ಮಡಿಕೇರಿ ತಾಲೂಕು ಸಾಧಕ ಅಂಗನವಾಡಿ ಕಾರ್‍ಯಕರ್ತೆಯರಿಗೆ ಸನ್ಮಾನ

KannadaprabhaNewsNetwork |  
Published : Jan 11, 2026, 03:00 AM IST
ಚಿತ್ರ :  10ಎಂಡಿಕೆ1 : ರೆಡ್ ಕ್ರಾಸ್ ನಿಂದ ಮಡಿಕೇರಿ ತಾಲೂಕಿನ ಅಂಗನವಾಡಿಗಳ ಸಾಧಕಿ ಕಾಯ೯ಕತೆ೯ಯರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದಿಂದ ಆಯೋಜಿತವಾದ ಮಡಿಕೇರಿ ತಾಲೂಕಿನ ಅಂಗನವಾಡಿಗಳ ಸಾಧಕಿ ಕಾರ್‍ಯಕತೆ೯ಯರಿಗೆ ಸನ್ಮಾನ ಕಾಯ೯ಕ್ರಮ ನಡೆಯಿತು.

ಮಡಿಕೇರಿ: ಪುಟ್ಟ ಮಕ್ಕಳು ಮನೆಗಿಂತ ಹೆಚ್ಚಾಗಿ ಅಂಗನವಾಡಿಗಳಲ್ಲೇ ಪಾಲನೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಅಂಗನವಾಡಿ ಕಾರ್‍ಯಕತೆ೯ಯರ ಪಾತ್ರ ಮಹತ್ವದ್ದು ಎಂದು ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಅಭಿಪ್ರಾಯಪಟ್ಟರು. ನಗರದ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದಿಂದ ಆಯೋಜಿತವಾದ ಮಡಿಕೇರಿ ತಾಲೂಕಿನ ಅಂಗನವಾಡಿಗಳ ಸಾಧಕಿ ಕಾರ್‍ಯಕತೆ೯ಯರಿಗೆ ಸನ್ಮಾನ ಕಾಯ೯ಕ್ರಮ ಉದ್ಗಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಪ್ರೀತಿ, ಬುದ್ದಿಯನ್ನು ಅಂಗನವಾಡಿಗಳಲ್ಲಿ ಕಾರ್‍ಯಕತೆ೯ಯರು ಕಲಿಸಬೇಕು. ಅಂಗನವಾಡಿ ಶಿಕ್ಷಕಿಯರು ಮಕ್ಕಳ ಪಾಲಿಗೆ ದೇವರ ಸಮಾನವಾಗಿದ್ದು, ಇಂಥ ಮಕ್ಕಳನ್ನು ಹೆಚ್ಚಿನ ಮಮತೆಯಿಂದ ಬಾಲ್ಯದಲ್ಲಿ ಬೆಳೆಸಬೇಕು ಎಂದು ಕಲಾವತಿ ಹೇಳಿದರು.ಮಡಿಕೇರಿ ನಗರಾಭಿವೖದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್‍ಯವೈಖರಿ ಶ್ಲಾಘನೀಯವಾಗಿದೆ. ಕೊಡಗಲ್ಲ್ಲೂಮಳೆಗಾಲದಲ್ಲಿ ಕಾಳಜಿ ಕೇಂದ್ರದ ಮೂಲಕ ರೆಡ್ ಕ್ರಾಸ್ ನಿರಾಶ್ರಿತರಿಗೆ ನೆರವಾಗುತ್ತಾ, ಅಗತ್ಯವಿದ್ದಲೆಲ್ಲ ಕಷ್ಯದಲ್ಲಿದ್ದವರಿಗೆ ನೆರವಾಗುತ್ತಿದೆ ಎಂದರು.

ಅಂಗನವಾಡಿ ಕಾಯ೯ಕತೆ೯ಯರ ಶ್ರಮ ಸಮಾಜದಲ್ಲಿ ಸದಾ ಶ್ಲಾಘನೀಯವಾಗಿದ್ದು, ಪುಟ್ಟ ಮಕ್ಕಳಿಗೆ ಉತ್ತಮ ಬಾಲ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಮಕ್ಕಳ ಏಳಿಗೆಯಲ್ಲಿ ಮಹತ್ವದ ಕಾಯ೯ನಿವ೯ಹಿಸುತ್ತಿರುವ ಅಂಗನವಾಡಿ ಕಾಯ೯ಕತೆ೯ಯರ ಸೇವೆಯನ್ನು ಗುರುತಿಸಿ ಸನ್ಮಾನದ ಗೌರವ ನೆರವೇರಿಸುವ ಮೂಲಕ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕಾಯ೯ಕ್ರಮ ರೂಪಿಸಿದೆ ಎಂದೂ ಅವರು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆಯ ಕೊಡಗು ಜಿಲ್ಲಾ ಪ್ರಭಾರ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀತ೯ನ್ ಮಾತನಾಡಿ, 1975ರಲ್ಲಿ 100 ಅಂಗನವಾಡಿಗಳು ಕನಾ೯ಟಕದಲ್ಲಿ ಪ್ರಾರಂಭವಾಗಿದ್ದವು. ಮಾಸಿಕ 150 ರು. ವೇತನದಲ್ಲಿ ಪ್ರಾರಂಭವಾದ ಅಂಗನವಾಡಿ ಕಾಯ೯ಕತೆ೯ಯರ ಕೆಲಸ ಈಗಲೂ ಸಕ್ರಿಯವಗಿ ಮುಂದುವರೆದಿದೆ. ಈಗ ಸಮಾಜದ ಇತರೆಲ್ಲ ನಾಗರಿಕರಿಗೆ ಎಲ್ಲ ಸೌಲಭ್ಯಗಳು ದೊರಕುತ್ತಿದ್ದರೂ ಅಂಗನವಾಡಿ ಕಾಯ೯ಕತೆ೯ಯರಿಗೆ ಮಾಸಿಕ ಕೇವಲ 12 ಸಾವಿರ ರು. ವೇತನ ಮಾತ್ರವಿದೆ. ಅಲ್ಪ ವೇತನದಲ್ಲೇ ಅಂಗನವಾಡಿ ಕಾಯ೯ಕತೆ೯ಯರು ಜೀವನ ರೂಪಿಸಿಕೊಳ್ಳಬೇಕಾಗಿದೆ ಎಂದರು. ಅಂಗನವಾಡಿ ಮಕ್ಕಳ ಶ್ರೇಯೋಭಿವೖದ್ದಿಗಾಗಿ ಮಹತ್ವದ ನೆರವು. ಮಕ್ಕಳಿಗೆ ಸ್ವಪ್ರಯತ್ನದ ಮೇರೆಗೆ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವಲ್ಲಿ ಶ್ರಮ ವಹಿಸುತ್ತಿರುವ ಅಂಗನವಾಡಿ ಕಾಯ೯ಕತೆ೯ಯರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತಿದೆ. ಅಂಗನವಾಡಿ ಕಾಯ೯ಕತೆ೯ಯರೇ ಮಕ್ಕಳಿಗೆ ಮೊದಲ ಗುರುವಿನಂತೆ ಇದ್ದಾರೆ ಎಂದು ಶ್ಲಾಘಿಸಿದರು. ಸಕಾ೯ರ ಎಷ್ಟೇ ಕೆಲಸ ಕಾಯ೯ಗಳ ಗುರಿ ನೀಡಿದರೂ ಬೇಸರ ಪಟ್ಟಕೊಳ್ಳದೆ, ನಿಲ೯ಕ್ಷ್ಯ ವಹಿಸದೆ ಶ್ರದ್ದೆಯಿಂದ ಎಲ್ಲ ಕೆಲಸಗಳನ್ನೂ ಅಂಗನವಾಡಿ ಕಾಯ೯ಕತೆ೯ಯರು ನಿವ೯ಹಿಸುತ್ತಿದ್ದಾರೆ ಎಂದೂ ಸವಿತಾ ಹೇಳಿದರು.ರೆಡ್ ಕ್ರಾಸ್ ಕೊಡಗು ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಜಾಗತಿಕವಾಗಿ ಅತ್ಯಂತ ಮಹತ್ವದ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ಜಗತ್ತಿನ ಎಲ್ಲೇ ಆದರೂ ಶಾಂತಿ ಸ್ಥಾಪನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದೆ ಎಂದರು. ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಠಾರೋತ್ಸವ: ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕಾರ ಸೇವೆ
ಹಿಪ್ಪು ನೇರಳೆ ಮತ್ತು ರೇಷ್ಮೆ ಲಾಭದಾಯಕ ಬೆಳೆಗಳು