ಬಿಳಿಗಿರಿರಂಗನಬೆಟ್ಟದಲ್ಲಿ ಕಿತ್ತ ರಸ್ತೆ: ಜನ ಹೈರಾಣು

KannadaprabhaNewsNetwork |  
Published : Sep 29, 2026, 02:00 AM IST
ಬಿಳಿಗಿರಿರಂಗನ ಬೆಟ್ಟದ | Kannada Prabha

ಸಾರಾಂಶ

ಬಿಳಿಗಿರಿರಂಗನ ಬೆಟ್ಟದ ಸೋಮೇಶ್ವರಕೆರೆ ಕ್ರಾಸ್‌ನಿಂದ ಮೊರಾರ್ಜಿ ಶಾಲೆ, ರೇಷ್ಮೆ ಇಲಾಖೆ ಕಚೇರಿ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹದಗೆಟ್ಟಿದ್ದು ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ.

ಅಂಬಳೆ ವೀರಭದ್ರ ನಾಯಕ

ಕನ್ನಡಪ್ರಭ ವಾರ್ತೆ ಯಳಂದೂರು

ಬಿಳಿಗಿರಿರಂಗನ ಬೆಟ್ಟದ ಸೋಮೇಶ್ವರಕೆರೆ ಕ್ರಾಸ್‌ನಿಂದ ಮೊರಾರ್ಜಿ ಶಾಲೆ, ರೇಷ್ಮೆ ಇಲಾಖೆ ಕಚೇರಿ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹದಗೆಟ್ಟಿದ್ದು ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ.

ರಾಜ್ಯದ ಧಾರ್ಮಿಕ ಕ್ಷೇತ್ರ ಹಾಗೂ ಪರಿಸರ ಪ್ರೇಮಿಗಳ ನೆಚ್ಚಿನ ಪ್ರವಾಸದ ತಾಣವಾಗಿರುವ ಬಿಳಿಗಿರಂಗನ ಬೆಟ್ಟದ ರಸ್ತೆ ಕಿತ್ತು ಹೋಗಿ ವಾಹನ ಸವಾರರು, ದ್ವಿಚಕ್ರ ವಾಹನ ಚಾಲಕರು ಅಪಘಾತಕ್ಕೆ ಈಡಾಗುತ್ತಿದ್ದಾರೆ.

ರಸ್ತೆ ಕಿತ್ತು ಹೋಗಿ ವರ್ಷಗಳೇ ಕಳೆದಿದ್ದರೂ ರಸ್ತೆ ದುರಸ್ತಿ ಮಾಡಿಸುವಂತೆ ಹಲವಾರು ಬಾರಿ ಸ್ಥಳೀಯ ನಿವಾಸಿಗಳು, ಗ್ರಾಮ ಪಂಚಾಯತಿ ಸದಸ್ಯರು, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಇದರಿಂದ ದ್ವಿಚಕ್ರ ವಾಹನ ಚಾಲಕರು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಸಕರು ಹೇಳಿದರೂ ರಸ್ತೆ ದುರಸ್ತಿ ಮಾಡಿಸಲಿಲ್ಲ:

ಎ.ಆರ್.ಕೃಷ್ಣಮೂರ್ತಿ ಮೇ ತಿಂಗಳಿನಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಿಗೆ ರಸ್ತೆ ಕಾಮಗಾರಿ ಮಾಡುವಂತೆ ಸೂಚನೆ ನೀಡಿದ್ದರು. ರಸ್ತೆಗೆ ಅಗತ್ಯ ಬೇಕಾಗಿರುವ ಅನುದಾನವನ್ನು ಶಾಸಕರ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ಬಿಡುಗಡೆ ಮಾಡಿಕೊಡುವುದಾಗಿ ತಿಳಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಶಾಸಕರ ಮಾತಿಗೆ ಕವಡೆ ಕಾಸಿನ ಬೆಲೆ ನೀಡದೆ ರಸ್ತೆ ಅವ್ಯವಸ್ಥೆಗೆ ಮತ್ತಷ್ಟು ಕಾರಣರಾಗಿದ್ದಾರೆ.

ಶ್ರೀ ಮಠಕ್ಕೆ ಇದೇ ಪ್ರಮುಖ ದಾರಿ: ಈ ರಸ್ತೆ ಮೂಲಕವೇ ಸುತ್ತೂರು ಮಠ ಶಿಕ್ಷಣ ಸಂಸ್ಥೆ ಇರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ವಿಶೇಷ ಜನರು ಬಂದು ಹೋಗುತ್ತಿದ್ದಾರೆ. ಆದರೆ ಈ ರಸ್ತೆ ನೋಡಿ ಬಂದಂತವರು ಆಡಳಿತ ವ್ಯವಸ್ಥೆ ಬಗ್ಗೆ ಮೂಗು ಮುರಿಯುವಂತಾಗಿದೆ.

ಇನ್ನಾದರೂ ಅಧಿಕಾರಿ ವರ್ಗ ಜಿಲ್ಲಾಡಳಿತ, ಸ್ಥಳೀಯ ಶಾಸಕರು ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದು ಬಿಳಿಗಿರಂಗನ ಬೆಟ್ಟದ ನಿವಾಸಿಗಳು ಆಗ್ರಹಿಸಿದ್ದಾರೆ.

ಸೋಮೇಶ್ವರ ಕೆರೆಯಿಂದ ರೇಷ್ಮೆ ಇಲಾಖೆಯವರಿಗೆ ರಸ್ತೆ ತೀರ ಹದಗೆಟ್ಟು ಹೋಗಿದೆ ರಸ್ತೆ ದುರಸ್ತಿ ಪಡಿಸಬೇಕೆಂದು ಹಲವಾರು ಬಾರಿ ಸಂಬಂಧ ಪಟ್ಟ ಆಡಳಿತ ವ್ಯವಸ್ಥೆಗೆ ಮನವಿ ಮಾಡಲಾಗಿದೆ ಪ್ರಯೋಜನವಾಗಿಲ್ಲ ಎಂದು ಬಿಳಿಗಿರಿರಂಗನ ಬೆಟ್ಟದ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಮಲ್ಲೇಶ್ ಹೇಳಿದ್ದಾರೆ.

ರಸ್ತೆ ಅಭಿವೃದ್ಧಿಪಡಿಸ ಬೇಕೆಂದು ಗ್ರಾಮ ಪಂಚಾಯಿತಿ ಹಿಡಿದು ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಶಾಸಕರು ಕೂಡ ಬಿಳಿಗಿರಂಗನಾಥ ಸ್ವಾಮಿ ಜಾತ್ರೆ ಪೂರ್ವಭಾವಿ ಸಭೆಯಲ್ಲೂ ಕೂಡ ರಸ್ತೆ ದುರಸ್ತಿ ಮಾಡಿ ಎಂದು ಹೇಳಿದರು ದುರಸ್ತಿ ಮಾಡಿಸಲಿಲ್ಲ. ಈಗಈ ರಸ್ತೆಯಲ್ಲಿ ಮಂತ್ರಿಗಳು ತಿರುಗಾಡಿದರಷ್ಟೇ ರಸ್ತೆ ದುರಸ್ತಿಯಾಗುವುದು ಎಂದು ಬಿಳಿಗಿರಿರಂಗನ ಬೆಟ್ಟದ ನಿವಾಸಿ ರಂಗಣ್ಣ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆ ವಿಸ್ತರಣೆ, ಮಾಲಿನ್ಯ ವಿರೋಧಿಸಿ 48 ಗಂಟೆ ಕೊಪ್ಪಳ ಬಂದ್ ಕರೆ
ಸುರಕ್ಷಿತ ಗರ್ಭಪಾತ, ಶ್ರವಣದೋಷ ತಡೆಗೆ ಅರಿವು ಅಗತ್ಯ: ಡಾ. ರಾಜೇಶ್