ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ತಿರುಮಲಶೆಟ್ಟಿಹಳ್ಳಿ ಬಳಿಯ ಎಸ್‌ಪಿಜಿ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪತ್ತೆ ವೇಳೆ ನಾಪತ್ತೆಯಾಗಿದ್ದ ಆಸ್ಪತ್ರೆಯ ಡಾ.ಶ್ರೀನಿವಾಸ್ ನನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇನ್ನು ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಡಾ.ಶ್ರೀನಿವಾಸ್ ಬಂಧನಕ್ಕೆ ತಿರುಮಲಶೆಟ್ಟಿಹಳ್ಳಿ ಪೊಲೀಸರು ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದರು. ಶನಿವಾರ ಸಂಜೆ ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಇರುವ ಚನ್ನಸಂದ್ರದ ಬಳಿ ಕಾರಿನಲ್ಲಿ ಬೆಂಗಳೂರಿನ ಕಡೆಗೆ ತೆರಳುತ್ತಿದ್ದಾಗ ಡಾ.ಶ್ರೀನಿವಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಪೂರ್ಣ ವಿಚಾರಣೆ ನಂತರ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಮತ್ತಷ್ಟು ವಿಷಯಗಳು ಹೊರಬರಲಿದೆ. ಡಾ. ಶ್ರೀನಿವಾಸ್‌ನನ್ನು 12 ದಿನಗಳ ಕಾಲ ಪೊಲೀಸರ ಸುಪರ್ದಿಗೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.ಫೋಟೋ: 16 ಹೆಚ್‌ಎಸ್‌ಕೆ 4ತಲೆ ಮರೆಸಿಕೊಂಡಿದ್ದ ವೈದ್ಯ ಡಾ.ಶ್ರೀನಿವಾಸ್ ಭಾವಚಿತ್ರ.