ರೊಚ್ಚಿಗೆದ್ದ ರೈತರು, ಅಂತು, ಇಂತು ಕೆರೆ ನೀರು ಬಂತು

KannadaprabhaNewsNetwork |  
Published : Oct 20, 2025, 01:03 AM IST
19ಕೆಪಿಎಲ್21 ಹನುಮನಟ್ಟಿ ಗ್ರಾಮದ ಕೆರೆ ತುಂಬಿವುದಕ್ಕೆ ನೀರು ಬಂದಿರುವುದು 19ಕೆಪಿಎಲ್22  ಗುನ್ನಾಳ ಗ್ರಾಮದ  ಪಂಪ್ ಹೌಸ್ ಎದುರು  ರೈತರು ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿರುವುದು. | Kannada Prabha

ಸಾರಾಂಶ

ರೈತರ ಹೋರಾಟದ ಬಳಿಕ ಕೆರೆ ತುಂಬಿಸುವುದಕ್ಕೆ ಮುಂದಾದ ರೈತರು, ಪಂಪಸೆಟ್ ಶುರು

ಕೊಪ್ಪಳ: ಕೊಪ್ಪಳ ಏತನೀರಾವರಿ ಯೋಜನೆಯಲ್ಲಿ ನದಿಯಿಂದ ನೀರು ಪಂಪಹೌಸ್ ಗೆ ಬಂದಿದ್ದರೂ ಸಹ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆ ನೀರು ಬಂದಿರಲಿಲ್ಲ. ರೈತರು ರೊಚ್ಚಿಗೆದ್ದು ಹೋರಾಟ ಮಾಡುವ ಬೆದರಿಕೆ ಹಾಕುತ್ತಿದ್ದಂತೆ ನಾಲ್ಕು ಕೆರೆಗೆ ನೀರು ಬಂದಿವೆ.

ಹೌದು, ಕೊಪ್ಪಳ ತಾಲೂಕಿನ ಹನುಮನಟ್ಟಿ, ಬುಡಶೆಟ್ನಾಳ ಹಾಗೂ ಬೊಮ್ಮನಾಳ ಗ್ರಾಮಗಳ ಕೆರೆಗಳಿಗೆ ನೀರು ತುಂಬುವ ಕಾರ್ಯ ಪ್ರಾರಂಭವಾಗಿದೆ.

ರೈತರ ಹೋರಾಟದ ಬಳಿಕ ಕೆರೆ ತುಂಬಿಸುವುದಕ್ಕೆ ಮುಂದಾದ ರೈತರು, ಪಂಪಸೆಟ್ ಶುರು ಮಾಡಿದ್ದು, ಈಗ ಈ ಮೂರು ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕಳೆದೆರಡು ದಿನಗಳಿಂದ ನಡೆಯುತ್ತಿದೆ.

ಎಲ್ಲಿಂದ ಪೂರೈಕೆ:ಯಲಬುರ್ಗಾ ತಾಲೂಕಿನ ಪಂಪಹೌಸ್ ಗೆ ನೀರು ಬಂದು ಹಲವು ತಿಂಗಳು ಆಗಿವೆ. ಅಲ್ಲಿಂದ ಕೊಪ್ಪಳ ತಾಲೂಕಿನ ಗ್ರಾಮಗಳ ಕೆರೆ ತುಂಬಿಸುವ ಪೈಪಲೈನ್ ಗೆ ನೀರು ಪೂರೈಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದರು.ಎಷ್ಟು ಬಾರಿ ಹೇಳಿದರೂ ಕ್ಯಾರೆ ಎಂದಿರಲಿಲ್ಲ. ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ನೇತೃತ್ವದಲ್ಲಿ ರೈತರು ಗುನ್ನಾಳ ಗ್ರಾಮದ ಪಂಪ್ ಹೌಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿ ಕೊಪ್ಪಳ ತಾಲೂಕಿನ ಕೆರೆಗಳಿಗೆ ನೀರು ಪೂರೈಕೆ ಮಾಡುವ ಪೈಪ್ ಲೈನ್ ಬಂದ್ ಮಾಡಲಾಗಿತ್ತು. ಇದನ್ನು ಪ್ರಶ್ನೆ ಮಾಡಿದರಲ್ಲದೆ ಕೂಡಲೇ ಅದನ್ನು ತೆರವು ಮಾಡಿ ಕೆರೆ ತುಂಬಿಸುವ ಯೋಜನೆಗೆ ಕೈಜೋಡಿಸದೆ ಇದ್ದರೇ ನಿಮ್ಮ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಜಾರಿ ಮಾಡಿದ ಕೊಪ್ಪಳ ಏತನೀರಾವರಿ ಯೋಜನೆಯಲ್ಲಿ ಕೃಷ್ಣಾ ನದಿಯಿಂದ ನೀರು ಪೂರೈಕೆ ಮಾಡಲಾಗಿದೆ. ಇಲ್ಲಿ ಪಂಪ್ ಹೌಸ್ ನಿಂದ ಕೊಪ್ಪಳ ತಾಲೂಕಿನ ಕೆರೆಗಳಿಗೆ ಯಾಕೇ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಸರ್ಕಾರ ಯೋಜನೆಯ ಜಾರಿಯಲ್ಲಿ ನಿರ್ಲಕ್ಷ್ಯ ಮಾಡಿ ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಎಚ್ಚೆತ್ತ ಅಧಿಕಾರಿಗಳು ತಕ್ಷಣ ಕೊಪ್ಪಳ ತಾಲೂಕಿನ ಕೆರೆ ತುಂಬಿಸುವ ಯೋಜನೆಯ ಪೈಪ್ ಲೈನ್ ಗೂ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಪ್ರಾರಂಭದಲ್ಲಿ ಹನುಮನಟ್ಟಿ, ಬುಡಶೆಡ್ನಾಳ ಹಾಗೂ ಬೊಮ್ಮನಾಳ ಗ್ರಾಮಗಳ ಕೆರೆಗಳಿಗೆ ನೀರು ಬರುತ್ತಿದ್ದರು, ರೈತರು ಫುಲ್ ಖುಷಿಯಾಗಿದ್ದಾರೆ. ಇದಲ್ಲದೆ ಇರಕಲ್ ಗಡ ಗ್ರಾಮದ ಕೆರೆ ಸೇರಿದಂತೆ ಇನ್ನು ಅನೇಕ ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಜಾರಿಯಾಗಬೇಕಾಗಿದೆ.

ನದಿಯಿಂದ ನೀರು ತಂದು ಪಂಪ್ ಹೌಸ್ ಗೆ ಕೆಡವಿದ್ದರೂ ಅಲ್ಲಿಂದ ಪೂರೈಕೆ ಮಾಡದೆ ಅಧಿಕಾರಿಗಳು ಬೇಜವಾಬ್ದಾರಿ ವಹಿಸಿದ್ದರು. ಹೀಗಾಗಿ, ಈಗ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರಿಂದ ಪ್ರಾರಂಭಿಸಿದ್ದು, ಮೂರು ಗ್ರಾಮಗಳ ಕೆರೆಗಳಿಗೆ ನೀರು ಬರುತ್ತಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ತಿಳಿಸಿದ್ದಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ