ಕ್ಷೇತ್ರವಾರು ಅಂತಿಮ ಮತದಾರರ ಪಟ್ಟಿ ಪ್ರಕಟ

KannadaprabhaNewsNetwork |  
Published : Oct 29, 2026, 03:00 AM IST
28ಕೆಪಿಆರ್‌ಸಿಆರ್‌ 01: | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಅ.27ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 8,69,149 ಪುರುಷರು, 8,38,768 ಮಹಿಳೆಯರು ಹಾಗೂ ಇತರೆ 182 ಸೇರಿದಂತೆ ಒಟ್ಟು 17,08,099 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಅ.27ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 8,69,149 ಪುರುಷರು, 8,38,768 ಮಹಿಳೆಯರು ಹಾಗೂ ಇತರೆ 182 ಸೇರಿದಂತೆ ಒಟ್ಟು 17,08,099 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ ತಿಳಿಸಿದ್ದಾರೆ.

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆಯಡಿ ಕರಡು ಪಟ್ಟಿ ಪ್ರಕಟಿಸಿದ ನಂತರ ಆ.24ರಿಂದ ಅಕ್ಟೋಬರ್‌ 22ರ ವರೆಗೆ ಸಾರ್ವಜನಿಕರಿಂದ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.ಚುನಾವಣಾ ಆಯೋಗದ ನಿಯಮದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಿರಂತರವಾಗಿ ನಡೆಯುವುದರಿಂದ, ಅರ್ಹ ನಾಗರಿಕರು ತಮ್ಮ ಹೆಸರು ಸೇರ್ಪಡೆ ಹಾಗೂ ಅಗತ್ಯ ತಿದ್ದುಪಡಿಗಳಿಗಾಗಿ ನಿಯಮಾನುಸಾರ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಚುನಾವಣಾ ಆಯೋಗದ ಅಧಿಕೃತ ಮತದಾರರ ಸೇವಾ ಪೋರ್ಟಲ್ voters.eci.gov.in ಚುನಾವಣಾ ಆಯೋಗದ *ಇಅIಓಇಖಿ* ಅಪ್ಲಿಕೇಶನ್ ಮೂಲಕ, ಮತಗಟ್ಟೆ ಮಟ್ಟದ ಅಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ-ಮತದಾರರ ನೋಂದಣಾಧಿಕಾರಿಗಳ ಕಚೇರಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕ್ಸ್‌

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು..?ಅಂತಿಮ ಮತದಾರರ ಪಟ್ಟಿಯನ್ವಯ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 98,548 ಪುರುಷರು, 96,713 ಮಹಿಳೆಯರು ಹಾಗೂ ಇತರೆ 25 ಸೇರಿ ಒಟ್ಟು 1,95,286 ಮತದಾರರು. 27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 1,04,005 ಪುರುಷರು, 98,626 ಮಹಿಳೆಯರು ಹಾಗೂ ಇತರೆ 27 ಸೇರಿ ಒಟ್ಟು 2,02,658 ಮತದಾರರು. 28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 1,00,822 ಪುರುಷರು, 98,842 ಮಹಿಳೆಯರು ಹಾಗೂ ಇತರೆ 21 ಸೇರಿ ಒಟ್ಟು 1,99,685 ಮತದಾರರು. 29-ಬಬಲೇಶ್ವರ ಮತಕ್ಷೇತ್ರದಲ್ಲಿ 1,03,812 ಪುರುಷರು, 1,00,131 ಮಹಿಳೆಯರು ಹಾಗೂ ಇತರೆ 9 ಸೇರಿದಂತೆ ಒಟ್ಟು 2,03,952 ಮತದಾರರು. 30-ಬಿಜಾಪುರ ನಗರ ಮತಕ್ಷೇತ್ರದಲ್ಲಿ 1,04,158 ಪುರುಷರು, 1,08,869 ಮಹಿಳೆಯರು ಹಾಗೂ ಇತರೆ 41 ಸೇರಿ ಒಟ್ಟು 2,13,068 ಮತದಾರರು. 31-ನಾಗಠಾಣ ಮತಕ್ಷೇತ್ರದಲ್ಲಿ 1,24,682 ಪುರುಷರು, 1,17,855 ಮಹಿಳೆಯರು ಹಾಗೂ ಇತರೆ 12 ಸೇರಿ ಒಟ್ಟು 2,42,549 ಮತದಾರರು. 32-ಇಂಡಿ ಮತಕ್ಷೇತ್ರದಲ್ಲಿ 1,19,019 ಪುರುಷರು, 1,10,438 ಮಹಿಳೆಯರು ಹಾಗೂ ಇತರೆ 22 ಸೇರಿ ಒಟ್ಟು 2,29,479 ಮತದಾರರು. 33-ಸಿಂದಗಿ ಮತಕ್ಷೇತ್ರದಲ್ಲಿ 1,14,103 ಪುರುಷರು, 1,07,294 ಮಹಿಳೆಯರು ಹಾಗೂ ಇತರೆ 25 ಸೇರಿ ಒಟ್ಟು 2,21,422 ಮತದಾರರಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 17,08,099 ಮತದಾರರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್