ಗಂಗಾವತಿ: ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಸುಂಸ್ಕೃತರಾಗಿ ಬೆಳೆಯಬೇಕು ಎಂದು ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.
ವಿದ್ಯಾರ್ಥಿಗಳು ಪರೀಕ್ಷಾ ಪೂರ್ವದಲ್ಲಿ ದೈವ ಸ್ವರೂಪರಾದ ತಮ್ಮ ತಂದೆ-ತಾಯಿಗಳ ಆಶೀರ್ವಾದ ಪಡೆಯಲು ಅನುಕೂಲವಾಗುವಂತೆ ಒಟ್ಟು 594 ವಿದ್ಯಾರ್ಥಿಗಳಿಂದ ಅವರ ತಂದೆ ತಾಯಿಗಳಿಗೆ ಪಾದಪೂಜಾ ನೆರವೇರಿಸಿದರು ಎಂದು ತಿಳಿಸಿದರು.
ನಮ್ಮ ಸಂಸ್ಥೆಯ ಸಂಪ್ರದಾಯದಂತೆ ಪ್ರತಿ ವರ್ಷವೂ 10ನೇಯ ತರಗತಿಯ ವಿದ್ಯಾರ್ಥಿಗಳಿಂದ ಅವರ ತಂದೆ ತಾಯಿಗಳಿಗೆ ಪಾದಪೂಜೆ ಮಾಡಿಸುವದರ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಪ್ರಯತ್ನಿಸುತ್ತಿದ್ದು. ಈ ಮೂಲಕ ತಂದೆ-ತಾಯಿ ಪೂಜಿಸುವ,ಗೌರವಿಸುವ ಮನೋಭಾವ ಮೂಡಿಸಿ ಭವಿಷ್ಯದ ಸುಸಂಸ್ಕೃತ ನಾಗರಿಕರನ್ನಾಗಿಸುವ ಸಣ್ಣ ಪ್ರಯತ್ನ ಮಾಡಿದ್ದು, ಎಲ್ಲ ವಿದ್ಯಾರ್ಥಿಗಳು ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಮೂಲಕ ಉತ್ತಮ ಮೌಲ್ಯ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಉಪಾಧ್ಯಕ್ಷ ನೆಕ್ಕಂಟಿ, ಆದರ್ಶ ನಮ್ಮ ಸಂಸ್ಕೃತಿಯ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಮಾತೃ ದೇವೋಭವ, ಪಿತೃ ದೇವೋಭವ, ಆಚಾರ ದೇವೋಭವ, ಅತಿಥಿ ದೇವೋಭವ ಎಂಬ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗಂಗಾವತಿಯ ಲಿಟಲ್ ಹಾರ್ಟ್ಸ್ ಸ್ಕೂಲ್‌ನ ಕಾರ್ಯದರ್ಶಿ ಶ್ರೀಜಗನ್ನಾಥ್ ಆಲಂಪಲ್ಲಿ ಮಾತನಾಡಿ, ಇಂದು ಮಾನವೀಯ ಮೌಲ್ಯಗಳು ಅಧಃಪತನ ಹೊಂದುತ್ತಿದ್ದು, ಪಾಲಕರು ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಲು ಒತ್ತು ನೀಡಬೇಕು, ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಭಾವನೆಗಳಿಗೆ ಸ್ಪಂದಿಸಬೇಕೆಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಸಾಲೋಣಿ ವೀರೇಶ, ಮಾಜಿ ನಗರಸಭಾ ಅಧ್ಯಕ್ಷ ಕೆ.ವೆಂಕಟೇಶ್, ವಿದ್ಯಾನಿಕೇತನ ಪಿಯು ಕಾಲೇಜಿನ ನಿರ್ದೇಶಕ ಡಿ. ಚೇತನ್, ಖ್ಯಾತ ವಾಣಿಜ್ಯೋದ್ಯಮಿ ಡಿ.ವೆಂಕಟಪತಿ ರಾಜು, ಗಂಗಾಧರಗೌಡ ನವಲಿ, ವಕೀಲ ಚಿಲುಕೂರಿ ರಮೇಶ, ಗಂಗಾವತಿಯ ಕೆನರಾ ಬ್ಯಾಂಕ್‌ನ ಸೀನಿಯರ್ ಮ್ಯಾನೇಜರ್ ಸುರೇಂದ್ರ ಜೋಶಿ, ಸುರೇಶ ಎಚ್ ಶರಣಪ್ಪ ಗದ್ದಿ, ಉಮೇಶ ನಾಯಕ್, ವಿದ್ಯಾನಿಕೇತನ ಪಿ.ಯು, ಕಾಲೇಜಿನ ನಿರ್ದೇಶಕರು ಮತ್ತು ಪ್ರಾಂಶುಪಾಲ ಎ.ಉಮಾಶಂಕರ್ ರಾವ್, ನರೇಶ್.ವೈ,ಡಿ.ಸುಬ್ಬರಾಜು, ಅಭಿಷೇಕ ಡಿ.ಎಂ, ಪ್ರಾಂಶುಪಾಲ ಸುಭದ್ರಾದೇವಿ, ಕೃಷ್ಣವೇಣಿ. ಜಿ. ನಾಗೇಶ್ವರ್‌ರಾವ್ ಲಕ್ಷ್ಮ್ಮಮ್ಮ ಜೆ, ಮಂಜುನಾಥ, ಮಲ್ಲನಗೌಡ ಪಾಟೀಲ್ ,ಕಾಳೇಶ ಇತರರು ಭಾಗವಹಿಸಿದ್ದರು.