್ದರು.