ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ - ರೇಷ್ಮೆನಗರಿಯಲ್ಲಿ ಬಿತ್ತನೆಗೆ ಭೂಮಿ ಸಿದ್ಧತೆ, ಬಿತ್ತನೆ ಕಾರ್ಯ ಪ್ರಗತಿಯಲ್ಲಿ
ಕನ್ನಡಪ್ರಭ ವಾರ್ತೆ ರಾಮನಗರ
ಮಳೆ ಕೊರತೆಯಿಂದಾಗಿ ಕಳೆದ ವರ್ಷ ಜಿಲ್ಲೆಯ 5 ತಾಲೂಕುಗಳಲ್ಲಿ ಬರ ಆವರಿಸಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.ಕಳೆದ 15 ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ವಾಡಿಕೆ ಪ್ರಮಾಣವನ್ನು ತಲುಪಿದೆ. ಭೂಮಿಯಲ್ಲಿ ತೇವಾಂಶ ಇರುವುದರಿಂದ ಕೃಷಿ ಚಟುವಚಿಕೆ ಕಾರ್ಯ ಚುರುಕು ಪಡೆಯಲಿದೆ.
ಕೊರತೆ ನೀಗಿಸಿದ ಸಾಧಾರಣ ಮಳೆ:
ಜಿಲ್ಲೆಯಲ್ಲಿ ಜನವರಿ 1 ರಿಂದ ಆಗಸ್ಟ್ 1ರವರೆಗೆ 333 ಮಿ.ಮೀಟರ್ ವಾಡಿಕೆ ಮಳೆಗೆ 339 ಮಿ.ಮೀಟರ್ ವಾಸ್ತವ ಮಳೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಶೇ.2ರಷ್ಟು ಹೆಚ್ಚುವರಿ ಮಳೆ ಆಗಿದೆ. ಇನ್ನು ಹಾರೋಹಳ್ಳಿ ತಾಲೂಕು 24 ರಷ್ಟು ಮಳೆ ಕೊರತೆ ಅನುಭವಿಸಿದೆ. ಚನ್ನಪಟ್ಟಣ ತಾಲೂಕು ಶೇ.3ರಷ್ಟು ಹಾಗೂ ಕನಕಪುರ ತಾಲೂಕು ಶೇ.14ಮಳೆ ಕೊರತೆ ಅನುಭವಿಸಿದೆ. ಬಾಕಿ ಉಳಿದಂತೆ ರಾಮನಗರ ತಾಲೂಕಿನಲ್ಲಿ ಶೇ.10ರಷ್ಟು ಮಳೆ ಹೆಚ್ಚಾಗಿದೆ. ಮಾಗಡಿ ತಾಲೂಕಿನ ಶೇ.13ರಷ್ಟು ಹೆಚ್ಚು ಮಳೆಯಾಗಿದೆ.
2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 91108 ಹೆಕ್ಟೇರ್ ಬಿತ್ತನೆ ಗುರಿ ನಿಗಧಿಪಡಿಸಿದ್ದು ಇದುವರೆವಿಗೂ ಒಟ್ಟು 41449 ಹೆಕ್ಟೇರ್ ಪ್ರದೇಶದಲ್ಲಿ ರಾಗಿ (36585 ಹೆ.) ಎಳ್ಳು-(900 ಹೆ.), ಅಲಸಂದೆ -(724 ಹೆ), ತೊಗರಿ -(1258 ಹೆ.) ಅವರೆ -(612 ಹೆ), ಹುರುಳಿ -(371 ಹೆ.), ನೆಲಗಡಲೆ -(301 ಹೆ.), ಹರಳು-(77 ಹೆ.), ಹುಚ್ಚೆಳ್ಳು (10 ಹೆ.), ಸಾಸಿವೆ (20 ಹೆ.) ಹಾಗೂ ಕಬ್ಬು (156 ಹೆ.) ಬಿತ್ತನೆಯಾಗಿದೆ. ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದರಿಂದ ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆಗೆ ಭೂಮಿ ಸಿದ್ಧತೆ ಹಾಗೂ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.ಬೆಳೆ ಪರಿಸ್ಥಿತಿ :
ರಸಗೊಬ್ಬರ ದಾಸ್ತಾನು ಮತ್ತು ವಿತರಣೆ
ಬಿತ್ತನೆ ಬೀಜ ದಾಸ್ತಾನು ಮತ್ತು ವಿತರಣೆ:
ಮುಂಗಾರು ಹಂಗಾಮಿಗೆ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲು ವಿವಿಧ ಬೆಳೆಗಳ ಒಟ್ಟು 2307 ಕ್ವಿಂಟಾಲ್ ಗಳಷ್ಟು ಗುರಿ ನಿಗಧಿಪಡಿಸಲಾಗಿದೆ. ಪ್ರಸ್ತುತ ತೊಗರಿ, ಅಲಸಂದೆ, ರಾಗಿ, ಭತ್ತ, ಮುಸುಕಿನಜೋಳ ಮತ್ತು ನೆಲಗಡಲೆ ಬೆಳೆಗಳ ಒಟ್ಟು 2069.3 ಕ್ವಿಂಟಾಲ್ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ಇದುವರೆಗೂ 1605.6 ಕ್ವಿಂಟಾಲ್ ವಿತರಣೆ ಮಾಡಲಾಗಿ 463.6 ದಾಸ್ತಾನು ಉಳಿಕೆಯಾಗಿದೆ. ಬಿತ್ತನೆ ಸಮಯಕ್ಕೆ ಹಾಗೂ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಮುಂದಿನ ದಿನಗಳಲ್ಲಿ ದಾಸ್ತಾನು ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.ಮಳೆ ಪ್ರಮಾಣ ಜನವರಿ 1 ರಿಂದ ಆಗಸ್ಟ್ 1ರ ಅಂತ್ಯಕ್ಕೆ (ಮಿ.ಮೀ)ತಾಲೂಕುವಾಡಿಕೆವಾಸ್ತವಶೇಕಡ
ಚನ್ನಪಟ್ಟಣ334.1325.6-3
ಕನಕಪುರ324.8277.9-14ಮಾಗಡಿ390.2442.513
ರಾಮನಗರ357.4392.110ಹಾರೋಹಳ್ಳಿ331.7253.5-24ಒಟ್ಟು3333392