ಮದ್ದೂರು: ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಜಲ ಆಯೋಗದ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ ಅವರ ಎಲ್ಲಾ ಸಂಶಯಗಳಿಗೆ ಸ್ಪಷ್ಟನೆ ನೀಡಿ ಬಗೆಹರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಈ ಸಂಬಂಧ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಯೋಜನೆ ಸಂಬಂಧ ಪ್ರಮಾಣಪತ್ರ ಸಿದ್ಧಪಡಿಸಲಿವೆ. 20 ದಿನಗಳ ಒಳಗಾಗಿ ಪರ್ಯಾಯ ಜಮೀನಿನ ಪ್ರಕ್ರಿಯೆ ಅಂತಿಮಗೊಳಿಸಲು ಸೂಚನೆ ಕೊಟ್ಟಿದ್ದೇನೆ ಎಂದರು.
ಈಗಾಗಲೇ ಯೋಜನೆಯ ಡಿಪಿಆರ್ ಸಲ್ಲಿಕೆಯಾಗಿದೆ. ಪರ್ಯಾಯ ಜಮೀನಿನ ವಿಷಯ ಅಂತಿಮಗೊಂಡ ಬಳಿಕ ಕೇಂದ್ರ ಜಲ ಆಯೋಗದಿಂದ ಅಂತಿಮವಾಗಿ ಅನುಮೋದನೆ ಪಡೆಯಲಾಗುವುದು ಎಂದರು.ತಮಿಳುನಾಡಿಗೆ 30 ಟಿಎಂಸಿ ಮಾತ್ರ ನೀರು ಬಿಡುಗಡೆ: ಚಲುವರಾಯಸ್ವಾಮಿ
ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ, ಕಠಿಣ ಬರದ ಸಮಸ್ಯೆ ನಡುವೆಯೂ ತಮಿಳುನಾಡಿಗೆ ಇಲ್ಲಿಯವರೆಗೆ 30 ಟಿಎಂಸಿ ಮಾತ್ರ ನೀರು ಕೊಟ್ಟಿದ್ದೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕುರಿತು ರೈತರು, ಸಂಘಟನೆಗಳ ಹೋರಾಟಗಳನ್ನು ನಾವು ಗಮಸಿದ್ದೇವೆ. ಹೋರಾಟ ಮಾಡೋದು ತಪ್ಪಲ್ಲ. ಆದರೆ, ಹೆಚ್ಚಿನ ನೀರು ಬಿಡುಗಡೆ ವಿಚಾರವಾಗಿ ಸೆ.8ಕ್ಕೆ ಸಿಡಬ್ಲ್ಯೂಆರ್ ಸಿ ಸಭೆ ಇದೆ. ನೀರು ಬಿಡಲು ಆಗಲ್ಲ ಅಂತ ಒತ್ತಾಯ ಮಾಡ್ತಿದ್ದೇವೆ. ಅಂದು ಏನು ಆದೇಶ ಬರುತ್ತೆ ನೋಡೋಣ ಎಂದರು.
ಮಳೆಗಾಗಿ ಮೋಡ ಭಿತ್ತನೆಗೆ ಚಾಲನೆ ನೀಡಿ 60 ದಿನಗಳ ಟೈಮ್ ಕೊಟ್ಡಿದ್ದೇವೆ. ಐಎಂಡಿಸಿ ಟೆಕ್ನಿಕಲ್ ಟೀಮ್ ಮೋಡ ಭಿತ್ತನೆ ಮಾಡುತ್ತಾರೆ. ಈ ಬಗ್ಗೆ ಸಂಜೆ ವರದಿ ಕೊಡುತ್ತಾರೆ. ವರದಿ ನೋಡಿ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.