ಕನ್ನಡಪ್ರಭ ವಾರ್ತೆ, ತುಮಕೂರುಸಾಲ ಬೇಕಾದಾಗ ಸಹಕಾರ ಸಂಘಗಳಿಗೆ ಬರುತ್ತೀರಿ, ಆರ್ಥಿಕ ವ್ಯವಹಾರವನ್ನು ಮಾತ್ರ ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡುತ್ತೀರಿ, ಇದು ಸರಿನಾ? ಸಹಕಾರ ಸಂಸ್ಥೆಗಳಲ್ಲೇ ಖಾತೆ ತೆರೆದು ಒಡವೆ ಸಾಲ, ವಾಹನಗಳ ಸಾಲ, ಮತ್ತಿತರ ವ್ಯವಹಾರಗಳನ್ನು ನಮ್ಮಲ್ಲಿಯೇ ಮಾಡಿ ಎಂದು ಮಾಜಿ ಸಹಕಾರ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ರೈತರಿಗೆ ಹೇಳಿದರು.ಭಾನುವಾರ ನಗರದ ಡಯಟ್ ಸಂಸ್ಥೆ ಆವರಣದಲ್ಲಿ ನಡೆದ ಜಿಲ್ಲಾ ಸಹಕಾರಕೇಂದ್ರ ಬ್ಯಾಂಕಿನ 71 ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳನ್ನು ಬೆಳೆಸಿದರೆ ಅವು ನಿಮ್ಮನ್ನೂ ಬೆಳೆಸುತ್ತವೆ. ಇನ್ನುಮುಂದೆ ಸಹಕಾರ ಸಂಸ್ಥೆಗಳಲ್ಲಿ ಖಾತೆ ತೆರೆದು ಹಣಕಾಸಿನ ವ್ಯವಹಾರ ಮಾಡಿರಿ ಎಂದು ಮನವಿ ಮಾಡಿದರು.ಹೈನುಗಾರಿಕೆ ಆರಂಭಿಸಲು ಹಸು ಸಾಕಾಣಿಕೆ ಮಾಡುವ ಎಷ್ಟೇ ಜನ ಬಂದರೂ ಹಸು ಖರೀದಿಗೆ ಸಾಲ ಕೊಡುತ್ತೇವೆ. ಆದರೆ ಮೇವಿನ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಹೈನುಗಾರಿಕೆಯಿಂದ ಹಳ್ಳಿಗಳಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ಕುಟುಂಬದ ಖರ್ಚು ವೆಚ್ಚ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಖರ್ಚುಗಳಿಗೂ ಹಾಲು ಉತ್ಪಾದನೆಯಿಂದ ಅನುಕೂಲವಾಗುತ್ತದೆಎಂದರು.ತುಮಕೂರು ಡಿಸಿಸಿ ಬ್ಯಾಂಕ್ ತನ್ನ 71 ವರ್ಷಗಳ ಸ್ಮರಣೀಯ ಸೇವೆ ಪೂರೈಸಿರುವ ಈ ಸಂದರ್ಭದಲ್ಲಿ ಬ್ಯಾಂಕಿನ ಇತಿಹಾಸದ ಸಿಂಹಾವಲೋಕನ ಮಾಡಿದಾಗ, ಅದರ ದೃಢತೆ ಮತ್ತು ನೇರ ಹೆಜ್ಜೆಗಳ ಸಾಧನೆ ಮುಂದಿನ ಸುಭದ್ರತೆಯ ಹಾದಿಗೆ ಕೈಗನ್ನಡಿಯಾಗಿರುತ್ತದೆ. ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡಿರುವ ಕೃಷಿ ಸಾಲಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳಾದ ಬಡ್ಡಿ ರಿಯಾಯಿತಿ, ಬಡ್ಡಿ ಮನ್ನಾ ಹಾಗೂ ಇತರೆ ಯೋಜನೆಗಳಡಿಯಲ್ಲಿ ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಒಟ್ಟು 147872 ಸದಸ್ಯರಿಗೆ ಒಟ್ಟು 6813.85 ಲಕ್ಷರು.ಬಿಲ್ಲು ಸಲ್ಲಿಸಿದ್ದು, ಸದರಿ ಬಿಲ್ಲಿನಲ್ಲಿ 285.27 ಲಕ್ಷರು.ಬ್ಯಾಂಕಿಗೆಜಮಾ ಬಂದಿದ್ದು ಉಳಿಕೆ 6528.58 ಲಕ್ಷರು.ಸರ್ಕಾರದಿಂದ ಬಾಕಿ ಬರಬೇಕಾಗಿದೆಎಂದು ತಿಳಿಸಿದರು.ಸಚಿವ ಡಾ.ಪರಮೇಶ್ವರ್ ಅನಿರೀಕ್ಷಿತ ಭೇಟಿ...ಡಿಸಿಸಿ ಬ್ಯಾಂಕಿನ ಸರ್ವಸದಸ್ಯರ ಸಭೆಯ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಸಚಿವರನ್ನು ಬ್ಯಾಂಕಿನಿಂದ ಅಧ್ಯಕ್ಷ ಕೆ.ಎನ್.ರಾಜಣ್ಣ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಮಾತನಾಡಿದ ಸಚಿವ ಡಾ.ಪರಮೇಶ್ವರ್, ಆರನೇ ಬಾರಿಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರನ್ನು ಅಭಿನಂದಿಸಲೆಂದು ಬಂದೆ ಎಂದು ಅವರನ್ನು ಸನ್ಮಾನಿಸಿ ಶುಭಕೋರಿದರು.ಸಹಕಾರಿ ಆಂದೋಲನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕೆ.ಎನ್.ರಾಜಣ್ಣನವರು ಈ ಕ್ಷೇತ್ರದ ಬದಲಾವಣೆಗೆ ತಮ್ಮದೇ ಚಿಂತನೆಯ ಸಲಹೆಗಳನ್ನು ನೀಡಿ ಬೆಳೆಸಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ನೀಡಿ ಅವರನ್ನುಆರ್ಥಿಕವಾಗಿ ಮೇಲೆ ತರಬೇಕು ಎಂಬ ಚಿಂತನೆ ರಾಜಣ್ಣನವರಂತಹವರಿಗೆ ಮಾತ್ರ ಬರುತ್ತದೆ. ಪಶಿಷ್ಟ ಜಾತಿ-ಪಂಗಡದವರು, ಮಹಿಳೆಯರಿಗೆ ಸಹಕಾರಿ ಸಂಸ್ಥೆಗಳಲ್ಲಿ ಮೀಸಲಾತಿ, ನಾಮನಿರ್ದೇಶನ ಮಾಡಲು ರಾಜಣ್ಣ ಕಾರಣರಾಗಿದ್ದಾರೆ. ಈ ಕ್ಷೇತ್ರಕ್ಕೆ ದೊಡ್ಡಕೊಡುಗೆ ನೀಡಿದ್ದಾರೆ ಎಂದು ಅಭಿನಂದಿಸಿದರು.ಸಹಕಾರಿ ಆಂದೋಲನಕ್ಕೆ ಪಕ್ಷಇಲ್ಲ, ಜಾತಿಇಲ್ಲ. ಎಲ್ಲರೂ ಒಂದು ಎಂಬ ಭಾವನೆಯ ಸಹಕಾರತತ್ವ ಪರಸ್ಪರ ಬೆಳವಣಿಗೆಗೆ ನೆರವಾಗಿದೆ. ಸಹಕಾರ ಸಂಘಗಳಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ಸಾಲಸೌಕರ್ಯ, ಮತ್ತಿತರ ಸಹಾಯ ದೊರಕುತ್ತಿದೆ. ಸಹಕಾರಿ ಸಂಸ್ಥೆಗಳು ಇಲ್ಲದಿದ್ದರೆಅಷ್ಟೆಲ್ಲಾ ಹೊಣೆ ಸರ್ಕಾರದ ಮೇಲೆ ಬೀಳುತ್ತಿತ್ತು. ಸರ್ಕಾರವೂ ಈ ಪ್ರಮಾಣದಲ್ಲಿ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ, ವಿಧಾನಪರಿಷತ್ ಸದಸ್ಯಆರ್.ರಾಜೇಂದ್ರ, ನಿರ್ದೇಶಕ, ಶಾಸಕ, ತುಮುಲ್ ಅಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ಬಿ.ಶಿವಣ್ಣ, ಹನುಮಾನ್, ಎಸ್.ಆರ್.ರಾಜಕುಮಾರ್, ಲಕ್ಷ್ಮೀನಾರಾಯಣ, ಜಿ.ಎಸ್.ರವಿ, ಸಿದ್ಧಗಂಗಪ್ಪ, ಎಚ್.ಸಿ.ಪ್ರಭಾಕರ್, ಬಿ.ನಾಗೇಶ್‌ಬಾಬು, ಮಾಲತಿ, ಜಿಲ್ಲಾ ಸಹಕಾರಯೂನಿಯನ್‌ಅಧ್ಯಕ್ಷ ಬಿ.ಜಿ.ವೆಂಕಟೇಗೌಡ, ನಿರ್ದೇಶಕ ಪಿ.ಮೂರ್ತಿ, ಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಂಗಮಪ್ಪ, ಸಹಕಾರ ಸಂಘಗಳ ಉಪನಿಬಂಧಕ ಎಚ್.ಮೂರ್ತಿ, ನಬಾರ್ಡ್ಅಧಿಕಾರಿ ಮೋಹನ್ ಸಾಯಿ ಗಣೇಶ್, ಮಹಾಪ್ರಬಂಧಕರಾದ ಪಿ.ಎಸ್.ರಾಮಕೃಷ್ಣ ನಾಯಕ, ಎಸ್.ಶ್ರೀಧರ್ ಸೇರಿದಂತೆವಿವಿಧ ಸಹಕಾರ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.