ಗೃಹಜ್ಯೋತಿ ಯೋಜನೆಗೆ ಒಂದು ವರ್ಷ
ಕನ್ನಡಪ್ರಭ ವಾರ್ತೆ ರಾಮನಗರ
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಗೃಹ ಬಳಕೆಗಾಗಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಗೆ ಒಂದು ವರ್ಷ ಪೂರ್ಣಗೊಂಡಿದ್ದು, ಈ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ 56.45 ಕೋಟಿ ರುಪಾಯಿಗಳಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.ಈ ಯೋಜನೆ ಅಡಿಯಲ್ಲಿ ಅರ್ಹ ಎಲ್ಲಾ ಕುಟುಂಬಗಳನ್ನು ನೋಂದಣಿ ಮಾಡಿ, ಬೆಸ್ಕಾಂ ವತಿಯಿಂದ ಜುಲೈ ಅಂತ್ಯದ ವೇಳೆಗೆ 12.74 ಕೋಟಿ ರು.ಗಳಷ್ಟು ಮೊತ್ತದ ಉಚಿತ ವಿದ್ಯುತ್ ಪೂರೈಕೆ ಮಾಡಿದ್ದರೆ, 2023ರ ಆಗಸ್ಟ್ ನಿಂದ 2024ರ ಜುಲೈ ತಿಂಗಳ ಅಂತ್ಯಕ್ಕೆ ಅದರ ಮೊತ್ತ ಒಟ್ಟು 56.45 ಕೋಟಿ ರು.ಗಳಾಗಿದ್ದು, ಹೆಚ್ಚಿನ ಗುರಿಯನ್ನು ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ (ಎಲ್.ಟಿ.1) ಮತ್ತು ಗೃಹಬಳಕೆಯ (ಎಲ್.ಟಿ.1) ಸೇರಿದಂತೆ ಒಟ್ಟು ಇರುವ ಸ್ಥಾವರ (ಮೀಟರ್) ಗಳ ಸಂಖ್ಯೆ 3,59,143 ಆಗಿದ್ದು, ಇದರಲ್ಲಿ ಯೋಜನೆಗೆ ಅರ್ಹವಾಗಿಲ್ಲದ ಸ್ಥಾವರಗಳು, ವಿವಿಧ ಕಾರಣಗಳಿಂದ ನೋಂದಣಿ ತಿರಸ್ಕರಿಸಿದ ಮತ್ತು ನೋಂದಣಿಗೆ ಆಸಕ್ತಿ ತೋರದ ಗ್ರಾಹಕರು ಇದ್ದಾರೆ. ಬಾಕಿ ಉಳಿದ ಎಲ್ಲಾ 3,18,688 ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಡಿ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ 2024ರ ಜುಲೈವರೆಗೆ ಜಿಲ್ಲೆಯಲ್ಲಿ ಬೆಸ್ಕಾಂನಿಂದ 56.45 ಕೋಟಿ ರು.ಗಳಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ವಿತರಿಸಲಾಗಿದ್ದು, ರಾಮನಗರ ತಾಲೂಕಿನಲ್ಲಿ 19.85 ಕೋಟಿ, ಚನ್ನಪಟ್ಟಣ ತಾಲೂಕಿನಲ್ಲಿ 13.22 ಕೋಟಿ, ಕನಕಪುರ ತಾಲೂಕಿನಲ್ಲಿ 11.27 ಕೋಟಿ , ಹಾರೋಹಳ್ಳಿ ತಾಲೂಕಿನಲ್ಲಿ 4.57 ಕೋಟಿ ಹಾಗೂ ಮಾಗಡಿ ತಾಲೂಕಿನಲ್ಲಿ 7.53 ಕೋಟಿ ರುಪಾಯಿ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.
- ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ರಾಮನಗರ.
3.18 ಲಕ್ಷ ಕುಟುಂಬಗಳಿಗೆ ಶೂನ್ಯ ಬಿಲ್
ಇಂದಿಗೂ ನೋಂದಣಿ ಅವಕಾಶ
ಇಂದಿಗೂ ಗೃಹಜ್ಯೋತಿ ಯೋಜನೆಯ ನೋಂದಣಿಗೆ ಅವಕಾಶವಿದೆ. ಮನೆ ಬದಲಾವಣೆ ಮಾಡಿಕೊಳ್ಳುವವರು, ಹೊಸ ಮನೆ ಕಟ್ಟುವವರು ಕೂಡ ನೋಂದಣಿ ಮಾಡಿಕೊಳ್ಳಬಹುದು. ಅವರಿಗೆ ನಿಯಮಗಳಂತೆ ನಿಗದಿತ ಯೂನಿಟ್‌ಗಳು ಮಾತ್ರ ಉಚಿತ ಇರುತ್ತವೆ.ಗೃಹ ವಿದ್ಯುತ್ ಗ್ರಾಹಕರು ಕಳೆದ ಒಂದು ವರ್ಷದಲ್ಲಿ ಮಾಸಿಕ ಬಳಸಿದ ಸರಾಸರಿ ಯೂನಿಟ್‌ಗೆ ಶೇಕಡಾ 10 ರಷ್ಟು ಹೆಚ್ಚುವರಿ ಯೂನಿಟ್ ಉಚಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಬಳಸುವ ವಿದ್ಯುತ್‌ಗೆ ದರ ಪಾವತಿಸಬೇಕಾಗುತ್ತದೆ.
ಗೃಹಜ್ಯೋತಿ ಯೋಜನೆ ಅಂಕಿ ಅಂಶಗಳು
ನೋಂದಣಿಯಾದವರು - 3,18,688 ಲಕ್ಷ ಗ್ರಾಹಕರುಈವರೆಗೂ ಖರ್ಚಾದ ವೆಚ್ಚ - 56.45 ಕೋಟಿ ರು.
ಯೋಜನೆಯ ಮಾಸಿಕ ವೆಚ್ಚ - 12.74 ಕೋಟಿ ರು.