ಪಟ್ಟಣ ವಿದ್ಯುತ್ ಅಲಂಕಾರದಿಂದ ವಧುವಣಗಿತ್ತಿಯಂತೆ ಸಿಂಗಾರ
ಕನ್ನಡಪ್ರಭ ವಾರ್ತೆ,ಕಡೂರುಇದೆ 25 ರಂದು ಕಡೂರಿನಲ್ಲಿ ನಡೆಯಲಿರುವ 536ನೇ ಶ್ರೀ ಭಕ್ತ ಕನಕದಾಸ ಮಹೋತ್ಸವಕ್ಕೆ ಪಟ್ಟಣ ವಿದ್ಯುತ್ ಅಲಂಕಾರದಿಂದ ವಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಪಟ್ಟಣದ ಶಿವಮೊಗ್ಗ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆ ಮತ್ತು ಬ್ಯಾನರ್, ಬಂಟಿಂಗ್ಸ್ ರಾರಾಜಿ ಸುತ್ತಿದ್ದು, ಅದ್ದೂರಿ ಸಮಾರಂಭಕ್ಕೆ ವಿಶಾಲವಾದ ವೇದಿಕೆ, ಅಂತಿಮ ಸಿದ್ದತೆಗಳನ್ನು ಮಹೋತ್ಸವದ ಆಚರಣಾ ಸಮಿತಿ ಅಧ್ಯಕ್ಷ ತೋಟದಮನೆ ಮೋಹನ್ ಸಮಿತಿಯವರೊಂದಿಗೆ ಪರಿಶೀಲಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಡಿ.25ರ ಸೋಮವಾರ ಕನಕದಾಸರ ಜಯಂತಿಯನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಉದ್ಘಾಟಿಸಲಿದ್ದು, ವಿವಿಧ ಮಠದ ಪೂಜ್ಯ ಶ್ರೀಗಳು, ಜಿಲ್ಲೆಯ ಶಾಸಕರಾದ ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಜಿ.ಎಚ್. ಶ್ರೀನಿವಾಸ್, ನಯನಾ ಮೋಟಮ್ಮ, ಟಿ.ಡಿ.ರಾಜೇಗೌಡ ಹಾಗೂ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮತ್ತು ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ವೈ.ಎಸ್.ವಿ.ದತ್ತ, ಕೆ.ಬಿ.ಮಲ್ಲಿಕಾರ್ಜುನ್ , ಚುನಾಯಿತ ಗ್ರಾಪಂ ಸದಸ್ಯರು, ಮುಖಂಡರು ಭಾಗವಹಿಸಲಿದ್ದಾರೆ. ಈ ಭಾರಿ ಸಮಾರಂಭದಲ್ಲಿ ವಿಶೇಷವಾಗಿ ತಾಲೂಕಿನ ಎಲ್ಲಾ ಸಮಾಜದ ಅಧ್ಯಕ್ಷರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸೋಮವಾರ ಬೆಳಿಗ್ಗೆ ಪಟ್ಟಣದ ಸಂಗೊಳ್ಳಿರಾಯಣ್ಣ ವೇದಿಕೆ ಆವರಣದ ಬಳಿ ಧ್ವಜಾರೋಹಣ, ನಂತರ ಕನಕರಾಯನ ಗುಡ್ಡದಲ್ಲಿ ವಿಶೇಷ ಪೂಜೆ ಸಲ್ಲಿಕೆ ಬಳಿಕ ಕನಕಜ್ಯೋತಿ ಮೆರವಣಿಗೆಯೊಂದಿಗೆ ಬೈಕ್ ಜಾಥಾ ನಡೆಸಿ ಕನಕ ವೃತ್ತದವರೆಗೆ ಜ್ಯೋತಿ ಬರಮಾಡಿಕೊಳ್ಳಲಾಗುವುದು. ಇಲ್ಲಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮತ್ತು ಶಾಲಾ ಮಕ್ಕಳಿಂದ ಛದ್ಮವೇಷ ಭೂಷಣಗಳ ಪ್ರದರ್ಶನದೊಂದಿಗೆ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಸಂಗೊಳ್ಳಿರಾಯಣ್ಣ ವೃತ್ತ, ಪುರಸಭಾ ಕಚೇರಿ ರಸ್ತೆ, ಕದಂಬ ವೃತ್ತ, ಜೆಟಿ ರಸ್ತೆಯ ಮೂಲಕ ಸಂಗೊಳ್ಳಿರಾಯಣ್ಣ ವೇದಿಕೆಯವರೆಗೆ ಮೆರವಣಿಗೆ ನಡೆಸಲಾಗುತ್ತದೆ ಎಂದರು.ಸಮಾರಂಭದಲ್ಲಿ ಎಲ್ಲಾ ಸಮಾಜದ ಮುಖಂಡರು ಹಾಗೂ ತಾಲೂಕಿನ ಸಮಸ್ತ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಮನವಿ ಮಾಡಿದರು. ಖಜಾಂಚಿ ಕೆ.ಆರ್.ಸುರೇಶ್, ಗಿರೀಶ್, ರಂಗನಾಥ್, ಗೋವಿಂದಪ್ಪ, ಸುರೇಶ್, ಸಾಗರ್ ಮತ್ತಿತರಿದ್ದರು. 23ಕೆಕೆಡಿಯು2,
ಕಡೂರು ಪಟ್ಟಣದ ಸಂಗೊಳ್ಳಿರಾಯಣ್ಣ ವೇದಿಕೆಯಲ್ಲಿ ಅಂತಿಮ ಸಿದ್ದತೆಗಳನ್ನು ಆಚರಣಾ ಮಹೋತ್ಸವ ಸಮಿತಿಯ ಅಧ್ಯಕ್ಷ ತೋಟದಮನೆ ಮೋಹನ್‍ಕುಮಾರ್ ಪರಿಶೀಲಿಸಿ ಮಾತನಾಡಿದರು.