ದೊಡ್ಡಬಳ್ಳಾಪುರ: ಇಲ್ಲಿನ ವಿವಿಧ ಚಚು೯ಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಕ್ರೈಸ್ತ ಬಾಂಧವರು ವಿಶೇಷ ಪ್ರಾಥ೯ನೆಗಳಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೖಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಸಹಸ್ರಾರು ಕ್ರೈಸ್ತ ಧಮೀ೯ಯರು ಮತ್ತು ಇತರ ಧಮೀ೯ಯರೂ ಚಚ್‌೯ಗೆ ಭೇಟಿ ನೀಡಿ ಪ್ರಾಥ೯ನೆ ಸಲ್ಲಿಸಿದರು. ಬುಧವಾರ ರಾತ್ರಿಯಿಂದಲೇ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಕೇಕ್ ಮತ್ತಿತರ ಸಿಹಿ ತಿನಿಸುಗಳನ್ನು ಹಂಚಲಾಯಿತು.
ಕೊಂಗಾಡಿಯಪ್ಪ ಮುಖ್ಯರಸ್ತೆ ಕ್ರಾಸ್‌ಲ್ಲಿರುವ ಚಚ್‌೯, ಪಾಲನಜೋಗಿಹಳ್ಳಿ ಚರ್ಚ್, ಫಾಲ್‌ಪಾಲ್ ದಿನ್ನೆ, ಮಧುರೆ ಮೇರಿ ಚಚ್‌೯ ಸೇರಿದಂತೆ ಪ್ರಮುಖ ಹೋಬಳಿ ಕೇಂದ್ರಗಳಲ್ಲೂ ಸಹ ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಕ್ರೈಸ್ತ ಧಮೀ೯ಯರು ಬಂಧು-ಬಾಂಧವರೊಂದಿಗೆ ಹಬ್ಬದ ಸಡಗರದಲ್ಲಿ ಪಾಲ್ಗೊಂಡರು. ಸಿಹಿ ಹಂಚಿ, ಪರಸ್ಪರ ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು.ನಕ್ಷತ್ರ ಜ್ಯೋತಿ: ಹಲವೆಡೆ ಕ್ರಿಸ್ತನ ಹುಟ್ಟಿನ ಧ್ಯೋತಕವಾಗಿ ನಕ್ಷತ್ರಗಳನ್ನು ಬೆಳಗಿಸಿ ಸಂಭ್ರಮಿಸಲಾಯಿತು. ಅದೇ ರೀತಿ ಕೊಟ್ಟಿಗೆಯ ರೂಪಕಗಳನ್ನು ಸೖಷ್ಠಿಸಿ ಕ್ರಿಸ್ತನ ಜನನದ ಶುಭ ಸಂದೇಶವನ್ನು ಮಾದರಿಗಳ ಮೂಲಕ ಪ್ರದಶಿ೯ಸಲಾಗಿದ್ದದ್ದು ವಿಶೇಷವಾಗಿತ್ತು. ಕೆಲವರು ಮನೆಗಳಲ್ಲಿ ಸಹ ವಿಶೇಷ ಪ್ರಾಥ೯ನೆ, ಕ್ರಿಸ್ತ ಜನನದ ಸಂದೇಶ ಸಾರುವ ರೂಪಕ ಮಾದರಿಗಳನ್ನು ಮಾಡಿ ಗಮನ ಸಳೆದರು.
25ಕೆಡಿಬಿಪಿ5-ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರ ವೖತ್ತದಲ್ಲಿರುವ ಸಂತ ಪೇತ್ರರ ಚರ್ಚ್ ನಲ್ಲಿ ಕ್ರಿಸ್ ಮಸ್ ಟ್ರೀ ನಿರ್ಮಿಸಲಾಗಿತ್ತು.--
25ಕೆಡಿಬಿಪಿ6- ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರ ವೖತ್ತದಲ್ಲಿರುವ ಸಂತ ಪೇತ್ರರ ಚರ್ಚ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಂಬ್ರಮದಿಂದ ಆಚರಿಸಲಾಯಿತು.