ಕನ್ನಡಪ್ರಭ ವಾರ್ತೆ ಬೀದರ್
ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯವು ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿರುವ ಮಹಿಳಾ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ 18ನೇ ಶಕ್ತಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಮಹಿಳಾ ಪದವಿ ಕಾಲೇಜು ಸಬಲೀಕರಣಕ್ಕಾಗಿ ₹5 ಕೋಟಿ:ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ. ಬೀದರ್‌ನ ಸರ್ಕಾರಿ ಮಹಿಳಾ ಪದವಿ ಕಾಲೇಜು ಸಬಲೀಕರಣಕ್ಕಾಗಿ ಮೂರು ಹಂತದಲ್ಲಿ ಮ್ಯಾಕ್ರೋ ಯೋಜನೆಯಡಿ 5 ಕೋಟಿ ರು. ಅನುದಾನ ನೀಡಿದ್ದೇವೆ. ಇದಲ್ಲದೆ ಸಚಿವ ರಹೀಮ್ ಖಾನ್ ಹಾಗೂ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿಯವರು 5 ಕೋಟಿ ರು.ಗಳನ್ನು ನೀಡಿದ್ದಲ್ಲದೆ ಇನ್ನಷ್ಟು ಅಭಿವೃದ್ಧಿಗಾಗಿ 5 ಕೋಟಿ ರು.ಗಳ ಅನುದಾನ ಒದಗಿಸುವುದಾಗಿ ತಿಳಿಸಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಶಿಥಿಲಾವಸ್ಥೆ ಕಂಡು ಇದೇ ವರ್ಷ ಹೆಚ್ಚುವರಿಯಾಗಿ 3 ಕೋಟಿ ರು. ನೀಡಲು ನಿರ್ಧರಿಸಿರುವುದಾಗಿ ಹಾಗೂ ಜಿಲ್ಲೆಯಲ್ಲಿ ಮಹಿಳೆಯರಿಗಾಗಿ ಕೌಶಲ್ಯ ತರಬೇತಿ, ಮಹಿಳಾ ಅಕ್ಕಮಹಾದೇವಿ ಮಹಾವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಸ್ವಾತಂತ್ರ್ಯ ನಂತರ ತೊಟ್ಟಿಲು ತೂಗುವ ಕೈ ದೇಶವನ್ನಾಳುತ್ತದೆ ಎಂಬುವುದನ್ನು ತೋರಿಸಿಕೊಟ್ಟಿದ್ದು, ಮಾಜಿ ಪ್ರಧಾನಿ ಇಂದಿರಾಗಾಂಧಿ ಆಡಳಿತದಲ್ಲಿ ಮಹಿಳೆಯರಿಗಾಗಿ ಬಡವರಿಗಾಗಿ, ಶೋಷಿತರಿಗಾಗಿ ಎಲ್ಲ ವರ್ಗದವರಿಗಾಗಿ ಇಂದಿರಾ ಆವಾಜ್ ಕಾರ್ಯಕ್ರಮ, ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ನಿರ್ಮಾಣಕ್ಕೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದವರು ನೆಹರು ಅವರಿಂದ ಆರಂಭವಾಯಿತು ಎಂದರು.
ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಬಿಕೆ ತುಳಸಿ ಮಾಲಾ, ನಿವೃತ್ತ ಕುಲಪತಿ ಪ್ರೊ. ಬಿಜಿ ಮೂಲಿಮನಿ, ಬಿಜಾಪೂರ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿ ಕ್ಷೇಮಾಧಿಕಾರಿ ಪ್ರೊ. ವಿಷ್ಣು ಶಿಂಧೆ, ಬೀದರ್ ಕಾಲೇಜಿನ ಪ್ರಾಚಾರ್ಯ ಪ್ರೊ ಮನೋಜಕುಮಾರ, ಪ್ರೊ. ರಾಜಕುಮಾರ ಹೊಸದೊಡ್ಡಿ ಇದ್ದರು.