ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರಿಂದ ಅವರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಬಹುದು: ಡಾ.ಡಿ.ನಟರಾಜ್‌

KannadaprabhaNewsNetwork |  
Published : Apr 13, 2025, 02:03 AM IST
53 | Kannada Prabha

ಸಾರಾಂಶ

ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ರಕ್ತದ ಮಾದರಿ ಪರೀಕ್ಷಿಸಿ ಅವರಿಗೆ ಅಗತ್ಯ ಪೌಷ್ಟಿಕಾಂಶವುಳ್ಳ ಆಹಾರ ತಯಾರಿಸಿ ಅಗತ್ಯ ದಿನಗಳವರೆಗೆ ನೀಡಿ, ಆ ಮಕ್ಕಳಲ್ಲಿ ಆಗುವ ಬದಲಾವಣೆ ಅಭ್ಯಸಿಸಲು ರಾಜ್ಯಾದ್ಯಂತ ಪೂರಕ ಆಹಾರ ಪೂರೈಸಲು ಸಿಎಫ್.ಟಿಆರ್.ಐ ಸಂಸ್ಥೆ ಪ್ರಥಮ ಹಂತದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪರೀಕ್ಷೆಗೆ ಮುಂದಾಗಿದೆ. ಕಾರ್ಯಕ್ರಮದಡಿ ಕೃಷ್ಣರಾಜನಗರ, ಭೇರ್ಯ ಸಾಲಿಗ್ರಾಮಗಳಲ್ಲಿ ರಕ್ತಮಾದರಿ ಸಂಗ್ರಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರಿಂದ ಅವರಲ್ಲಿನ ಅಪೌಷ್ಟಿಕತೆ ಹೋಗಲಾಡಿಸ ಬಹುದು, ಅಪೌಷ್ಟಿಕತೆಯಿಂದ ಯಾವ ಮಗುವು ಬಳಲಬಾರದು ಎಂದು ತಾಲೂಕಿನಲ್ಲಿ ಅಪೌಷ್ಟಿಕತೆ ಕುರಿತಯ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಹೇಳಿದರು.

ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಿಂದ ಜಿಲ್ಲೆಯ ರಕ್ತಹೀನತೆ ಹೊಂದಿರುವ ಮತ್ತು ಅಪೌಷ್ಟಿಕ ಮಕ್ಕಳಿಗಾಗಿ ಪೌಷ್ಟಿಕಾಂಶದ ಮಧ್ಯಸ್ಥಿಕೆ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಆಸ್ಪತ್ರೆಗೆ ವೈದ್ಯಾಧಿಕಾರಿಗಳ ತಂಡದೊಂದಿಗೆ ತೆರಳಿ ಅಪೌಷ್ಟಿಕ ಮಕ್ಕಳು ಮತ್ತು ಸಾಧಾರಣ ತೂಕದ ಮಕ್ಕಳ ರಕ್ತದ ಮಾದರಿ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪೌಷ್ಟಿಕತೆ ಇರುವ ಮಕ್ಕಳನ್ನು ಪರೀಕ್ಷಿಸಿ ಅಗತ್ಯ ಚಿಕಿತ್ಸೆ ಹಾಗೂ ಆಹಾರ ನೀಡಿದಲ್ಲಿ ಆವರಣಲ್ಲಿರುವ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯ ವೃದ್ಧಿಸಬಹುದಾಗಿದ್ದು, ಇದೊಂದು ವಿಶೇಷ ಪ್ರಾಯೋಗಿಕ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.

ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ರಕ್ತದ ಮಾದರಿ ಪರೀಕ್ಷಿಸಿ ಅವರಿಗೆ ಅಗತ್ಯ ಪೌಷ್ಟಿಕಾಂಶವುಳ್ಳ ಆಹಾರ ತಯಾರಿಸಿ ಅಗತ್ಯ ದಿನಗಳವರೆಗೆ ನೀಡಿ, ಆ ಮಕ್ಕಳಲ್ಲಿ ಆಗುವ ಬದಲಾವಣೆ ಅಭ್ಯಸಿಸಲು ರಾಜ್ಯಾದ್ಯಂತ ಪೂರಕ

ಆಹಾರ ಪೂರೈಸಲು ಸಿಎಫ್.ಟಿಆರ್.ಐ ಸಂಸ್ಥೆ ಪ್ರಥಮ ಹಂತದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪರೀಕ್ಷೆಗೆ ಮುಂದಾಗಿದೆ. ಕಾರ್ಯಕ್ರಮದಡಿ ಕೃಷ್ಣರಾಜನಗರ, ಭೇರ್ಯ ಸಾಲಿಗ್ರಾಮಗಳಲ್ಲಿ ರಕ್ತಮಾದರಿ ಸಂಗ್ರಹಿಸಲಾಗಿದೆ ಎಂದರು.

ತಾಲೂಕಿನಲ್ಲಿ ಐದು ವರ್ಷದೊಳಗಿನ 11,200 ಮಕ್ಕಳಲ್ಲಿ, 14 ತೀವ್ರತರವಾದ ಅಪೌಷ್ಟಿಕತೆ ಹಾಗೂ 120 ಮಕ್ಕಳಲ್ಲಿ ಸಾಧಾರಣ ಅಪೌಷ್ಟಿಕತೆಯಿದ್ದು, ಇದ್ದು ಅವರಿಗೆ ವೈದ್ಯರ ಸಲಹೆ ಮೇರೆಗೆ ಸೂಕ್ತ ಕ್ರಮವಹಿಸಿ ಉತ್ತಮ ಆಹಾರದೊಂದಿಗೆ ಆರೈಕೆ ಮಾಡಲಾಗುತ್ತದೆ ಎಂದರು.

ಆದರೂ ಕೆಲ ಮಕ್ಕಳು ಹುಟ್ಟಿನ ನ್ಯೂನ್ಯತೆ, ಪೋಷಕರ ನಿರ್ಲಕ್ಷತೆ, ಶಿಕ್ಷಣದ ಕೊರತೆಯಿಂದ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ, ಅಂತಹ ಮಕ್ಕಳಿಗೆ ವಿಶೇಷ ರಕ್ತಪರೀಕ್ಷೆಗೆ ಒಳಪಡಿಸಿ ಅದರಿಂದ ಬಂದ ಫಲಿತಾಂಶದ ನಂತರ ಅಭ್ಯಸಿಸಿ ಅದಕ್ಕೆ ತಕ್ಕಂತಹ ಎಲ್ಲ ಕೊರತೆಗಳನ್ನು ನೀಗಿಸುವ ಆಹಾರ ತಯಾರಿಸಿ ವಿಶೇಷ ಮಕ್ಕಳಿಗೆ ಕೊಟ್ಟು ಆರೈಕೆ ಮಾಡುವ ಕೆಲಸ ಮಾಡಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಎಂ. ಅಣ್ಣಯ್ಯ, ಮೈಸೂರಿನ ಸಿಎಫ್.ಟಿಆರ್.ಐನ ಸಿಬ್ಬಂದಿ, ಡಾ. ಅಶೋಕ್, ಡಾ. ಸೌಜನ್ಯ, ಡಾ. ನವೀನ್ ಕುಮಾರ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ. ರಮೇಶ್, ಮಹೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ. ರೇಖಾ, ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ಪಾರ್ವತಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿ, ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌