ಸಾಲದ ಕಂತು ಕಟ್ಟುವುದು ವಿಳಂಬವಾಗಿದ್ದಕ್ಕೆ ಫೈನಾನ್ಸ್‌ ಸಿಬ್ಬಂದಿ ಬೆದರಿಕೆ

KannadaprabhaNewsNetwork |  
Published : Apr 23, 2025, 12:33 AM IST
ಪೊಟೊ ಕ್ಯಾಪ್ಸನ್:ಡಂಬಳ ಗ್ರಾಮದ ಮೈಲಾರಲಿಂಗೇಶ್ವರ ಬಡಾವಣೆಯ ನಿವಾಸಿ 20 ಕಂತು ಕಟ್ಟಿದರು ಕೂಡಾ ಒಂದೆ ವಾರದಲ್ಲಿ ಕಂತು ಸಾಲವನ್ನು ಮರುಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ರೈತ ಮಹಿಳೆ ಲತಾ ಈಶಪ್ಪ ಮಠದ ಎನ್ನುವವರ ಮನೆಗೆ ಐಡಿಎಫ್‍ಸಿ ಫಸ್ಟ್ ಭಾರತ್ ಫೈನಾಸ್ ಕಂಪನಿಯ ಮೂವರು ಸಿಬ್ಬಂದಿ ಮನೆಗೆ ಬಂದು ಸಾಲ ಕಟ್ಟುವಂತೆ ವತ್ತಾಯಿಸುತ್ತಿರುವುದು. | Kannada Prabha

ಸಾರಾಂಶ

ಗ್ರಾಮದ ಮೈಲಾರಲಿಂಗೇಶ್ವರ ಬಡಾವಣೆಯ ನಿವಾಸಿ ಲತಾ ಈಶಪ್ಪ ಮಠದ ಕೇವಲ ಒಂದು ತಿಂಗಳ ಸಾಲದ ಕಂತು ತುಂಬದೇ ಇರುವ ಹಿನ್ನೆಲೆಯಲ್ಲಿ ಐಡಿಎಫ್‌ಸಿ ಫಸ್ಟ್‌ ಭಾರತ ಪೈನಾನ್ಸ್‌ನ ಸಿಬ್ಬಂದಿ ಅವರ ನಿವಾಸಕ್ಕೆ ಬಂದು ಅವರನ್ನು ತರಾಟೆಗೆ ತೆಗೆದುಕೊಂಡು ಭಯ ಬೀಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಡಂಬಳ: ಗ್ರಾಮದ ಮೈಲಾರಲಿಂಗೇಶ್ವರ ಬಡಾವಣೆಯ ನಿವಾಸಿ ಲತಾ ಈಶಪ್ಪ ಮಠದ ಕೇವಲ ಒಂದು ತಿಂಗಳ ಸಾಲದ ಕಂತು ತುಂಬದೇ ಇರುವ ಹಿನ್ನೆಲೆಯಲ್ಲಿ ಐಡಿಎಫ್‌ಸಿ ಫಸ್ಟ್‌ ಭಾರತ ಪೈನಾನ್ಸ್‌ನ ಸಿಬ್ಬಂದಿ ಅವರ ನಿವಾಸಕ್ಕೆ ಬಂದು ಅವರನ್ನು ತರಾಟೆಗೆ ತೆಗೆದುಕೊಂಡು ಭಯ ಬೀಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಗ್ರಾಮದ ಲತಾ ಈಶಪ್ಪ ಮಠದ ಸೇರಿದಂತೆ ಬಹಳಷ್ಟು ಗ್ರಾಮಸ್ಥರು ಐಡಿಎಫ್‍ಸಿ ಫಸ್ಟ್ ಭಾರತ್ ಫೈನಾನ್ಸ್‌ ನವರ ಹತ್ತಿರ 35 ಸಾವಿರ ರು. ಸಾಲ ಪಡೆದುಕೊಂಡು ಈಗಾಗಲೆ 20 ಕಂತು ತುಂಬಿದ್ದು, ಪ್ರತಿ ಕಂತಿಗೆ 1890ರಂತೆ 37800 ಕಟ್ಟಿದ್ದಾರೆ. ಇನ್ನು 4 ಕಂತು ಮಾತ್ರ ಬಾಕಿ ಇದೆ. 7560 ಕಟ್ಟಿದರೆ ಸಂಪೂರ್ಣ ಸಾಲ ಮುಗಿಯತ್ತದೆ.

ಕೇವಲ ಈ ತಿಂಗಳ ಕಂತು ಕಟ್ಟಿಲ್ಲ ಎನ್ನುವ ಕಾರಣಕ್ಕೆ ಮನೆಗೆ ಬಂದು ಭಯ ಹುಟ್ಟಿಸುವ ರೀತಿ ಮಾತನಾಡಿ, ನೀವು ಕಂತು ಕಟ್ಟಲೇಬೇಕು. ನಿಮ್ಮ ಮನೆಯಲ್ಲಿರುವ ಸಾಮಾನು ಮಾರಿಯಾದರೂ ಸಾಲ ಕಟ್ಟಬೇಕು. ಅಲ್ಲಿಯವರೆಗೆ ಮನೆ ಬಿಟ್ಟು ಕದಲುವುದಿಲ್ಲ, ಮನೆಗೆ ಬೀಗ ಹಾಕುತ್ತೇವೆ ಎಂದು ಹೆದರಿಸಿದ್ದಾರೆ. ನಮಗೆ ಸಮಯ ಕೊಡಿ ಬೆಳೆ ಬಂದ ಕೂಡಲೇ ಸಾಲ ಕಟ್ಟುತ್ತೇವೆ ಎಂದರೂ ತೀವ್ರ ತೊಂದರೆ ಕೊಡುತ್ತಿದ್ದಾರೆ ಎಂದು ಕನ್ನಡಪ್ರಭದ ಎದುರು ಲತಾ ತಮ್ಮ ಅಳಲನ್ನು ತೊಡಿಕೊಂಡರು.

ಮೈಕ್ರೋ ಫೈನಾನ್ಸಗಳು ತೊಂದರೆ ನೀಡಿದರೆ ತಕ್ಷಣ ಜಿಲ್ಲಾ ಕಚೇರಿಗೆ ಬಂದು ಅರ್ಜಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''