ದೊಡ್ಡಬಳ್ಳಾಪುರ: ಬರುವ ಅ.3ರಿಂದ 6ರವರೆಗೆ ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ 51ನೇ ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಜೂನಿಯರ್ ಯೋಗಾಸನ ಚಾಂಪಿಯನ್‌ಷಿಪ್- 2026ರಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಹಲವು ಯೋಗಪಟುಗಳು ಭಾಗವಹಿಸುತ್ತಿದ್ದಾರೆ
ದೊಡ್ಡಬಳ್ಳಾಪುರ: ಬರುವ ಅ.3ರಿಂದ 6ರವರೆಗೆ ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ 51ನೇ ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಜೂನಿಯರ್ ಯೋಗಾಸನ ಚಾಂಪಿಯನ್‌ಷಿಪ್- 2026ರಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಹಲವು ಯೋಗಪಟುಗಳು ಭಾಗವಹಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವ ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ 8 ರಿಂದ 10ವರ್ಷದ ಬಾಲಕ ವಿಭಾಗದಲ್ಲಿ ಡಿ.ಎಂ. ಆರ್ಯ, ಕೆ.ಎನ್. ಋತ್ವಿಕ್, ಬಾಲಕಿರ ವಿಭಾಗದಲ್ಲಿ ಕೆ. ಸಾನ್ವಿ, ಎಂ.ಎಚ್. ಹನಿಕಾ, ಬಿ.ಪಿ.ಸಾನ್ವಿತ, 10 ರಿಂದ 12 ವರ್ಷದ ಬಾಲಕರ ವಿಭಾಗದಲ್ಲಿ ಎಸ್.ಯಶ್ವಿನ್, ಬಾಲಕಿಯರ ವಿಭಾಗದಲ್ಲಿ ಎಸ್.ಅಪೂರ್ವ, ಎನ್.ಖುಷಿ ಪ್ರಿಯ, 12 ರಿಂದ 14 ವರ್ಷದ ಬಾಲಕರ ವಿಭಾಗದಲ್ಲಿ ವೇದಿಕ್ ಶೆಟ್ಟಿ, ಕುಶಲ್, ಬಾಲಕಿಯರ ವಿಭಾಗದಲ್ಲಿ ಹೆಚ್.ಆರ್.ಗೌತಮಿ, ಕೆ.ಎಮ್.ಹಿತಾಶ್ರೀ, 14 ರಿಂದ 16 ವರ್ಷದ ಬಾಲಕರ ವಿಭಾಗದಲ್ಲಿ ಪಿ.ಎಸ್.ಶಶಾಂಕ್, 16 ರಿಂದ 18 ವರ್ಷದ ಬಾಲಕಿಯರ ವಿಭಾಗದಲ್ಲಿ ಅರದೇಶನಹಳ್ಳಿಯ ಅರ್ಪಿತ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಷ್ಟ್ರೀಯ ಸ್ಪರ್ಧೆಗೆ ತೆರಳುತ್ತಿರುವ ಯೋಗಪಟುಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರೊ.ಎಂ.ಜಿ. ಅಮರನಾಥ್, ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷೆ ಎಂ.ಎ.ಲಕ್ಷ್ಮಿ ರವೀಂದ್ರ, ರಾಜ್ಯ ಅಮೆಚುರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಆರ್.ಶ್ಯಾಮ ಸುಂದರ್ ಮತ್ತು ಕಾರ್ಯದರ್ಶಿ ಎ.ನಟರಾಜ ಅಭಿನಂದಿಸಿದ್ದಾರೆ.
27ಕೆಡಿಬಿಪಿ3-
ರಾಜಸ್ಥಾನದ ಜೈಪುರದಲ್ಲಿ ನಡೆವ ರಾಷ್ಟ್ರೀಯ ಯೋಗಾ ಚಾಂಪಿಯನ್‌ಷಿಪ್‌ಗೆ ತೆರಳುತ್ತಿರುವ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳನ್ನು ಅಭಿನಂದಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.