ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಕುಸ್ತಿ ಸ್ಪರ್ಧೆ
ಶಿರಸಿ ಶೈಕ್ಷಣಿಕ ಜಿಲ್ಲೆ ಪ್ರತಿನಿಧಿಸಿದ ಹಳಿಯಾಳ ಕುಸ್ತಿ ತಂಡಕ್ಕೆ 23 ಪದಕಕನ್ನಡಪ್ರಭ ವಾರ್ತೆ ಹಳಿಯಾಳ
ವಿಜಯನಗರದ ಹೊಸಪೇಟೆಯಲ್ಲಿ ನ. 8 ಮತ್ತು 9ರಂದು ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕುಸ್ತಿ ಸ್ಪರ್ಧೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿದ ಹಳಿಯಾಳ ತಾಲೂಕಿನ ಕುಸ್ತಿಪಟುಗಳು ತಂಡವು 13 ಚಿನ್ನ, 3 ಬೆಳ್ಳಿ ಹಾಗೂ 7 ಕಂಚು ಸೇರಿ ಒಟ್ಟು 23 ಪದಕಗಳನ್ನು ಬಾಚಿಕೊಂಡಿದೆ.5ನೇ ಬಾರಿ ಚಾಂಪಿಯನ್ ಪ್ರಶಸ್ತಿ:ಬಾಲಕಿಯರ ಕುಸ್ತಿ ತಂಡವು ಸತತ ಐದನೇ ಬಾರಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. 17 ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕುಸ್ತಿಪಟುಗಳು ಉತ್ತರಪ್ರದೇಶದ ಗೋರಕ್ಪುರ ಹಾಗೂ 14 ವರ್ಷದೊಳಗಿನ ಪ್ರಥಮ ಸ್ಥಾನ ಪಡೆದ ಕುಸ್ತಿಪಟುಗಳು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ವಿಜೇತ ಕುಸ್ತಿಪಟುಗಳು:
ಬಾಲಕಿಯರ ವಿಭಾಗದಲ್ಲಿ 11 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದಿದ್ದಾರೆ.14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸಂಧ್ಯಾ ಸುರೇಶ ಗೌಡಾ (33ಕೆಜಿ), ನವ್ಯಾ ತುಕಾರಾಮ ದಾನವೇನ್ನನವರ (36ಕೆಜಿ), ಗಾಯತ್ರಿ ಬೆಕವಾಡಕರ (42ಕೆಜಿ), ರಿಯಾ ಬಸ್ತ್ವಾಡಕರ್ (46ಕೆಜಿ), ಸ್ನೇಹ ಬೊಬಲಿ(50ಕೆಜಿ), ಗಾಯತ್ರಿ ಬಡಿಗೇರ್(54ಕೆಜಿ), ಶರೀರ ಸಿದ್ದಿ(58ಕೆಜಿ) ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದು, ಪವಿತ್ರ ಕಟ್ಕೋಳ್ಳರ(39ಕೆಜಿ) ಕಂಚಿನ ಪದಕ ಗಳಿಸಿದ್ದಾರೆ.
17ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶರ್ಲಿ ಸಿದ್ಧಿ(40ಕೆಜಿ), ವಾಣಿ ಗಡ್ಡಿ ಹೋಳಿ(43ಕೆಜಿ), ಪೃಥ್ವಿ ಮೀರಜಕರ (61ಕೆಜಿ), ಓಕ್ಸಿಲೀಯಾ ಹರನೋಡಕರ್(65ಕೆಜಿ) ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.ಸುಮಯ್ಯಾ ದೇವಕಾರಿ (46ಕೆಜಿ), ವೈಷ್ಣವಿ ಅನ್ನಿಕೇರಿ( 49ಕೆಜಿ), ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ, ಪ್ರತಿಕ್ಷಾ ಶೇರಖರ್(53ಕೆಜಿ) ತೃತೀಯ ಸ್ಥಾನದೊಂದಿಗೆ ಕಂಚಿಕ ಪದಕ ಪಡೆದಿದ್ದಾರೆ. ಬಾಲಕರ ವಿಭಾಗ:
17 ವರ್ಷ ವಯೋಮೀತಿಯೊಳಗಿನ ಬಾಲಕರ ಬಾಲಕರ ಗ್ರೀಕೋ ರೋಮನ್ ಮತ್ತು ಫ್ರೀಸ್ಟೈಲ್ ಕುಸ್ತಿಯಲ್ಲಿ 2ಚಿನ್ನ ಹಾಗೂ 1 ಬೆಳ್ಳಿ ಹಾಗೂ 5 ಕಂಚಿನ ಪದಕಗಳು ಬಂದಿವೆ .ಜುನೇದ ನದಾಫ್(48ಕೆಜಿ), ಶಂಕರಗೌಡಾ ಪಾಟೀಲ( 48ಕೆಜಿ) ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, ರಾಬಿನ್ ಡಿಗ್ಗೇಕರ(55ಕೆಜಿ) ದ್ವೀತಿಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದರೇ, ಕೃಷ್ಣ ಜಾಧವ(51ಕೆಜಿ) ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.
14 ವರ್ಷ ವಯೋಮೀತಿಯೊಳಗಿನ ಬಾಲಕರ ವಿಭಾಗದಲ್ಲಿ ಪ್ರಜ್ವಲ್ ಗೋಲೆಹಳ್ಳಿ(44ಕೆಜಿ), ಆಕಾಶ್ ಚೌಗಲೆ(41 ಕೆಜಿ), ಆದಿ ಮಡಿವಾಳ(35 ಕೆಜಿ) ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್. ನಾಯಕ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ ತಾರಿಕೊಪ್ಪ, ಹಳಿಯಾಳ ಬಿಇಒ ಪ್ರಮೋದ ಮಹಾಲೆ ಮತ್ತು ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕಿ ಜ್ಯೋತಿಪ್ರಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.