ಗದಗ: ಅಂಚೆ ಇಲಾಖೆಯಲ್ಲಿ ಐಟಿ 2.0 ತಂತ್ರಜ್ಞಾನ ಆರಂಭವಾಗಿದ್ದು, ಇದರಿಂದಾಗಿ ತ್ವರಿತ ಮತ್ತು ಉತ್ತಮ ಸೇವೆ ದೊರೆಯಲಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು.
ದೇಶದಲ್ಲಿಯೇ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಈ ತಂತ್ರಾಂಶ ಜಾರಿಗೆ ತಂದಿದೆ. ಈಗಾಗಲೇ ಅಂಚೆ ಇಲಾಖೆ ಹಲವು ದಶಕಗಳಿಂದ ಜನರ ಮನೆ ಬಾಗಿಲಿಗೆ ವಿಶ್ವಾಸಾರ್ಹ ಸೇವೆ ನೀಡುತ್ತಿದೆ. ಈ ಸಾಲಿಗೆ ಈಗ ಹೊಸ ನವೀಕರಣದೊಂದಿಗೆ ಗ್ರಾಹಕ ಮತ್ತು ಅಂಚೆ ನೌಕರರ ಸ್ನೇಹಿಯಾಗಿ ರೂಪಾಂತರಗೊಳಲಿದೆ ಎಂದರು.
ಗದಗ ಉಪ ವಿಭಾಗ ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾಧವ ಹಾಗೂ ಉಪ ಅಂಚೆ ಪಾಲಕ ದೊಡ್ಡಪ್ಪ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ವಿ.ಸುನೀಲಕುಮಾರ, ಡಿ.ಜಿ. ಮ್ಯಾಗೇರಿ, ಶರಣಪ್ಪ ನಾಯ್ಕರ, ವೆಂಕಟೇಶ ಆಕಳವಾಡಿ, ವೀರಣ್ಣ ಅಂಗಡಿ, ಎಸ್.ವಿ. ಹಿರೇಮಠ, ಸಿದ್ಧಲಿಂಗೇಶ ಯಂಡಿಗೇರಿ, ವೈ.ಎಸ್. ಗುಗ್ಗರಿ, ಮನೋಹರ ಕಡಿಯವರ, ಉಮೇಶ ಸಂದಿಮನಿ, ಮಹಾಂತೇಶ ಗದಗ, ರವಿ ಜಾದವ, ವಾಣಿ ಮಾಂಡ್ರೆ, ಸರೋಜ ಪಟ್ಟಶೆಟ್ಟಿ, ನೀಲಮ್ಮ ದಿಬ್ಬದಮನಿ, ವಿದ್ಯಾ ಗದಗ, ಶಿವರಾಜ ಕ್ಷತ್ರಿಯವರ ಮತ್ತಿತರು ಪಾಲ್ಗೊಂಡಿದ್ದರು. ಪ್ರಧಾನ ಅಂಚೆ ಪಾಲಕ ಮಂಜುಳಾ ದೇಗಿನಾಳ ಅಧ್ಯಕ್ಷತೆ ವಹಿಸಿದ್ದರು.