ಅನ್ನ ಕೊಡುವ ರೈತ, ಗಡಿ ಕಾಯುವ ಸೈನಿಕರು ದೇಶದ ಜೋಡೆತ್ತುಗಳು: ಬಿ.ಟಿ.ಚಂದ್ರಶೇಖರ್

KannadaprabhaNewsNetwork |  
Published : Dec 25, 2025, 01:03 AM IST
ಚಿಕ್ಕಮಗಳೂರು ನಗರದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಆಯೋಜಿಸಿದ್ಧ ವಿಶ್ವ ರೈತ ದಿನಾಚರಣೆ ನಡೆಯಿತು | Kannada Prabha

ಸಾರಾಂಶ

ಚಿಕ್ಕಮಗಳೂರುಅನ್ನ ಕೊಡುವ ರೈತರು ಹಾಗೂ ಗಡಿ ಪ್ರದೇಶ ಕಾಯುವ ಭಾರತೀಯ ಸೈನಿಕರು ದೇಶದ ಜೋಡೆತ್ತುಗಳಂತೆ. ಈ ವರ್ಗವನ್ನು ಸಮಸ್ತ ಭಾರತೀಯರು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರುಸೇನೆ ರಾಜ್ಯಾಧ್ಯಕ್ಷ ಬಿ.ಟಿ.ಚಂದ್ರಶೇಖರ್ ಹೇಳಿದರು.

- ರೈತೋದಯ ಹಸಿರು ಸೇನೆಯಿಂದ ಆಯೋಜಿಸಿದ್ಧ ವಿಶ್ವ ರೈತ ದಿನಾಚರಣೆ- ನಿವೃತ್ತ ಸೈನಿಕರ ಸನ್ಮಾ ನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅನ್ನ ಕೊಡುವ ರೈತರು ಹಾಗೂ ಗಡಿ ಪ್ರದೇಶ ಕಾಯುವ ಭಾರತೀಯ ಸೈನಿಕರು ದೇಶದ ಜೋಡೆತ್ತುಗಳಂತೆ. ಈ ವರ್ಗವನ್ನು ಸಮಸ್ತ ಭಾರತೀಯರು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರುಸೇನೆ ರಾಜ್ಯಾಧ್ಯಕ್ಷ ಬಿ.ಟಿ.ಚಂದ್ರಶೇಖರ್ ಹೇಳಿದರು.

ನಗರದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯಿಂದ ಆಯೋಜಿಸಿದ್ಧ ವಿಶ್ವ ರೈತ ದಿನಾಚರಣೆ ಹಾಗೂ ನಿವೃತ್ತ ಸೈನಿಕರ ಸನ್ಮಾ ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲು ರೈತರು ಮತ್ತು ಯೋಧರೆ ಪ್ರಮುಖ ಕಾರಣ. ಮಳೆ-ಬಿಸಿಲ್ಲದೇ ರೈತರು, ಚಳಿ-ಗಾಳಿ ಲೆಕ್ಕಿಸದ ಸೈನಿಕರು ನಿಸ್ವಾರ್ಥದಿಂದ ಕಾರ್ಯನಿರ್ವಹಿಸುತ್ತಿರುವ ಕಾರಣ ಇಂದು ರಾಷ್ಟ್ರ ಸಧೃಢವಾಗಿ ನೆಲೆಯೂರಲು ಸಾಧ್ಯವಾಗಿದೆ ಎಂದರು.

ಹಸಿದವರಿಗೆ ಅನ್ನ ಪೂರೈಸುವ ರೈತರ ಕಾರ್ಯ ಶ್ಲಾಘನೀಯ. ರೈತರು ಮೂರೇ ತಿಂಗಳು ತಮ್ಮೆಲ್ಲಾ ವ್ಯವಸಾಯ ವೃತ್ತಿ ತ್ಯಜಿಸಿ ಕೈಕಟ್ಟಿಕೊಂಡರೆ ದೇಶವೇ ಹಸಿವು ಹಾಗೂ ಆರ್ಥಿಕ ಸಂಕಷ್ಟದಿಂದ ನಲುಗಬೇಕಾಗುತ್ತದೆ. ಆ ನಿಟ್ಟಿನಲ್ಲಿ ರೈತರನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸುವುದು ಸರ್ಕಾರದ ಕೆಲಸ ಎಂದರು.

ವಿಶ್ವ ರೈತ ದಿನಾಚರಣೆಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರ ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ರೈತ ಸಮೂಹ ಕೇವಲ ಮಾನವ ಜನಾಂಗಕ್ಕೆ ಹಸಿವು ನೀಗಿಸದೇ, ಜಾನುವಾರುಗಳ ನೋವಿಗೂ ಸ್ಪಂದಿಸುವ ಗುಣವಿದೆ. ಹೀಗಾಗಿ ರೈತ ದೇಶದ ಬೆನ್ನೆಲುಬು ಎಂದು ಇಡೀ ರಾಷ್ಟ್ರವೇ ಕೊಂಡಾಡುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರ ಮಕ್ಕಳಿಗೆ ಅನುಕೂಲವಾಗಲು 1008 ರೈತ ಜೋಡಿಗಳಿಗೆ ಕಲ್ಯಾಣೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದೆ. ಈ ಕಲ್ಯಾಣೋತ್ಸವಕ್ಕೆ ಶೃಂಗೇರಿ ಶಾರದಾಪೀಠ ಹಾಗೂ ಧರ್ಮಸ್ಥಳದ ಹೆಗ್ಡೆಯವರ ಸಹಕಾರ ಬಹಳಷ್ಟಿದೆ ಎಂದು ತಿಳಿಸಿದರು.

ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಅಂಬೇಡ್ಕರ್ ಸಂವಿಧಾನ ರಚಿಸಿ ಸರ್ವರಿಗೂ ಸಮಾನ ಹಕ್ಕನ್ನು ಕಲ್ಪಿಸಿ ಕೊಟ್ಟವರು. ದೇಶದ ಅಹಿಂದಾ ನಾಯಕರೆಂದರೆ ಅಂಬೇಡ್ಕರ್ ಮಾತ್ರ. ಈ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯ ವಿಲ್ಲ. ಆ ಸಂವಿಧಾನದಡಿ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳು ಶೋಷಿತರಿಗೆ ನೆರವಾಗಬೇಕು ಎಂದು ಹೇಳಿದರು.

ಮಾಜಿ ಸೈನಿಕ ನಾಗರಾಜ್ ಮಾತನಾಡಿ ರೈತರು ಬೆಳೆದ ಒಂದು ಅಗಳು ಅನ್ನವೂ ಮಾನವರಿಗೆ ಪವಿತ್ರ ವಾದದು. ಆ ಅನ್ನ ದಾತನಿಗೆ ನೋವುಣಿಸುವ ಕೆಲಸ ಯಾರೂ ಮಾಡಬಾರದು. ದಿನನಿತ್ಯ ವ್ಯವಸಾಯದಲ್ಲಿ ತೊಡಗಿಸಿಕೊಂಡು ವರ್ಷಪೂರ್ತಿ ಕಾಯಕ ಯೋಗಿಯಂತೆ ದುಡಿಯುವ ರೈತರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು.

ರೈತೋದಯ ಹಸಿರು ಸೇನೆ ಜಿಲ್ಲಾಧ್ಯಕ್ಷ ಹರೀಶ್ ಗೌಡನಹಳ್ಳಿ ಮಾತನಾಡಿ ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ದೊರಕಬೇಕು. ಎಂದಿಗೂ ರೈತಜೀವ ಸಂಕಷ್ಟದಿಂದ ಕೂಡಿರದೇ, ನೆಮ್ಮದಿಯಿಂದ ಬಾಳಲು ಸರ್ಕಾರ ನಿಗಾವಹಿಸಬೇಕು. ಬೆಳೆಗಳಿಗೆ ಅನುಕೂಲವಾಗಲು ರಸಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ವಿತರಿಸಿದರೆ ರೈತರು ಬಾಳು ಹಸನಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ತಾಲೂಕು ಕಚೇರಿಯಿಂದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತದವರೆಗೆ ಎತ್ತಿನ ಗಾಡಿಯಲ್ಲಿ ಪುರುಷ ಹಾಗೂ ರೈತ ಮಹಿಳೆಯರು ಸಾಗುವ ಮೂಲಕ ರೈತ ದಿನಾಚರಣೆ ಮಹತ್ವ ಸಾರಿಸಿದರು. ಬಳಿಕ ನಿವೃತ್ತ ಯೋಧರು, ಆರಕ್ಷಕ ಸಿಬ್ಬಂದಿಯನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ರೈತೋದ ಹಸಿರುಸೇನೆ ರಾಜ್ಯ ಮಹಿಳಾ ರಾಜ್ಯಾಧ್ಯಕ್ಷೆ ದೇವಮ್ಮ, ಪ್ರಧಾನ ಕಾರ್ಯ ದರ್ಶಿ ಕೆ.ಆರ್.ಪೇಟೆ ಗೋವಿಂದರಾಜು, ಮಾಜಿ ಸೈನಿಕರಾದ ನಾಗರಾಜು, ಆರ್.ಪ್ರಕಾಶ್, ರೇವಣ್ಣ, ರಾಜೇ ಗೌಡ, ಪ್ರಕಾಶ್‌ಶೆಟ್ಟಿ, ವಿವಿಧ ಜಿಲ್ಲೆಗಳ ಅಧ್ಯಕ್ಷರಾದ ಸುಧೀರ್, ರಘು, ಅಶೋಕ್, ರಮೇಶ್, ಅಂಬಿ, ಕೃಷ್ಣ, ಶೋಭ, ತೇಜಸ್, ಜ್ಯೋತಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ