ಅಜೀಜಅಹ್ಮದ ಬಳಗಾನೂರ
ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಕೈಗಳು ರೂಪಿಸಿದ ಉತ್ಪನ್ನಗಳು ಕೃಷಿಮೇಳದ ವಿಶಾಲ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿವೆ. ಅಪರಾಧದ ಹಾದಿಯಿಂದ ದೂರವಾಗಿ ಕೌಶಲ್ಯ ಕಲಿತು, ದುಡಿಮೆಯ ಮೂಲಕ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಡುತ್ತಿರುವ ಕೈದಿಗಳ ಪರಿಶ್ರಮಕ್ಕೆ ಧಾರವಾಡ ಕೃಷಿಮೇಳ ಹೊಸ ವೇದಿಕೆಯಾಗಿ ಮಾರ್ಪಟ್ಟಿತು.
ಧಾರವಾಡದ ಕೇಂದ್ರ ಕಾರಾಗೃಹದ ವತಿಯಿಂದ ಕೃಷಿಮೇಳದಲ್ಲಿ ಸ್ಥಾಪಿಸಿರುವ ಕಾರಾಗೃಹ ಉತ್ಪನ್ನಗಳ ಮಳಿಗೆ ಜನರ ಗಮನ ಸೆಳೆದಿದ್ದು, ಟವೆಲ್, ಕರ್ಚೀಫ್, ಜ್ಯೂಟ್ ಬ್ಯಾಗ್, ವಿವಿಧ ಬಟ್ಟೆ ಹಾಗೂ ಕೈಮಗ್ಗದ ಸಾಮಗ್ರಿಗಳ ಜತೆಗೆ ಬೇಕರಿ ಉತ್ಪನ್ನಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ. 50ಕ್ಕೂ ಅಧಿಕ ಬಗೆಯ ವಸ್ತುಗಳನ್ನು ಮಳಿಗೆಯಲ್ಲಿ ಮಾರಾಟಕ್ಕಿಡಲಾಗಿದ್ದು, ನಾಲ್ಕು ದಿನಗಳಲ್ಲಿ ಪ್ರತಿದಿನ ಸರಾಸರಿ ₹40 ಸಾವಿರಕ್ಕೂ ಅಧಿಕ ವಹಿವಾಟು ನಡೆದಿದೆ. ಕೆಲ ಉತ್ಪನ್ನಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಗ್ರಾಹಕರ ಗಮನ ಸೆಳೆಯುತ್ತಿವೆ. ನಿರ್ದಿಷ್ಟ ಬಣ್ಣ, ವಿನ್ಯಾಸದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವೊಮ್ಮೆ ಗ್ರಾಹಕರು ಕೇಳಿದ ಉತ್ಪನ್ನಗಳ ಸಂಗ್ರಹವೇ ಖಾಲಿಯಾಗುವ ಪರಿಸ್ಥಿತಿಯೂ ಎದುರಾಗಿದೆ.ಗುಣಮಟ್ಟಕ್ಕೆ ಮೊದಲ ಆದ್ಯತೆ:
ಮೈಸೂರು ದಸರಾ ಸೇರಿದಂತೆ ವಿವಿಧ ಉತ್ಸವ ಹಾಗೂ ಮೇಳಗಳಲ್ಲಿ ಇವುಗಳಿಗೆ ಉತ್ತಮ ಬೇಡಿಕೆ ಸಿಕ್ಕಿದೆ. ಕೃಷಿಮೇಳದಲ್ಲಿ ಖರೀದಿಸಿದವರು ಬಳಿಕವೂ ದೂರವಾಣಿ ಮೂಲಕ ಉತ್ಪನ್ನಗಳನ್ನು ಕೇಳುತ್ತಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳಿಂದಲೂ ದೊಡ್ಡ ಪ್ರಮಾಣದ ಆರ್ಡರ್‌ಗಳು ಬರುತ್ತಿವೆ. ಕೈತಯಾರಿಕೆಯ ಉತ್ಪನ್ನಗಳಾಗಿರುವುದರಿಂದ ದೊಡ್ಡ ಬೇಡಿಕೆ ಬಂದಾಗ ಕಾಲಾವಕಾಶ ಪಡೆದು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ.
ಮೈಸೂರು ದಸರಾ ಸೇರಿದಂತೆ ಹಲವು ಮೇಳಗಳಲ್ಲಿ ಭಾಗವಹಿಸಿರುವ ಕಾರಾಗೃಹ ಉತ್ಪನ್ನಗಳ ಮಳಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಧಾರವಾಡ ಕೃಷಿಮೇಳದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ದೊರೆತ ಸ್ಪಂದನೆ, ಕೃಷಿ ಮೇಳಗಳಲ್ಲೂ ಇಂತಹ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಇದೆ ಎಂಬುದನ್ನು ತೋರಿಸಿದೆ.
ಶಿಕ್ಷೆಯ ಜತೆಗೆ ಬದುಕಿನ ಪಾಠ:
35 ಮಂದಿಗೆ ಅಕ್ಷರಾಭ್ಯಾಸ:
ಹೀಗೆ, ಗೋಡೆಗಳೊಳಗಿನ ಕೈಗಳಿಗೆ ಕೆಲಸ, ಮನಸ್ಸಿಗೆ ಚಟುವಟಿಕೆ, ಕಲಿಕೆಗೆ ಅವಕಾಶ ಮತ್ತು ಕಾಯಕಕ್ಕೆ ಮಾರುಕಟ್ಟೆ ಕಲ್ಪಿಸುವ ಮೂಲಕ ಶಿಕ್ಷೆಯ ಜತೆಗೆ ಪುನರ್ವಸತಿಯನ್ನೂ ಜೋಡಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿಮೇಳದಲ್ಲಿ ಜನರ ಮೆಚ್ಚುಗೆ ಗಳಿಸುತ್ತಿರುವ ಈ ಉತ್ಪನ್ನಗಳು, ತಪ್ಪು ಹೆಜ್ಜೆ ಇಟ್ಟ ಬದುಕುಗಳಿಗೆ ದುಡಿಮೆಯ ಮೂಲಕ ಹೊಸ ದಾರಿ ತೋರಿಸುತ್ತಿವೆ.
ರಘುಪತಿ, ಕೇಂದ್ರ ಕಾರಾಗೃಹ ಅಧೀಕ್ಷಕ ಧಾರವಾಡ