ಕನ್ನಡಪ್ರಭ ವಾರ್ತೆ ಸಾಗರ
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಚಿತ್ರರಂಗದಲ್ಲಿ ಪ್ರಕಾಶ್ ಹೆಗ್ಗೋಡು ಎಂದು ಗುರುತಿಸಲ್ಪಡುತ್ತಿದ್ದ ಯೇಸು ಪ್ರಕಾಶ್ ಕನ್ನಡದ ವೀರು ಚಿತ್ರದಲ್ಲಿ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಸಂತ, ಮಾದೇಶ, ಬೃಂದಾವನ, ಕಲ್ಪನಾ-೨, ರಾಜಾಹುಲಿ ಸೇರಿ ೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಾದ ದರ್ಶನ್, ಪುನೀತ್ ರಾಜ್‌ಕುಮಾರ್, ಯಶ್, ಮೊದಲಾದವರೊಂದಿಗೆ ತೆರೆ ಹಂಚಿಕೊಂಡಿದ್ದಲ್ಲದೆ, ಅಶೋಕ ಕಶ್ಯಪ್ ನಿರ್ದೇಶನದ ಅಂಬುಟಿ-ಇಂಬುಟಿ ತಮಿಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.
ನೀನಾಸಂನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಯೇಸುಪ್ರಕಾಶ್ ಸಂಗ್ಯಾ-ಬಾಳ್ಯ, ವಿಗಡ ವಿಕ್ರಮರಾಯ, ವೆನ್ನಿಸಿನ ವ್ಯಾಪಾರಿ, ಶಹಜಹಾನ್, ಕೆಂಪು ಕಣಗಿಲೆ, ಕೆ.ಜಿ. ಸುಬ್ಬಣ್ಣ ರಂಗಸಮೂಹದೊಂದಿಗೆ ಸೇರಿಗೆ ಸವ್ವಾಸೇರು, ಕ್ರಮ-ವಿಕ್ರಮ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪರಿಸರ ಜಾಗೃತಿ ಬೀದಿ ನಾಟಕ ದಹಿಸುತ್ತಿದೆ ಧರಣಿ ರಚಿಸಿ, ನಿರ್ದೇಶಿಸಿ, ಅಭಿನಯಿಸಿದ್ದರು. ಈ ನಾಟಕ ಜಿಲ್ಲೆಯ ಹಲವು ಕಡೆಯಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.ಪರಿಸರ, ಕೆರೆಗಳ ಕಾಯಕಲ್ಪಕ್ಕೆ ಶ್ರಮ:
ಯೇಸುಪ್ರಕಾಶ್ ನಿಧನಕ್ಕೆ ತಾಲೂಕಿನ ಹಲವು ರಂಗಕರ್ಮಿಗಳು ಕಂಬನಿ ಮಿಡಿದಿದ್ದಾರೆ. ಭಾನುವಾರ ಬೆಳಗ್ಗೆ ೯ ಗಂಟೆಯಿಂದ ಕಲ್ಲುಕೊಪ್ಪದ ಅವರ ಸ್ವಗೃಹದಲ್ಲಿ ಅಂತಿಮದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮುರುಘಾ ಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಗಳು ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.