ಮರಗಳ ಕಟಾವು: ವಿದ್ಯುತ್ ವ್ಯತ್ಯಯ

KannadaprabhaNewsNetwork |  
Published : Jun 29, 2024, 12:38 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ಟಿಬಿ ವೃತ್ತದಿಂದ ತಾಲೂಕು ಕಚೇರಿ ಬಳಿ ರಸ್ತೆ ಅಗಲೀಕರಣಕ್ಕಾಗಿ ಮರಗಳ ತೆರವು ಕಾರ್ಯಾಚರಣೆ.

ಹಿರಿಯೂರು: ನಗರದ ಟಿಬಿ ವೃತ್ತದಿಂದ ತಾಲೂಕು ಕಚೇರಿ ಬಳಿ ವೇದಾವತಿ ಸೇತುವೆವರೆಗೂ ರಸ್ತೆ ಅಗಲೀಕರಣದ ಹಿನ್ನೆಲೆ ತಾಲೂಕು ಕಚೇರಿ ಮುಂಭಾಗದ ರಸ್ತೆ ಎರಡೂ ಬದಿ ಗೂಡಂಗಡಿ ಹಾಗೂ ಸಣ್ಣಪುಟ್ಟ ಮರಗಳನ್ನು ಶುಕ್ರವಾರದಿಂದ ನಗರಸಭೆ ಸಿಬ್ಬಂದಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದೀಗ ರಸ್ತೆ ಅಗಲೀಕರಣ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದು, ಸಾರ್ವಜನಿಕರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.

ವಿದ್ಯುತ್ ವ್ಯತ್ಯಯ:ರಸ್ತೆ ಅಗಲೀಕರಣದ ಪ್ರಯುಕ್ತ ರಸ್ತೆ ಎರಡೂ ಬದಿ ಮರಗಳ ಕಟಾವು ಶನಿವಾರದಿಂದ ಶುರುವಾಗಲಿರುವುದರಿಂದ ಹಿರಿಯೂರು ಹಳೇ ವಿದ್ಯುತ್ ಉಪಕೇಂದ್ರದಿಂದ ಹೊರಹೋಗುವ ಎಫ್ 9 ಹುಳಿಯಾರು ರಸ್ತೆ, ಎಫ್ 3 ದೊಡ್ಡಘಟ್ಟ, ಎನ್ ಜೆ ವೈ 11 ಕೆವಿ ಪ್ರಸರಣ ಮಾರ್ಗದಲ್ಲಿ ನಗರಸಭೆ ಪೌರಾಯುಕ್ತರ ಕೋರಿಕೆ ಮೇರೆಗೆ 30ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಕುವೆಂಪು ನಗರ, ಪುಷ್ಪಾoಜಲಿ ಟಾಕೀಸ್, ಹರಿಶ್ಚಂದ್ರ ಘಾಟ್, ಸಾಯಿ ಗಾರ್ಡನ್, ಅವಧಾನಿ ನಗರ, ಸಿಎಂ ಬಡಾವಣೆ, ಮೇರಿ ರಸ್ತೆ, ಗಾಂಧಿ ವೃತ್ತ, ತಾಲೂಕು ಕಛೇರಿ, ಹುಳಿಯಾರು ರಸ್ತೆ, ಗಾಡಿ ಬಸಣ್ಣ ಬಡಾವಣೆ, ಲಕ್ಷ್ಮಮ್ಮ ಬಡಾವಣೆ, ಕೆ ಎಂ ಕೊಟ್ಟಿಗೆ, ಆಜಾದ್ ನಗರ ದೊಡ್ಡಘಟ್ಟ, ಲಕ್ಕವ್ವನಹಳ್ಳಿ, ಸೀಗೆಹಟ್ಟಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ರೈತರು, ಗ್ರಾಹಕರು, ಸಾರ್ವಜನಿಕರು ಸಹಕರಿಸಬೇಕೆಂದು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!