ಕೃಷಿ ಮೇಳದ ಕೊನೆಯ ದಿನವೂ ರೈತರದ್ದೇ ಸದ್ದು!

KannadaprabhaNewsNetwork |  
Published : Sep 29, 2026, 02:00 AM IST
ಧಾರವಾಡ ಕೃಷಿ ಮೇಳದ ಕೊನೆಯ ದಿನವಾದ ಸೋಮವಾರ ಮಹಾಲಕ್ಷ್ಮೀ ಇಂಪ್ಲಿಮೆಂಟ್ಸ್‌ ಮಳಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಗ್ರಾಹಕರು ಭೇಟಿ ನೀಡಿದರು. | Kannada Prabha

ಸಾರಾಂಶ

ಕೃಷಿ ಮೇಳ-2026ಕ್ಕೆ ತೆರೆ ಬೀಳುವ ಮುನ್ನವೇ ಮೇಳದ ಆವರಣದಲ್ಲಿ ರೈತರ ಸಂಭ್ರಮ ಮತ್ತಷ್ಟು ಕಳೆಗಟ್ಟಿತ್ತು. ಅದರಲ್ಲೂ ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್‌ ಮಳಿಗೆಯಲ್ಲಿ ಕೊನೆಯ ದಿನವೂ ರೈತರು, ರೈತ ಮಹಿಳೆಯರು ಹಾಗೂ ಗಣ್ಯರ ಭೇಟಿ, ಸನ್ಮಾನ ಮತ್ತು ಕೃಷಿ ಯಂತ್ರೋಪಕರಣಗಳ ಬುಕ್ಕಿಂಗ್‌ ಗಮನ ಸೆಳೆಯಿತು.

ಧಾರವಾಡ:

ನಗರದಲ್ಲಿ ನಡೆದ ಕೃಷಿ ಮೇಳ-2026ಕ್ಕೆ ತೆರೆ ಬೀಳುವ ಮುನ್ನವೇ ಮೇಳದ ಆವರಣದಲ್ಲಿ ರೈತರ ಸಂಭ್ರಮ ಮತ್ತಷ್ಟು ಕಳೆಗಟ್ಟಿತ್ತು. ಅದರಲ್ಲೂ ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್‌ ಮಳಿಗೆಯಲ್ಲಿ ಕೊನೆಯ ದಿನವೂ ರೈತರು, ರೈತ ಮಹಿಳೆಯರು ಹಾಗೂ ಗಣ್ಯರ ಭೇಟಿ, ಸನ್ಮಾನ ಮತ್ತು ಕೃಷಿ ಯಂತ್ರೋಪಕರಣಗಳ ಬುಕ್ಕಿಂಗ್‌ ಗಮನ ಸೆಳೆಯಿತು.

ಕೃಷಿ ಮೇಳದ ಕೊನೆಯ ದಿನವಾದ ಭಾನುವಾರ ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್‌ ಮಳಿಗೆಗೆ ಹಲವು ರೈತ ಮುಖಂಡರು, ರೈತ ಮಹಿಳೆಯರು, ವಿವಿಧ ಸಂಘಟನೆಗಳ ಮುಖಂಡರು, ಸೈನಿಕರು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಮಾಹಿತಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಗಣ್ಯರು, ರೈತರನ್ನು ಸನ್ಮಾನಿಸಲಾಯಿತು.

ಯಂತ್ರಗಳಿಗೆ ರೈತರ ಒಲವು:

ಮೇಳದ ಕೊನೆಯ ದಿನವೂ ರೈತರ ಉತ್ಸಾಹ ಕುಗ್ಗಿರಲಿಲ್ಲ. ಹಲವು ರೈತರು ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್‌ನ ವಿವಿಧ ಕೃಷಿ ಉಪಕರಣಗಳನ್ನು ವೀಕ್ಷಿಸಿ, ತಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಯಂತ್ರೋಪಕರಣಗಳನ್ನು ಬುಕ್‌ ಮಾಡಿದರು. ಬುಕ್ಕಿಂಗ್‌ ಮಾಡಿದ ರೈತರಿಗೆ ಸಂಸ್ಥೆಯ ವತಿಯಿಂದ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.

ಕೃಷಿ ಕಾರ್ಮಿಕರ ಕೊರತೆ, ಸಮಯದ ಉಳಿತಾಯ ಹಾಗೂ ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಯಂತ್ರೋಪಕರಣಗಳ ಬಳಕೆಗೆ ರೈತರು ಹೆಚ್ಚಿನ ಒಲವು ತೋರುತ್ತಿರುವುದು ಮೇಳದಲ್ಲಿ ಕಂಡುಬಂತು.

ರೈತರೊಂದಿಗೆ ಆತ್ಮೀಯ ನಂಟು:

ಮೇಳದ ಕೊನೆಯ ದಿನ ಸಂಸ್ಥೆಯ ಸಿಬ್ಬಂದಿ ರೈತರೊಂದಿಗೆ ಆತ್ಮೀಯವಾಗಿ ಬೆರೆತು, ಅವರ ಅಭಿಪ್ರಾಯ ಹಾಗೂ ಅಗತ್ಯಗಳನ್ನು ಆಲಿಸಿದರು. ರೈತರಿಂದ ದೊರೆತ ಪ್ರೀತಿ, ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಸಂಸ್ಥೆಯ ಪ್ರತಿನಿಧಿಗಳು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮುಂದೆಯೂ ಮತ್ತಷ್ಟು ಕೊಡುಗೆ ನೀಡುವ ಸಂಕಲ್ಪ ವ್ಯಕ್ತಪಡಿಸಿದರು.

ರೈತರ ವಿಶ್ವಾಸವೇ ತಮ್ಮ ಸಂಸ್ಥೆಯ ಶಕ್ತಿ ಎಂಬ ಸಂದೇಶದೊಂದಿಗೆ ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್‌ ಮೇಳದ ಕೊನೆಯ ದಿನದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆ ವಿಸ್ತರಣೆ, ಮಾಲಿನ್ಯ ವಿರೋಧಿಸಿ 48 ಗಂಟೆ ಕೊಪ್ಪಳ ಬಂದ್ ಕರೆ
ಸುರಕ್ಷಿತ ಗರ್ಭಪಾತ, ಶ್ರವಣದೋಷ ತಡೆಗೆ ಅರಿವು ಅಗತ್ಯ: ಡಾ. ರಾಜೇಶ್