ಸಂತಸ, ಸಹಬಾಳ್ವೆ ಕಟ್ಟಿಕೊಡುವ ಹಬ್ಬಗಳು: ಪ್ರೊ. ಆರ್.ಎಲ್. ಪೊಲೀಸಪಾಟೀಲ

KannadaprabhaNewsNetwork |  
Published : Oct 03, 2025, 01:07 AM IST
12ಎಂಡಿಜಿ3, ಮುಂಡರಗಿ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದಿಂದ ವಿಜಯ ದಶಮಿ ಅಂಗವಾಗಿ ಬನ್ನಿಮುಡಿಯುವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೊ.ಆರ್.ಎಲ್.ಪೊಲೀಸ್ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಮನುಷ್ಯನನ್ನು ಅರಿವಿನ ಜನ್ಮ ಎಂದು ಕರೆಯಲಾಗುತ್ತಿದೆ. ಹೀಗಾಗಿ ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವಿತಾವಧಿಯಲ್ಲಿ ಉತ್ತಮವಾದ ಕೆಲಸಗಳನ್ನು ಮಾಡಬೇಕು.

ಮುಂಡರಗಿ: ಹಬ್ಬಗಳೆಂದರೆ ಸಂತಸ, ಸಹಬಾಳ್ವೆ, ಶಾಂತಿ, ಅಭಿಮಾನ ಕಟ್ಟಿಕೊಡುವಂಥವುಗಳಾಗಿವೆ, ನಮ್ಮ ಸಂಪ್ರದಾಯ, ಸಂಸ್ಕೃತಿ ಆಚರಿಸುವುದಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸಪಾಟೀಲ ಹೇಳಿದರು.

ಮುಂಡರಗಿ ತಾಲೂಕು ಲಿಂಗಾಯತ ಪಂಚಮಸಾಲಿ ಸಂಘ, ಪಂಚಮಸಾಲಿ ಶಹರ ಘಟಕ, ಶಹರ ಯುವ ಘಟಕ, ಮಹಿಳಾ ಘಟಕ, ನೌಕರರ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ಚೆನ್ನಮ್ಮ ಸಮುದಾಯ ಭವನದ ಆವರಣದಲ್ಲಿ ಗುರುವಾರ ವಿಜಯ ದಶಮಿ ಅಂಗವಾಗಿ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯನನ್ನು ಅರಿವಿನ ಜನ್ಮ ಎಂದು ಕರೆಯಲಾಗುತ್ತಿದೆ. ಹೀಗಾಗಿ ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವಿತಾವಧಿಯಲ್ಲಿ ಉತ್ತಮವಾದ ಕೆಲಸಗಳನ್ನು ಮಾಡಬೇಕು. ಹೀಗಾಗಿ ಮನುಷ್ಯ ಅರಿವಿನ ಹೆಜ್ಜೆ ಇಡಬೇಕು ಎಂದರು.

ಸಮಾಜದ ಹಿರಿಯರಾದ ಡಾ. ಅನ್ನದಾನಿ ಮೇಟಿ ಮಾತನಾಡಿ, ಹಿರಿಯರಾದ ಸೋಮಣ್ಣ ಭಾವಿಹಳ್ಳಿವರಾದಿಯಾಗಿ ಎಲ್ಲ ಹಿರಿಯರ ಶ್ರಮದ ಫಲವಾಗಿ ಸಮಾಜ ಇಂದು ಬೆಳೆದು ನಿಂತಿದೆ. ಕಿತ್ತೂರು ಚೆನ್ನಮಾಜಿಯ ಸಮುದಾಯ ಭವನ ಪೂರ್ಣಗೊಂಡ ನಂತರ ಪಂಚಮಸಾಲಿ ಸಮಾಜದಿಂದ ಸಮಾಜದ ಎಲ್ಲ ಬಡ ಹಾಗೂ ಹಿಂದುಳಿದವರಿಗೆ ಸರ್ಕಾರದ ಸೌಲಭ್ಯಗಳನ್ನು‌ ಕೊಡಿಸಲು ಮುಂದಾಗಬೇಕು. ಐಎಎಸ್, ಕೆಎಎಸ್ ತರಬೇತಿ ಕೊಡಿಸುವ ಕಾರ್ಯ ಜರುಗಬೇಕು ಎಂದರು.

ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಿಂದ ಚೆನ್ನಮ್ಮಾಜಿ ವೃತ್ತ ನಿರ್ಮಾಣ ಮಾಡಿದ್ದು, ಅದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿದ್ದಾರೆ ಎಂದರು.

ಸಮಾಜದ ರಾಜ್ಯ ಘಟಕಕ್ಕೆ ಆಯ್ಕೆಯಾದ ನೇತ್ರಾವತಿ ಭಾವಿಹಳ್ಳಿ, ಮಂಜುನಾಥ ಮುಧೋಳ, ಶಿದ್ದಲಿಂಗಪ್ಪ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಹೊಟ್ಟೀನ, ಶಹರ ಘಟಕದ ಅಧ್ಯಕ್ಷ ಆರ್.ವೈ. ಪಾಟೀಲ, ನೌಕರರ ಸಂಘದ ಅಧ್ಯಕ್ಷ ಎನ್.ಎಂ. ಕುಕನೂರು, ಶಹರ ಯುವ ಘಟಕದ ಅಧ್ಯಕ್ಷ ಪ್ರಮೋದ ಇನಾಮತಿ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ರಜನೀಕಾಂತ ದೇಸಾಯಿ, ಷಡಕ್ಷರಯ್ಯ ಅಳವಂಡಿಮಠ, ಅಶೋಕ ಹಂದ್ರಾಳ, ವಿ.ಎಫ್. ಗುಡದಪ್ಪನವರ, ಮಂಜುನಾಥ ಇಟಗಿ, ಎಸ್‌.ಎಸ್. ಇನಾಮತಿ, ಈರಣ್ಣ ಯಲಿಗಾರ, ಸಿ.ವಿ. ಪಾಟೀಲ, ವಿ.ಎಸ್. ಗಟ್ಟಿ, ಬಸವರಾಜ ಇಟಗಿ, ಸಿ.ಎಸ್. ಅರಸನಾಳ, ಡಾ. ವಿ.ಕೆ. ಸಂಕನಗೌಡ್ರ, ಬಸವರಾಜ ದೇಸಾಯಿ, ಅಂದಪ್ಪ ಹಂದ್ರಾಳ, ಎಂ.ಎಲ್. ಪೊಲೀಸ್ ಪಾಟೀಲ, ಈರಣ್ಣ ಹಕ್ಕಂಡಿ, ಸೋಮು ಹಕ್ಕಂಡಿ, ವೀರೇಶ ಹಡಗಲಿ, ಮುತ್ತಣ್ಣ ಅಳವಂಡಿ, ವಿಶ್ವನಾಥ ಉಳ್ಳಾಗಡ್ಡಿ, ವೀರಣ್ಣ ಮಜ್ಜಗಿ, ಅಂದಪ್ಪ ಕಲ್ಲಳ್ಳಿ, ಶೋಭಾ ಪಾಟೀಲ, ಅನ್ನಪೂರ್ಣಾ ದೇಸಾಯಿ, ಈರಣ್ಣ ತೆಂಗಿನಕಾಯಿ, ಯಲ್ಲಪ್ಪ ಹೊಂಬಳಗಟ್ಟಿ, ದೇವಪ್ಪ ಇಟಗಿ, ಬಸವರಾಜ ಬಾರಿಕಾಯಿ, ಶಿವಾನಂದ ಇಟಗಿ, ಜಗದೀಶ ಹಕ್ಕಂಡಿ, ಸುನಿಲ್ ನಂದಿಹಳ್ಳಿ ಉಪಸ್ಥಿತರಿದ್ದರು.

ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಘಟಕದ ಅಧ್ಯಕ್ಷ ರಾಜೇಶ ಅರಕಲ್ ಸ್ವಾಗತಿಸಿದರು. ಎಂ.ಎಸ್. ಹೊಟ್ಟೀನ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಇನಾಮತಿ‌ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ