ಕಾಂಗ್ರೆಸ್ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ತೀರ್ಮಾನ ಕೈಗೊಂಡಿದ್ದು ಶಿಕ್ಷಕರ ಸಮಸ್ಯೆ ನಿವಾರಣೆಗೆ ಅಗತ್ಯಕ್ರಮಕೈಗೊಂಡಿದೆ. ಶೈಕ್ಷಣಿಕ ಪ್ರಗತಿಗಾಗಿ ಹೊಸ ಶಾಲೆಗಳ ಸ್ಥಾಪನೆ ಮೂಲಕ ಶ್ರಮಿಸುತ್ತಿದೆ. ಶಿಕ್ಷಕ ವೃತ್ತಿ ಘನತೆ ಮಹತ್ವದ್ದು, ಭಾರತದ ದೇಶದ ಸಮಗ್ರ ಬೆಳವಣಿಗೆ, ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರವಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಾಂಗ್ರೆಸ್ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ತೀರ್ಮಾನ ಕೈಗೊಂಡಿದ್ದು ಶಿಕ್ಷಕರ ಸಮಸ್ಯೆ ನಿವಾರಣೆಗೆ ಅಗತ್ಯಕ್ರಮಕೈಗೊಂಡಿದೆ. ಶೈಕ್ಷಣಿಕ ಪ್ರಗತಿಗಾಗಿ ಹೊಸ ಶಾಲೆಗಳ ಸ್ಥಾಪನೆ ಮೂಲಕ ಶ್ರಮಿಸುತ್ತಿದೆ. ಶಿಕ್ಷಕ ವೃತ್ತಿ ಘನತೆ ಮಹತ್ವದ್ದು, ಭಾರತದ ದೇಶದ ಸಮಗ್ರ ಬೆಳವಣಿಗೆ, ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರವಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ತಾಲೂಕು ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ನಿವೖತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಸರ್ಕಾರ ಜಾತಿ ತಂದಿರುವ ಆರೋಗ್ಯ ಸಂಜೀವಿನಿ, ಸಂಜಯ ಕಿರಣ ಯೋಜನೆ ಉಪಯೋಗ ಪಡೆಯಬೇಕು. ಅಜ್ಞಾನವೆಂಬ ಕತ್ತಲನ್ನು ತೊಡಕುಹಾಕಿ ವಿದ್ಯಾರ್ಥಿಗಳ ಬದುಕಿನಲ್ಲಿ ಜ್ಞಾನ ಜ್ಯೋತಿ ಬೆಳಗಿಸುವವರು ಶಿಕ್ಷಕರು ಎಂದರು.
ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಅಸ್ಸಿಸ್ಸಿ ಪ್ರೌಡಶಾಲೆ ಮುಖ್ಯ ಶಿಕ್ಷಕ ಇಗ್ನಾಸಿ ಮುತ್ತು, ಎಂ.ಜಿ.ಎಸ್.ವಿ. ಪ್ರೌಡಶಾಲೆಯ ಸಹ ಶಿಕ್ಷಕಿ ಬಿ.ಆಲುಮೇಲಮ್ಮ, ಬಿ.ಎಂ.ಪ್ರೌಡಶಾಲೆಯ ನಿಶಿತಾನಂದ, ಕೆಂಪನಪಾಳ್ಯ ಶಾಲೆ ಹಿರಿಯ ಪ್ರಾಥಮಿಕ ಶಾಲೆಯ ಮೋಚರಾಕಿಣಿ, ಕಮಲಾಪುರ ಶಾಲೆಯ ಸಹ ಶಿಕ್ಷಕಿ ಆರ್.ಲಕ್ಷ್ಮೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ನಿವೃತ್ತ ಶಿಕ್ಷಕರಿಗೆ ಅಭಿನಂದಿಸಲಾಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಘದ ಪದಾಧಿಕಾರಿಗಳು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಕೊಳ್ಳೇಗಾಲ ಉಪ ಖಜಾನೆ ಸಹಾಯಕ ನಿರ್ದೇಶಕಿ ಪಿ.ನಾಗರತ್ನಮ್ಮ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ರಾಜೇಂದ್ರ, ತಾಲೂಕು ಪಂಚಾಯಿತಿ ಪ್ರಭಾರಿ ಇಒ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಿ.ಮಹದೇವ ಕುಮಾರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜೊಸೇಫ್ ಅಲೆಗ್ಸಾಂಡರ್, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷೆ ಸವಿತಾ, ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದರಾಜು, ಹೊಂಡರಬಾಳು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎಂ.ವಾಸು, ನೌಕರ ಸಂಘದ ಕಾರ್ಯದರ್ಶಿ ಎಂ.ಚಿಕ್ಕರಾಜು, ರಾಜ್ಯ ಪರಿಷತ್ ಸದಸ್ಯ ಸತೀಶ್, ನಿಧೇ೯ಶಕ ಹರೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಉಮೇಶ್, ಬಸವರಾಜು, ಮರಿಯಾಪುರ ಮಹೇಶ್, ಸುರಾಪುರ ಲೋಕೇಶ್, ಜಾಗೇರಿ, ಡಾ. ಉಮಾಶಂಕರ್, ದಿವಾಕರ್, ಮುಖ್ಯಶಿಕ್ಷಕ ಶಿವಶಂಕರ್, ಬುಕಾನಿ, ನಂದೀಶ್, ಪುಟ್ಟಮಾದಮ್ಮ, ಸಿದ್ದಲಿಂಗಸ್ವಾಮಿ, ಬಾಲಸುಬ್ರಮಣ್ಯಂ, ಶಿಕ್ಷಕ ಸುರೇಶ್, ಗೋಪಾಲಸ್ವಾಮಿ, ನಂಜುಂಡಮೂರ್ತಿ ಇದ್ದರು
‘26 ಪುಸ್ತಕ ರಚನೆ ಸಾಮಾನ್ಯ ವಿಷಯವಲ್ಲ’
ಸರ್ಕಾರಿ ಶಾಲೆಯಲ್ಲಿ ಓದಿ, ಕಾನೂನು ಪದವಿ ಪಡೆದು, ಕೊಳ್ಳೇಗಾಲ ತಾಲೂಕು ಖಜಾನಾಧಿಕಾರಿ ಹುದ್ದೆ ನಿಭಾಯಿಸುವ ಜೊತೆಗೆ 26ಪುಸ್ತಕಗಳನ್ನು ರಚಿಸಿರುವ ಸಾಹಿತಿ ಹಾಗೂ ಅಧಿಕಾರಿ ನಾಗರತ್ನಮ್ಮ ಅವರನ್ನುಶಾಸಕ ಕೃಷ್ಣಮೂರ್ತಿ ಶ್ಲಾಘಿಸಿದರು.
ನಾಗರತ್ನಮ್ಮ ಮಹಿಳಾ ಅಧಿಕಾರಿಯಾಗಿ ಸಾಹಿತಿಯಾಗಿ, ಗೃಹಿಣಿಯಾಗಿ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ. ಸಾಕಷ್ಟು ಪುರಾತನ ವಿಚಾರಗಳ ಬಗ್ಗೆ ಅರಿತಿದ್ದಾರೆ, ಅವರದ್ದು ಮೇರು ವ್ಯಕ್ತಿತ್ವ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.