ಭದ್ರಾ ಬಲದಂಡೆ ನಾಲೆ ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

KannadaprabhaNewsNetwork |  
Published : Jun 23, 2025, 11:52 PM IST
23ಕೆಡಿವಿಜಿ6-ದಾವಣಗೆರೆ ಡಿಸಿ ಕಚೇರಿ ಬಳಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‌ರಿಗೆ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿಮನವಿ ಅರ್ಪಿಸಲಾಯಿತು. ..................23ಕೆಡಿವಿಜಿ7, 8-ಭದ್ರಾ ಡ್ಯಾಂ ಬಲ ದಂಡೆ ನಾಲೆ ಸೀಳಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿರುವುದನ್ನು ಖಂಡಿಸಿ ದಾವಣಗೆರೆ ಡಿಸಿ ಕಚೇರಿ ಬಳಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ದಾವಣಗೆರೆ, ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಬೇರೆ ಜಿಲ್ಲೆಗಳಿಗೆ ನೀರು ಪೂರೈಸುವ ಮೂಲಕ ದಾವಣಗೆರೆ ಹಾಗೂ ಹೊಸಪೇಟೆ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಸಂಕಷ್ಟ ತಂದೊಡ್ಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

-ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ , ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ಪ್ರತಿಭಟನೆ,-ನೆರೆ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡಲು ವಿರೋಧವಿಲ್ಲ, ನದಿ ನೀರನ್ನು ಕೊಡಲು ನಮ್ಮ ಸಹಕಾರಕನ್ನಡಪ್ರಭ ವಾರ್ತೆ, ದಾವಣಗೆರೆಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಬೇರೆ ಜಿಲ್ಲೆಗಳಿಗೆ ನೀರು ಪೂರೈಸುವ ಮೂಲಕ ದಾವಣಗೆರೆ ಹಾಗೂ ಹೊಸಪೇಟೆ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಸಂಕಷ್ಟ ತಂದೊಡ್ಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಎದುರು ನಡೆದ ಹೋರಾಟದಲ್ಲಿ ಭದ್ರಾ ಡ್ಯಾಂನ ಬಲದಂಡೆ ನಾಲೆಯ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ ವಿರುದ್ಧ ಘೋಷಣೆ ಕೂಗಿ ತಕ್ಷಣ‍ವೇ ಕಾಮಗಾರಿ ಸ್ಥಗಿತಗೊಳಿ ಸುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ ಭದ್ರಾ ಬಲದಂಡೆ ನಾಲೆಯನ್ನು ಸೀಳಿ, ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗ ನಗರಗಳಿಗೆ ಕುಡಿಯಲು 30 ಕ್ಯುಸೆಕ್ ನೀರು ಹರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಅತ್ಯಂತ ಗುಪ್ತವಾಗಿ ಕಾಮಗಾರಿಗೆ ಎಲ್ಲಾ ಸಿದ್ಥತೆ ಮಾಡಿದ್ದು ಸರಿಯಲ್ಲ. ಈ ಯೋಜನೆ ವಿಚಾರಕ್ಕೆ ಜೂ.23ರಂದು ಚಿಕ್ಕಮಗಳೂರು ಜಿಪಂ ಕಚೇರಿಯಲ್ಲಿ ಹೊಸದುರ್ಗ, ತರೀಕೆರೆ ಶಾಸಕರ ನೇತೃತ್ವದಲ್ಲಿ ಸಭೆ ಕರೆದಿದ್ದಾರೆ. ಆದರೆ, ಭದ್ರಾ ನಾಲೆ ಅಚ್ಚುಕಟ್ಟು ವ್ಯಾಪ್ತಿ ಶಾಸಕರಿಗೆ ಸಭೆಗೆ ಆಹ್ವಾನಿಸಿಲ್ಲ, ಅಭಿಪ್ರಾಯವನ್ನೂ ಕೇಳಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಅತ್ಯಂತ ಗುಪ್ತವಾಗಿ ಈ ಎಲ್ಲಾ ಕಾರ್ಯಗಳನ್ನು ಮಾಡುತ್ತಿ ರುವುದು ಎಷ್ಟರಮಟ್ಟಿಗೆ ಸರಿ? ಈಗಾಗಲೇ ಭದ್ರಾ ನಾಲಾ ವ್ಯಾಪ್ತಿಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹೊನ್ನಾಳಿ ಭಾಗದ ರೈತರು, ಅಚ್ಚುಕಟ್ಟು ಕೊನೆ ಭಾಗದ ರೈತರು ನೀರು ಹಾಯಿಸಲು ಕಷ್ಟದ ಪರಿಸ್ಥಿತಿ ಇದೆ. ಹೀಗಿರುವಾಗ 30 ಕ್ಯುಸೆಕ್‌ ನೀರನ್ನು ತರೀಕೆರೆ, ಚಿಕ್ಕಮಗಳೂರು, ಹೊಸದುರ್ಗಕ್ಕೆ ಒಯ್ಯಲು ಅನುಮತಿ ನೀಡಿ, ತರಾತುರಿಯಲ್ಲಿ ಕಾಮಗಾರಿಗೆ ಸಿದ್ಧತೆ ಮಾಡಿರುವುದು ಖಂಡನೀಯ ಎಂದು ಹೇಳಿದರು.

ಜನರಿಗೆ ಕುಡಿಯುವ ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಇಲಾಖೆ ಸಮರ್ಪಕ ನೀರು ನೀಡುತ್ತಿಲ್ಲ. ಈಗ 30 ಕ್ಯುಸೆಕ್ ನೀರನ್ನು ಬೇರೆಕಡೆ ಕೊಟ್ಟರೆ ಈಗಾಗಲೇ ಶೇ.40ರಷ್ಟು ಅಚ್ಚುಕಟ್ಟು ಪ್ರದೇಶ ಕಳೆದುಕೊಂಡ ರೈತರು ಕ್ರಮೇಣ ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲೂಕುಗಳ ಜಮೀನುಗಳಿಗೆ ಭದ್ರಾ ನೀರೇ ಮರೀಚಿಕೆಯಾಗಲಿದೆ. ನದಿಯಿಂದ ನೀರು ಒಯ್ಯಲು ನಮ್ಮ ಅಭ್ಯಂತರವಿಲ್ಲ. ಇದಕ್ಕೆ ನಾವೂ ಸಹಕಾರ ನೀಡುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ನಾಲೆಯಿಂದ ನೀರು ಒಯ್ಯಲು ಬಿಡುವುದಿಲ್ಲ. ಭದ್ರಾ ಬಲದಂಡೆ ನಾಲೆಯ ಈ ಯೋಜನೆ ತಕ್ಷಣವೇ ಸರ್ಕಾರ ಕೈಬಿಡಲಿ ಎಂದು ತಾಕೀತು ಮಾಡಿದರು.

ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಭದ್ರಾ ಡ್ಯಾಂ ನಿರ್ಮಾಣವಾಗಿ ದಶಕಗಳು ಕಳೆದಿವೆ. ಅಲ್ಲದೇ, ಭದ್ರಾ ಡ್ಯಾಂನ ಬಫರ್ ಝೋನ್‌ನಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಜಲಾಶಯದ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಆದರೆ, ತರೀಕೆರೆ, ಚಿಕ್ಕಮಗಳೂರು, ಹೊಸದುರ್ಗಕ್ಕೆ ನೀರು ಕೊಡಲು ಭದ್ರಾ ಡ್ಯಾಂನ ಬಲದಂಡೆ ನಾಲೆಯಲ್ಲಿ ಸುಮಾರು 8 ಅಡಿ ಆಳದಲ್ಲಿ ಪೈಪ್ ಲೈನ್ ಅಳವಡಿಸಿ ಕಾಮಗಾರಿ ಸದ್ದಿಲ್ಲದೇ ಮಾಡಲು ಹೊರಟಿರುವುದು ಖಂಡನೀಯ

ಯಾವುದೇ ಕಾರಣಕ್ಕೂ ಇಂತಹ ಅಪಾಯಕಾರಿ ಹಾಗೂ ಅಚ್ಚುಕಟ್ಟು ರೈತರ ಪಾಲಿಗೆ ಮಾರಕವಾದ ಯೋಜನೆಗೆ ನಾವು ಅವಕಾಶ ನೀಡುವುದಿಲ್ಲ ಎಂದರು. ಭದ್ರಾ ನಾಲೆ ದಾವಣಗೆರೆ ಜಿಲ್ಲೆಗೆ ಜೀವನಾಡಿ. ಅವೈಜ್ಞಾನಿಕ ಕಾಮಗಾರಿಯಿಂದ ದಾವಣಗೆರೆ ಜಿಲ್ಲೆ, ಹೊಸಪೇಟೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ರೈತರ ಬದುಕಿನ ಜೊತೆಗೆ ರಾಜ್ಯ ಸರ್ಕಾರ, ನೀರಾವರಿ ಇಲಾಖೆ ಅಧಿಕಾರಿಗಳು ಆಟವಾಡು ವು ದನ್ನು ಸಹಿಸಲು ಸಾಧ್ಯವಿಲ್ಲ. ಅಚ್ಚುಕಟ್ಟು ರೈತರ ಹೋರಾಟ ತೀವ್ರ ಸ್ವರೂಪ ಪಡೆವ ಮುನ್ನ ಸರ್ಕಾರ ಇಂತಹ ಕಾಮಗಾರಿ ನಿಲ್ಲಿಸಲಿ ಎಂದು ಒತ್ತಾಯಿಸಿದರು.

ನಂತರ ಭದ್ರಾ ಡ್ಯಾಂಗೆ ಮುಖಂಡರು, ಕಾರ್ಯಕರ್ತರು ತೆರಳಿದರು. ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಅಣಬೇರು ಜೀವನಮೂರ್ತಿ, ಬಿ.ಎಸ್.ಜಗದೀಶ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಎ.ವೈ.ಪ್ರಕಾಶ, ಅಣ್ಣೇಶ ಕುಮಾರನ ಹಳ್ಳಿ, ಹರಿಹರದ ಲಿಂಗರಾಜ ಹಿಂಡಸಘಟ್ಟ, ಶಾಂತರಾಜ ಪಾಟೀಲ, ಮುರುಗೇಶ ಆರಾಧ್ಯ, ಶಿವನಹಳ್ಳಿ ರೇಶ, ಜಿ.ಎಸ್.ಶ್ಯಾಮ್ ಮಾಯಕೊಂಡ, ಎಂ.ಹಾಲೇಶ, ಕೆ.ಆರ್.ವಸಂತ ಕುಮಾರ, ಎಚ್.ಎನ್. ಶಿವಕುಮಾರ, ಅಣಬೇರು ನಂದಕುಮಾರ, ಶಿವರಾಜ ಪಾಟೀಲ, ಎಸ್.ಟಿ.ಯೋಗೇಶ್ವರ ಯಗ್ಗಪ್ಪ, ಸಿದ್ದೇಶ, ಸುರೇಶ ಗಂಡುಗಾಳೆ, ಜಯಪ್ರಕಾಶ, ಹೇಮಂತ ಕುಮಾರ, ದೊಗ್ಗಳ್ಳಿ ವೀರೇಶ, ಸಂಗನಗೌಡ್ರು, ಅನಿಲ್ ಕತ್ತಲಗೆರೆ, ಶ್ಯಾಗಲೆ ದೇವೇಂದ್ರಪ್ಪ, ಅಣಜಿ ಗುಡ್ಡೇಶ, ವಿಜಯಕುಮಾರ ಪಕ್ಷದ ಕಾರ್ಯಕರ್ತರು ಇದ್ದರು.

23ಕೆಡಿವಿಜಿ6-

ದಾವಣಗೆರೆ ಡಿಸಿ ಕಚೇರಿ ಬಳಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‌ರಿಗೆ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.

..................23ಕೆಡಿವಿಜಿ7, 8-ಭದ್ರಾ ಡ್ಯಾಂ ಬಲ ದಂಡೆ ನಾಲೆ ಸೀಳಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿರುವುದನ್ನು ಖಂಡಿಸಿ ದಾವಣಗೆರೆ ಡಿಸಿ ಕಚೇರಿ ಬಳಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ