ಕೆರೆಕಟ್ಟೆ ತುಂಬಿ ಅಂತರ್ಜಲ ಹೆಚ್ಚಿದರೆ ರೈತರಿಗೆ ಅನುಕೂಲ-ಮಾಜಿ ಸಚಿವ ಬಿ.ಸಿ. ಪಾಟೀಲ್

KannadaprabhaNewsNetwork |  
Published : Mar 14, 2026, 02:00 AM IST
ಹಿರೇಕೆರೂರು ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಸರ್ವಜ್ಙ ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿದ್ದರಿಂದ ಮಾಜಿ ಸಚಿವ ಬಿ.ಸಿ. ಪಾಟೀಲ ಬಾಗಿನ ಅರ್ಪಿಸಿದರು. | Kannada Prabha

ಸಾರಾಂಶ

ಬೇಸಿಗೆ ಕಾಲದಲ್ಲಿಯು ಕೆರೆಗಳು ತುಂಬಿದಾಗ ರೈತರ ಬದುಕಿಗೆ ಹಸನವಾಗುವ ಜತೆಗೆ ಅಂತರ್ಜಲ ಮಟ್ಟ ಅಧಿಕವಾಗಲು ಅನುಕೂಲವಾಗುತ್ತೆ. ಕೆರೆ ಕಟ್ಟೆಗಳು ರೈತರ ಜೀವನಾಡಿಯಾಗಿದ್ದು ಅಂತರ್ಜಲ ಮಟ್ಟ ಹೆಚ್ಚಾಗುವುದರ ಜೊತೆಗೆ ರೈತರ ಬೇಸಿಗೆ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರು: ಬೇಸಿಗೆ ಕಾಲದಲ್ಲಿಯು ಕೆರೆಗಳು ತುಂಬಿದಾಗ ರೈತರ ಬದುಕಿಗೆ ಹಸನವಾಗುವ ಜತೆಗೆ ಅಂತರ್ಜಲ ಮಟ್ಟ ಅಧಿಕವಾಗಲು ಅನುಕೂಲವಾಗುತ್ತೆ. ಕೆರೆ ಕಟ್ಟೆಗಳು ರೈತರ ಜೀವನಾಡಿಯಾಗಿದ್ದು ಅಂತರ್ಜಲ ಮಟ್ಟ ಹೆಚ್ಚಾಗುವುದರ ಜೊತೆಗೆ ರೈತರ ಬೇಸಿಗೆ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಸರ್ವಜ್ಞ ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿದ್ದರಿಂದ ಇತ್ತೀಚೆಗೆ ಬಾಗಿನ ಅರ್ಪಿಸಿ ನಂತರ ಅವರು ಮಾತನಾಡಿದರು.ಕೆರೆಗಳಲ್ಲಿ ಬೇಸಿಗೆ ಕಾಲದಲ್ಲಿ ನೀರು ತುಂಬಿರುವುದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿ ಸುತ್ತಲಿನ ಕೊಳವೆಬಾವಿಗಳ ನೀರಿನ ಮಟ್ಟ ಅಧಿಕವಾಗುತ್ತದೆ ಮತ್ತು ಕೆರೆಗಳಲ್ಲಿ ಸದಾ ಕಾಲ ನೀರು ಇರುವುದರಿಂದ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಬೇಸಿಗೆ ಸಮಯದಲ್ಲಿ ಬೆಳೆಗಳನ್ನು ಅನುಕೂಲವಾಗುತ್ತದೆ. ರೈತರು ನೀರಿನ ಸದ್ಬಳಕೆ ಮಾಡಿಕೊಂಡು ಕೃಷಿಗೆ ಉತ್ತೇಜನ ಪಡೆದುಕೊಳ್ಳಬೇಕು ಎಂದರು.ಅತೀವೃಷ್ಟಿ, ಅನಾವೃಷ್ಟಿ, ಕಡಿಮೆ ಇಳುವರಿ, ಬೆಲೆ ಕುಸಿತದಂತಹ ಸಂಕಷ್ಟಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗಿ ಅವರ ಕೃಷಿಗೆ ಪೂರಕವಾಗುವಂತಹ ಕಾರ್ಯಗಳನ್ನು ಕೈಗೊಂಡಾಗ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎನ್.ಎಂ. ಈಟೇರ್, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಗೀತಾ ನಿಂಗಪ್ಪ ದಂಡಿಗಿಹಳ್ಳಿ, ಬಸಮ್ಮ ಅಬಲೂರು, ಜಗದೀಶ ದಂಡಿಗಿಹಳ್ಳಿ, ಪ್ರಭಾಕರ್ ಹುಲ್ಲತ್ತಿ, ನಿಂಗಪ್ಪ ದಂಡಿಗಿಹಳ್ಳಿ, ಹನುಮಂತಪ್ಪ ಕೆಂಚಣ್ಣನವರ್, ನಾಗರಾಜ ಮುದಿಗೌಡ್ರ, ಹರೀಶ ಮುದಿಗೌಡ್ರ, ವೀರಭದ್ರಪ್ಪ ಬೆಟಗೇರಿ, ಮಾಲತೇಶ ಮುದಿಗೌಡ್ರ, ಸುರಪ್ಪ ಅಳಿಕಟ್ಟಿ, ಅಶೋಕ ದಂಡಿಗಿಹಳ್ಳಿ, ಕಲ್ಲಪ್ಪ ಸುತ್ತಕೋಟ್ಟಿ, ಮಹೇಶ ಮುದಿಗೌಡ್ರ, ಪುಷ್ಪ ಹುಲ್ಲಿನಕೊಪ್ಪ, ಶಾಂತಮ್ಮ ಮತ್ತೂರು, ಪೂಜಾ ದಂಡಿಗಿಹಳ್ಳಿ ಹಾಗೂ ಗ್ರಾಮದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ರಂಗಭೂಮಿ ಕಲಾವಿದ ರಮೇಶಗೌಡ ಪಾಟೀಲ್ ಇನ್ನಿಲ್ಲ
ಸೋಮವಾರದಿಂದಲೇ ತಂಬಾಕುಖರೀದಿ: ಕೇಂದ್ರ ಸರ್ಕಾರ ಭರವಸೆ