ತಿಕೋಟಾ: ಸಂವಿಧಾನ ಬದಲಾವಣೆ ಬಗ್ಗೆ ರಾಷ್ಟ್ರ ದ್ರೋಹದ ಹೇಳಿಕೆ ನೀಡಿರುವ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸುವಂತೆ ತಾಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗ್ರೇಡ್ 2 ತಹಶೀಲ್ದಾರ ಎಸ್.ಎಚ್. ಅರಕೇರಿಗೆ ಮನವಿ ಸಲ್ಲಿಸಿದರು.

ಇತ್ತೀಚಿಗೆ ನಡೆದ ಸ್ವಾಮೀಜಿಗಳ ಸಭೆಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ನಮಗೆ ಗೌರವತರುವ ಸಂವಿಧಾನ ಬೇಕು ಎಂದು ಬಹಳ ಹಗುರವಾಗಿ ಮಾತನಾಡಿ ಮನು ಸಿದ್ಧಾಂತ ಜಾರಿಗೆತರುವ ನಿಟ್ಟಿನಲ್ಲಿ ಹೇಳಿಕೆಗಳು ನೀಡಿದ್ದಾರೆ. ಇದು ಮಠಾಧೀಶ ಸ್ವಾಮೀಜಿಯವರಿಗೆ ಶೋಭೆ ತರುವಂತದಲ್ಲ. ಇಂತಹ ಹೇಳಿಕೆಯಿಂದ ರಾಷ್ಟ್ರದಲ್ಲಿ ಗೊಂದಲ ಸೃಷ್ಟಿಸುವ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿರುವುದುು ರಾಷ್ಟ್ರಕ್ಕೆ ಹಾಗೂ ಸಂವಿಧಾನಕ್ಕೆ ಮಾಡಿದ ಅಗೌರವ. ಇಂತಹ ಶ್ರೀಗಳ ವಿರುದ್ಧ ಸ್ವಯಂಪ್ರೇರಿತವಾಗಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಸಿದ್ಧಾರ್ಥ ಪರನಾಕರ, ದಾದಾಪೀರ ಭಡಕಲ್, ಮಾಳು ಗುಗದಡ್ಡಿ, ಜಿ.ಎಚ್.ಜಕಾತಿ, ಮಲ್ಲು ಬಿದರಿ, ರಾಜು ಮಸೂತಿ, ರೂಪೇಶ ಪಿಡಕಾರ, ದತ್ತು ಉಕ್ಕಲಿ, ಸಾಗರ ಪರ್ನಾಕರ, ಅರ್ಜುನ ದರ್ನಾಕರ, ಮಮ್ಮುಸಾಬ ಮುಜಾವರ, ಯಮನಪ್ಪ ಮಲಕನವರ, ರಮೇಶ ಹಿರೇಮನಿ, ಅಬ್ದುಲ್ ಬಾಗವಾನ್, ಬಿ.ಎಸ್.ಗಸ್ತಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.