ಮಂಗಳೂರು: ನರ್ಸಿಂಗ್ ಕೇವಲ ರೋಗಿಗಳ ಆರೈಕೆಯಲ್ಲದೆ, ಆಡಳಿತ ಮತ್ತು ಸಂಶೋಧನಾ ಕ್ಷೇತ್ರಗಳಿಗೂ ವಿಸ್ತರಿಸಿದೆ. ಯಾವುದೇ ತಂತ್ರಜ್ಞಾನವು ನರ್ಸ್‌ಗಳ ಮಾನವೀಯ ಸ್ಪರ್ಶವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಭುವನೇಶ್ವರದ ಏಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಆಶಾ ಪಿ.ಶೆಟ್ಟಿ ಹೇಳಿದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ.ಫೌಸ್ಟಿನ್ ಲೂಕಾಸ್ ಲೋಬೋ, ಆಡಳಿತಾಧಿಕಾರಿಗಳಾದ ಡಾ.ಮೈಕೆಲ್ ಎಲ್.ಸಾಂತುಮಾಯೋರ್, ಫಾ.ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ಕೆ, ಪ್ರಾಂಶುಪಾಲರಾದ ಸಿಸ್ಟರ್ ಡಾ.ಧನ್ಯ ದೇವಸ್ಯ, ಪ್ರೊ.ಸಿಂಥಿಯಾ ಸಾಂತುಮಾಯೋರ್ ಮತ್ತಿತರು ಇದ್ದರು.
ಪದವೀಧರ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರ ಶೈಕ್ಷಣಿಕ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಸಂಸ್ಥೆಯ ಸಂಸ್ಥಾಪಕ ರೆ.ಫಾ.ಆಗಸ್ಟಸ್ ಮುಲ್ಲರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.ಪ್ರಶಸ್ತಿ ಮತ್ತು ಪುರಸ್ಕಾರಗಳು:ಸಮಾರಂಭದಲ್ಲಿ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಕಾಲೇಜ್ ಆಫ್ ನರ್ಸಿಂಗ್ ಹಾಗೂ ಸ್ಪೀಚ್ ಆಂಡ್ ಹಿಯರಿಂಗ್ ವಿಭಾಗದ ಪದವೀಧರರಿಗೆ ಪದವಿ ಪ್ರಮಾಣಪತ್ರ ನೀಡಿ ವೃತ್ತಿಪರ ಪ್ರಮಾಣ ವಚನ ಬೋಧಿಸಲಾಯಿತು.ನರ್ಸಿಂಗ್ ವಿಭಾಗದಲ್ಲಿ ಪ್ರಿಯಾ ಅಸ್ಮಿ ಡಿ ಸೋಜಾ (ಜಿ.ಎನ್.ಎಂ.), ದೀಪಾ ರಾಬರ್ಟ್ ಕೆ (ಬಿಎಸ್ಸಿ ನರ್ಸಿಂಗ್ ), ದಿವ್ಯ ಜ್ಯೋತಿ ಕ್ರಾಸ್ತಾ (ಪಿ.ಬಿ.ಬಿ.ಎಸ್ಸಿ) ಮತ್ತು ಮರ್ಲಿನ್ ಪ್ರಿಯಾ ಮೊರಾಸ್ (ಎಂ. ಎಸ್ಸಿ. ನರ್ಸಿಂಗ್ ) ಅವರು ಅತ್ಯುತ್ತಮ ಸಾಧನೆಗಾಗಿ ಪುರಸ್ಕೃತರಾದರು.
ರೇಶಲ್ ಮಸ್ಕರೇನ್ಹಸ್ ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಸಮಗ್ರ ಶ್ರೇಷ್ಠತೆ. ಮನಹರ್ ಮುಸ್ಲಿಮಾ ಕಾಸಿಂ ಜಿಎನ್ಎಂನಲ್ಲಿ ಸಮಗ್ರ ಶ್ರೇಷ್ಠತೆ, ಕ್ಯಾರೊಲ್ ಜೆವಿಟಾ ಲೋಬೋ ಬಿ.ಎಎಸ್ಎಲ್ಪಿ ವಿಭಾಗದ 2022-2026ರ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿ ಪುರಸ್ಕಾರವನ್ನು ಸ್ವೀಕರಿಸಿದರು. ಚರಿತಾ ಲೂಯಿಸ್ ಮತ್ತು ಡಾ. ಕ್ಯಾಲಿಡಾ ಫ್ರೀಡಾ ಪಿಂಟೋ ನಿರೂಪಿಸಿದರು.