ಸಂಭ್ರಮದ ಭಾರತ ಮಾತಾ ಮೆರವಣಿಗೆ

KannadaprabhaNewsNetwork |  
Published : Aug 15, 2026, 03:15 AM IST
ರಾಣಿಬೆನ್ನೂರು ನಗರದ ಶ್ರೀ ಭಾರತ ಮಾತಾ ಉತ್ಸವ ಸಮಿತಿ ವತಿಯಿಂದ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಆಯೋಜಿಲಾಗಿದ್ದ ಭಾರತ ಮಾತಾ ಉತ್ಸವ ಮೂರ್ತಿ ಮೆರವಣಿಗೆಗೆ ಶಹರ ಠಾಣೆಯ ಪಿಎಸ್‌ಐ ಪರಮೇಶ ಚಾಲನೆ ನೀಡಿದರು. | Kannada Prabha

ಸಾರಾಂಶ

ಇಲ್ಲಿನ ಶ್ರೀ ಭಾರತ ಮಾತಾ ಉತ್ಸವ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಭಾರತ ಮಾತೆಯ ಉತ್ಸವ ಮೂರ್ತಿ ಮೆರವಣಿಗೆಗೆ ನಗರದ ಹಳೇ ಸರ್ಕಾರಿ ಆಸ್ಪತ್ರೆ ಹಿಂಭಾಗದ ಬಳಿ ಶಹರ ಪಿಎಸ್‌ಐ ಬಿ.ಜಿ. ಪರಮೇಶ ರಾಷ್ಟ್ರಧ್ವಜದ ಬಾವುಟವನ್ನು ಆರೋಹಣದ ಮೂಲಕ ಚಾಲನೆ ನೀಡಿದರು.

ರಾಣಿಬೆನ್ನೂರು: ಇಲ್ಲಿನ ಶ್ರೀ ಭಾರತ ಮಾತಾ ಉತ್ಸವ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಭಾರತ ಮಾತೆಯ ಉತ್ಸವ ಮೂರ್ತಿ ಮೆರವಣಿಗೆಗೆ ನಗರದ ಹಳೇ ಸರ್ಕಾರಿ ಆಸ್ಪತ್ರೆ ಹಿಂಭಾಗದ ಬಳಿ ಶಹರ ಪಿಎಸ್‌ಐ ಬಿ.ಜಿ. ಪರಮೇಶ ರಾಷ್ಟ್ರಧ್ವಜದ ಬಾವುಟವನ್ನು ಆರೋಹಣದ ಮೂಲಕ ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಅವರು, ಭಾರತ ಮಾತೆಯ ಬಗ್ಗೆ ಯುವಕರಲ್ಲಿ ಅಭಿಮಾನ ಮೂಡಬೇಕು ಹಾಗೂ ರಾಷ್ಟ್ರದ ಬಗ್ಗೆ ಗೌರವ ತೋರುವಂತಹ ಸೇವೆಗೆ ಸದಾ ಮುಂದಾಗಬೇಕು. ಸರ್ವರೂ ಭಾರತ ದೇಶದ ಬಗ್ಗೆ ಹೆಮ್ಮೆ ಮೂಡುವಂತಹ ಕಾಯಕದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ಇಲ್ಲಿಂದ ಆರಂಭವಾದ ಮೆರವಣಿಗೆಯೂ ಕೌಲಪೇಟೆ, ದುರ್ಗಾ ವೃತ್ತ, ಎಂಜಿ ರಸ್ತೆ, ದೊಡ್ಡಪೇಟೆ, ಸಂಗಮ ವೃತ್ತ, ಅಂಚೆ ವೃತ್ತ, ಮೆಡ್ಲೇರಿ ವೃತ್ತ, ಬಸ್ ನಿಲ್ದಾಣ, ಪಿ.ಬಿ. ರಸ್ತೆ, ಕುರುಬಗೇರಿ ಕ್ರಾಸ್, ತಹಸೀಲ್ದಾರ್ ಕಚೇರಿ ಆವರಣ ಮೂಲಕ ಮಾರುತಿ ನಗರಕ್ಕೆ ತೆರಳಿ ಭಾರತ್ ಮಾತಾ ಮಂದಿರ ತಲುಪಿತು.

ಜಿಪಂ ಮಾಜಿ ಸದಸ್ಯ ಸಿ.ಸಿ. ಪಾಟೀಲ, ಬಿಸಿಎಂ ಜಿಲ್ಲಾ ನಿವೃತ್ತ ಅಧಿಕಾರಿ ವಿ.ಎಸ್. ಹಿರೇಮಠ, ಆರ್.ಜಿ. ಮಹಾನುಭಾವಿಮಠ, ಸಮಿತಿಯ ಅಧ್ಯಕ್ಷ ಶಿವಯೋಗಿ ಮಹಾನುಭಾವಿ ಮಠ, ಕಾರ್ಯದರ್ಶಿ ಪ್ರೊ.ಎಚ್.ಎಂ. ದೊಡ್ಡಬಿಲ, ಚಂದ್ರಪ್ಪ ಉದಗಟ್ಟಿ, ಮುರುಗೇಶ್ ಎಂ, ಎಂ.ಚೀರಂಜೀವಿ, ಪ್ರಭಾವತಿ, ಕಲಾವತಿ, ಶ್ವೇತಾ, ಶಿವು ಹಾಗೂ ವಿದ್ಯಾರ್ಥಿಗಳು, ಅಭಿಮಾನಿಗಳು ಸಮಿತಿಯ ಸದಸ್ಯರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರಧ್ವಜ ಕೇವಲ ಮೂರು ಬಣ್ಣಗಳ ಸಂಕೇತವಲ್ಲ. ಏಕತೆಯ ಪ್ರತೀಕ-ಸೌಮ್ಯ
ಕೋರ್ಟ್‌ ಆದೇಶ: ಗದಗ ಜಿಲ್ಲಾಧಿಕಾರಿ ಕಾರು ಜಪ್ತಿ