ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪದ್ಮರಿಗೆ ಆರ್ಥಿಕ ನೆರವು

KannadaprabhaNewsNetwork |  
Published : Jul 03, 2026, 01:45 AM IST
2ಕೆಎಂಎನ್ ಡಿ26 | Kannada Prabha

ಸಾರಾಂಶ

ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಂಡ್ಯ ನಗರದ ಆನೆಕೆರೆ ಬೀದಿಯ ನಾಗಣ್ಣರ ಪತ್ನಿ ಪದ್ಮ ಅವರಿಗೆ ಎಂ.ಎಂ.ಫೌಂಡೇಶನ್ ವತಿಯಿಂದ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಔಷಧೋಪಚಾರಕ್ಕಾಗಿ ಆರ್ಥಿಕ ಸಹಾಯ ನೀಡಿ, ಮಾನಸಿಕ ಸ್ಥೈರ್ಯ ತುಂಬಿದರು.

ಮಂಡ್ಯ:

ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಗರದ ಆನೆಕೆರೆ ಬೀದಿಯ ನಾಗಣ್ಣರ ಪತ್ನಿ ಪದ್ಮ ಅವರಿಗೆ ಎಂ.ಎಂ.ಫೌಂಡೇಶನ್ ವತಿಯಿಂದ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಔಷಧೋಪಚಾರಕ್ಕಾಗಿ ಆರ್ಥಿಕ ಸಹಾಯ ನೀಡಿ, ಮಾನಸಿಕ ಸ್ಥೈರ್ಯ ತುಂಬಿದರು.

ನಾಗಣ್ಣರ ಮನೆಗೆ ಭೇಟಿ ನೀಡಿದ ಮಾಹಲಿಂಗೇಗೌಡರು, ಪದ್ಮ ಅವರ ಆರೋಗ್ಯದ ವಿಚಾರಿಸಿದರು. ಆರ್ಥಿಕವಾಗಿ ಹಿಂದುಳಿದಿರುವ ವಿಷಯ ತಿಳಿದು ಮರುಕ ವ್ಯಕ್ತಪಡಿಸಿ ಔಷಧೋಪಚಾರಕ್ಕೆ ಆರ್ಥಿಕ ನೆರವು ನೀಡಿದರು.

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಆರ್ಥಿಕವಾಗಿ ಹಿಂದುಳಿದ ಕಡು ಬಡವರು, ಧೀನ ದುರ್ಬಲರು ಮತ್ತು ವಿಶೇಷಚೇತನರು ವಿವಿಧ ಕಾಯಿಲೆಗಳು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಎಂ.ಎಂ.ಫೌಂಡೇಶನ್ ವತಿಯಿಂದ ಔಷದೋಪಚಾರಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.

ಆಸಕ್ತರು ಹಾಗೂ ಅಗತ್ಯವಿರುವವರು ತಮಗೆ ವೈದ್ಯರ ಸಲಹೆಯೊಂದಿಗೆ ನೀಡಿರುವ ಸಮಂಜಿತ (Prescription) ಔಷಧಿಗಳ ಚೀಟಿ ಜೊತೆಗೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ಇರುವ ಆಧಾರ್ ಕಾರ್ಡ್ ಲಗತ್ತಿಸಿ ಕಚೇರಿ ವಿಳಾಸಕ್ಕೆ ಸಲ್ಲಿಸುವಂತೆ ಮನವಿ ಮಾಡಿದರು.

ಸುಭಾಷ್ ನಗರದ 4ನೇ ಕ್ರಾಸ್ ವಿನೋಬಾ ರಸ್ತೆಯಲ್ಲಿ ಕಚೇರಿ ಇದ್ದು, ರವಿಗೌಡ: 9980994414, ಎಂ.ಎನ್.ರವಿ: 9187432581, ವಿಶ್ವ ಸಿ: 7892457585, ತೇಜಸ್ ಗೌಡ: 8970418361, ಅಮಿತ್ ಗೌಡ: 7338346411, ಶೋಭಾ ಪಿ ಗೌಡ: 9019980735/ 8431388630 ಸಂಪರ್ಕಿಸುವಂತೆ ತಿಳಿಸಿದರು.ಸಮಾಜ ಸೇವೆ ಪುಣ್ಯ ಕೆಲಸ: ಚಿಕ್ಕ ಬೋರಯ್ಯ

ದೇವಲಾಪುರನಮ್ಮ ದುಡಿಮೆಯಿಂದ ಬಂದ ಹಣದಲ್ಲಿ ಸಮಾಜ ಸೇವೆ ಮೂಲಕ ಇತರರಿಗೆ ನೆರವಾಗುವುದು ಪುಣ್ಯ ಕೆಲಸ ಎಂದು ಪ್ರೌಢಶಾಲಾ ಮುಖ್ಯಶಿಕ್ಷಕ ಚಿಕ್ಕಬೋರಯ್ಯ ತಿಳಿಸಿದರು.

ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗಾಗಿ ಪೋಷಕರಾದ ಮಹೇಶ್ ಅವರು ಊಟ ಮಾಡಲು ಕುಳಿತುಕೊಳ್ಳಲು ಉಚಿತವಾಗಿ ಮ್ಯಾಟ್ ವಿತರಿಸುವ ವೇಳೆ ಮಾತನಾಡಿದರು.ಪ್ರಸ್ತುತ ಸಮಾಜದಲ್ಲಿ ಓದಿದ ಶಾಲೆಗೆ ಕೈಲಾದ ಸೇವೆ ಮಾಡಲು ಶಾಲಾ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ತಾವು ಗಳಿಸಿದ ಹಣದಲ್ಲಿ ಅಲ್ಪ ಭಾಗವನ್ನು ಸೇವಾ ಸಂಕಲ್ಪಕ್ಕೆ ಮುಡುಪಾಗಿಟ್ಟು ಬೇರೊಬ್ಬರಿಗೆ ಸಹಾಯಧನ ನೀಡಿ ಮಾದರಿಯಾಗುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಮ್ಯಾಟ್ ಗಳನ್ನು ಕೊಡುಗೆಯಾಗಿ ನೀಡಿದ ಮಹೇಶ್ ಅವರನ್ನು ಶಾಲಾ ವಿದ್ಯಾರ್ಥಿಗಳು, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಆತ್ಮೀಯವಾಗಿ ಅಭಿನಂದಿಸಲಾಯಿತು.ಇದೇ ವೇಳೆ ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಅಧ್ಯಕ್ಷರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್ ಸಂವಿಧಾನ ವಿಶ್ವಕ್ಕೆ ಶ್ರೇಷ್ಠ : ಸೋಮಶೇಖರ್‌
ಬಂಡೀಪುರ ಸಫಾರಿ ಕೇಂದ್ರ, ಶಾಲೆ ದೇಗುಲಕ್ಕೆ ಡೀಸಿ ಭೇಟಿ: ಪರಿಶೀಲನೆ