ಶಿಕ್ಷಕರು ಮೌಲ್ಯಗಳನ್ನು ಉಳಿಸಿಕೊಂಡು ಕೆಲಸ ಮಾಡಬೇಕು: ನಿಶ್ಚಲಾನಂದ ಸ್ವಾಮೀಜಿ

KannadaprabhaNewsNetwork |  
Published : Sep 06, 2026, 02:00 AM IST
5ಕೆಎಂಎನ್ ಡಿ26 | Kannada Prabha

ಸಾರಾಂಶ

ಶಿಕ್ಚಕರು ಮಕ್ಕಳಿಗೆ ಸಂಸ್ಕೃತಿ, ಸಂಬಂಧ, ಆಚಾರ, ವಿಚಾರ, ನಡೆ-ನುಡಿ ಎಲ್ಲವನ್ನೂ ತಿಳಿಸುವ ಕೆಲಸ ಮಾಡಬೇಕು. ಮಾನವೀಯ ಮೌಲ್ಯ ಬೆಳೆಸಬೇಕು. ಸಮಾಜದಲ್ಲಿ ಯಾವುದು ಬದಲಾವಣೆಯಾಗಬೇಕೋ ಅದಕ್ಕೆ ಶಿಕ್ಷಕ ಕಾರಣಕರ್ತ ಆಗಬೇಕು. ಮಕ್ಕಳಿಗೆ ಚಿಕಿತ್ಸಾ ಕೆಲಸ ನೀಡಲು ಮನಸ್ಸು ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಭದ್ರವಾಗಿರುವುದೇ ಶಿಕ್ಷಕರಿಂದ. ಶಿಕ್ಷಕರು ಮೌಲ್ಯಗಳನ್ನು ಉಳಿಸಿಕೊಂಡು ಶ್ರದ್ಧೆ, ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರನ್ನು ಅಭಿನಂದಿಸಿ ಆಶೀರ್ವಚನ ನೀಡಿ, ಸರ್ಕಾರಿ ಶಾಲೆಗಳಿಗೆ ಬರುವ ಅನಕ್ಷರಸ್ಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುತ್ತಿರುವುದು ಶ್ಲಾಘನೀಯ ಎಂದರು.

ಶಿಕ್ಷಕರು ಮಕ್ಕಳಿಗೆ ಸಂಸ್ಕೃತಿ, ಸಂಬಂಧ, ಆಚಾರ, ವಿಚಾರ, ನಡೆ-ನುಡಿ ಎಲ್ಲವನ್ನೂ ತಿಳಿಸುವ ಕೆಲಸ ಮಾಡಬೇಕು. ಮಾನವೀಯ ಮೌಲ್ಯ ಬೆಳೆಸಬೇಕು. ಸಮಾಜದಲ್ಲಿ ಯಾವುದು ಬದಲಾವಣೆಯಾಗಬೇಕೋ ಅದಕ್ಕೆ ಶಿಕ್ಷಕ ಕಾರಣಕರ್ತ ಆಗಬೇಕು. ಮಕ್ಕಳಿಗೆ ಚಿಕಿತ್ಸಾ ಕೆಲಸ ನೀಡಲು ಮನಸ್ಸು ಮಾಡಬೇಕು ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಬಾಲ್ಯದಿಂದಲೂ ಇಲ್ಲಿಯವರೆಗೆ ಅಕ್ಷರ ತಿಳಿವಳಿಕೆ ನೀಡಿ ಮಾನವೀಯತೆ ಮೆರೆದ ಸಮಸ್ತ ಶಿಕ್ಷಕ ವರ್ಗವನ್ನು ಸ್ಮರಿಸುವ ಮಹತ್ವದ ದಿನ ಇಂದು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ದೇಶದ ರಾಷ್ಟ್ರಪತಿಯಂಥಹ ಮಹತ್ವದ ಹುದ್ದೆಗೆ ಏರಿದ ಮಹತ್ವದ ದಿನವೇ ಶಿಕ್ಷಕರ ದಿನಾಚರಣೆಯಾಗಿದೆ ಎಂದರು.

ಶತಮಾನದ ಕೆಪಿಎಸ್ ಶಾಲೆ ಹೆಮ್ಮರವಾಗಿ ಬೆಳೆದುನಿಂತಿದೆ. ಎರಡು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹೀಗಿದ್ದರೂ ಕೆಲವರು ಕೆಪಿಎಸ್ ಶಾಲೆ ಬಗ್ಗೆ ಅಪಪ್ರಚಾರ ಮಾಡಿ ಅವರ ಮನೋಸ್ಥಿತಿ ಎಂತಹದ್ದು ಎಂಬುದನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ 2026-27ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ನಾಗೇಂದ್ರಕುಮಾರ್, ತಾಪಂ ಇಒ ಸುಷ್ಮ, ಬಿಇಒ ತಿಮ್ಮೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್, ಪಿಎಂ ಪೋಷಣ್ ಅಭಿಯಾನ್ ಸಹಾಯಕ ನಿರ್ದೇಶಕ ಸಿ,ಎನ್.ಯತೀಶ್, ತಾಲೂಕು ಸರ್ಕಾರಿ ನೌಕರರ ಸಂಘಧ ಅಧ್ಯಕ್ಷ ಆನಂದ್‌ಕುಮಾರ್, ಕಾರ್ಯದರ್ಶಿ ಧರ್ಮಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವೆಂಕಟೇಗೌಡ, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘಧ ಆದ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಮಹೇಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘಧ ಅಧ್ಯಕ್ಷ ಎಸ್‌.ಎಂ.ಬಸವರಾಜು, ಕಾರ್ಯದರ್ಶಿ ವಿಜಿ ನಾರಾಯಣ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಧ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಶಿವಲಿಂಗೇಗೌಡ ಸೇರಿದಂತೆ ಸರ್ಕಾರಿ ಶಾಲೆಗಳ ಸಾವಿರಾರು ಶಿಕ್ಷಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಟ್ಸಾಪ್‌ ಕರೆಯಲ್ಲೇ ಕನ್ನಾಳೆ ಗ್ಯಾಂಗ್‌ ಕೆಪಿಎಸ್ಸಿ ಡೀಲ್‌!
ಇಂದಿರಾ ಕಿಟ್‌ ಯೋಜನೆಗೆ ಬೆಲೆ ಏರಿಕೆಯ ಏಟು