ಫ್ಯಾಶನ್ ಡಿಸೈನಿಂಗ್: ಹಳಿಯಾಳದ ಶಫೀಕಾ ಕಾಗದಗೆ ಚಿನ್ನದ ಪದಕ

KannadaprabhaNewsNetwork |  
Published : Jun 05, 2025, 12:52 AM IST
4ಎಚ್.ಎಲ್.ವೈ-1: ಸಿಕ್ಕಿಂ ಮೇಧಾವಿ ವಿಶ್ವವಿದ್ಯಾಲಯದ  ಪ್ಯಾಶನ್ ಡಿಸೈನಿಂಗ್ ಪದವಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ  ಶಫೀಕಾ ಎಂ.ಕಾಗದ ಅವರಿಗೆ ನಿದರ್ಶಶಕಿ  ಜ್ಯೋತಿ ಬಿದರಸರೈ ಅವರು ಚಿನ್ನದ ಪದಕ ಪ್ರಧಾನ ಮಾಡಿದರು. | Kannada Prabha

ಸಾರಾಂಶ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ನಿರ್ದೇಶಕಿ ಜ್ಯೋತಿ ಬಿದರಸರೈ ಅವರು ಶಫೀಕಾ ಅವರಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿ ಶುಭ ಹಾರೈಸಿದರು.

ಹಳಿಯಾಳ: ಪಟ್ಟಣದ ಶಫೀಕಾ ಎಂ. ಕಾಗದ ಎಂಬ ವಿದ್ಯಾರ್ಥಿನಿ ಸಿಕ್ಕಿಂ ರಾಜ್ಯದ ಮೇಧಾವಿ ವಿಶ್ವವಿದ್ಯಾಲಯದಡಿ ಬರುವ ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ಎನ್ಐಎಫ್ ಗ್ಲೋಬಲ್ ಕಾಲೇಜಿನ ಫ್ಯಾಶನ್ ಡಿಸೈನಿಂಗ್ ಪದವಿ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ನಿರ್ದೇಶಕಿ ಜ್ಯೋತಿ ಬಿದರಸರೈ ಅವರು ಶಫೀಕಾ ಅವರಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿ ಶುಭ ಹಾರೈಸಿದರು.

ತಾಲೂಕಿನ ಹವಗಿಯ ಗ್ರಾಮದಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಎಂ.ಎ. ಕಾಗದ ಅವರ ಪುತ್ರಿಯಾಗಿರುವ ಶಫೀಕಾ ಕಾಗದ ಈಗಾಗಲೇ ಮಹಾರಾಷ್ಟ್ರ, ಗೋವಾ, ಪಂಜಾಬ, ಸಿಕ್ಕಿಂ, ದೆಹಲಿ, ತೆಲಂಗಾಣ, ಕೇರಳ ಹಾಗೂ ತಮಿಳುನಾಡು ಸೇರಿದಂತೆ ಇನ್ನಿತರ ಕಡೆ ನಡೆದ ಫ್ಯಾಷನ್ ಮೇಳ, ಉತ್ಸವ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಶಫೀಕಾ ಪ್ಯಾಶನ್ ಡಿಸೈನಿಂಗ್ ಪದವಿಯಲ್ಲಿ ಸಿಕ್ಕಿಂ ಮೇಧಾವಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ದೇಶದಲ್ಲಿರುವ 72 ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹಿಂದಕ್ಕೆ ಹಾಕಿ ಅಂತಿಮವಾಗಿ ಚಿನ್ನದ ಪದಕ ಪ್ರಶಸ್ತಿಗೆ ಭಾಜನರಾಗುವ ಮೂಲಕ ಚಿನ್ನದ ಪದಕ ಪಡೆದ ರಾಜ್ಯದ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗೆಳಿಕೆಗೂ ಇವರು ಪಾತ್ರರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌