ರಾಜ್ಯದ 25 ಸಣ್ಣ ಕುಲಕಸುಬುದಾರರಿಗೆ ಆರ್ಥಿಕ ನೆರವು: ಸಚಿವ ಸಂತೋಷ್. ಎಸ್ ಲಾಡ್

KannadaprabhaNewsNetwork |  
Published : Jan 05, 2025, 01:31 AM IST
4ಕೆಕೆಡಿಯು2. | Kannada Prabha

ಸಾರಾಂಶ

ಕಡೂರು, ರಾಜ್ಯದ 25 ಸಣ್ಣ ಕುಲಕಸುಬು ಮಾಡುವವರಿಗೆ ಕಾರ್ಮಿಕ ಇಲಾಖೆಯ ಸೋಶಿಯಲ್ ವೆಲ್‍ಫೇರ್ ಸ್ಕೀಮ್ ಗೆ ಸೇರ್ಪಡೆ ಗೊಳಿಸಿ ಆರ್ಥಿಕ ಸಹಾಯ ಕಲ್ಪಿಸಲಾಗಿದೆ ಎಂದು ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್. ಎಸ್ ಲಾಡ್ ತಿಳಿಸಿದರು.

ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಣೆ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದ 25 ಸಣ್ಣ ಕುಲಕಸುಬು ಮಾಡುವವರಿಗೆ ಕಾರ್ಮಿಕ ಇಲಾಖೆಯ ಸೋಶಿಯಲ್ ವೆಲ್‍ಫೇರ್ ಸ್ಕೀಮ್ ಗೆ ಸೇರ್ಪಡೆ ಗೊಳಿಸಿ ಆರ್ಥಿಕ ಸಹಾಯ ಕಲ್ಪಿಸಲಾಗಿದೆ ಎಂದು ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್. ಎಸ್ ಲಾಡ್ ತಿಳಿಸಿದರು.

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಖಾಸಗಿ ರಸ್ತೆ ಸಾರಿಗೆ ಕಾರ್ಮಿಕರ ಭದ್ರತಾ ಮಂಡಳಿ (ಟ್ರಾನ್ಸ್ ಪೋರ್ಟ್ ಬೋರ್ಡ್‍ನಲ್ಲಿ) ಕೆಲಸ ಮಾಡುವವರು ಆಟೋ ವಾಹನ ಚಾಲಕರು, ಮೆಕಾನಿಕ್ಸ್, ವಾಚ್‍ ಮ್ಯಾನ್ ಸೇರಿದಂತೆ ಇತರೆ ಅನೇಕ ಲಾಜೆಸ್ಟಿಕ್‍ನಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ಅವರಿಗೆ ಕಾರ್ಡ್ ವಿತರಿಸಿ ಅಪಘಾತದಲ್ಲಿ ಸತ್ತರೆ, ಅಂಗವಿಕಲರಾದರೆ ₹ 2 ಲಕ್ಷ ಆಸ್ಪತ್ರೆ ಚಿಕಿತ್ಸಾ ವೆಚ್ಚ ₹1 ಲಕ್ಷ ನೀಡಲಾಗುವುದು. ಅಸಂಘಟಿತ ಕಾರ್ಮಿಕರಾದ ಅಲೆಮಾರಿ, ಸುಣ್ಣಗಾರರು, ಬೀದಿ ಕಾರ್ಮಿಕರು, ಅಕ್ಕಸಾಲಿಗರು, ಕುಂಬಾರರು, ಟೈಲರ್ಸ್, ಕಬ್ಬಿಣ ಕಟ್ಟುವರು ಇಂತಹವರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದರು.ಪಿಂಚಣಿ ಸೌಲಭ್ಯವನ್ನು ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಈಗಾಗಲೇ ನೀಡುತ್ತಿದ್ದು 60 ವರ್ಷ ತುಂಬಿದವರಿಗೆ ಯೋಜನೆ ಸಹಕಾರಿಯಾಗಿದೆ. ಗ್ರಾಚ್ಯುಟಿ ಯೋಜನೆಯಿಂದ ಚಿತ್ರಮಂದಿರಗಳ ಕಾರ್ಮಿಕರು, ನಾಟಕ ಮತ್ತಿತರ ಕಾರ್ಮಿಕರಿಗೆ ಟಿಕೆಟ್‍ಗಳ ಮೇಲಿನ ಶೇ. 2ರಷ್ಟು ಹಣ ಪಾವತಿಸಿ ಅಲ್ಲಿನ ಕಾರ್ಮಿಕರಿಗೆ ನೀಡಲಾಗುತ್ತಿದೆ.ರಾಜಸ್ಥಾನದ ಒಂದು ಪ್ರಕರಣದಲ್ಲಿ ಗೀಗ್ ವರ್ಕರ್ಸ್ ಅಪಘಾತದಲ್ಲಿ ಮೃತ ಪಟ್ಟಿದ್ದು ಈ ಪ್ರಕರಣದ ನಂತರ ರಾಜ್ಯದಲ್ಲಿ ಗಿಗ್ ಕಾರ್ಮಿಕರು ಅಂದರೆ ಹೋಟೆಲ್‍ಗಳಿಂದ ತಿಂಡಿ, ಊಟ ಮತ್ತಿತರ ಆಹಾರ ಪದಾರ್ಥಗಳನ್ನು ಮನೆಗಳಿಗೆ ತಲುಪಿಸುವ ಖಾಸಗಿ ಕಂಪನಿಗಳಾದ ಜೊಮ್ಯಾಟೊ, ಫುಡ್‍ಕಾರ್ಡ್‍ನ ಡಿಲೆವರಿ ಬಾಯ್ಸ್ ನ್ನು ಗುರುತಿಸಿ ಆಹಾರ ಕಂಪನಿಗಳ ಮೂಲಕ ಶೇ. 2 ಹಣ ಪಾವತಿಸಿಕೊಂಡು ಅವರಿಗೆ ಅಪಘಾತ, ಆಸ್ಪತ್ರೆಗೆ ಮತ್ತು ಸತ್ತರೆ ಇಂತಿಷ್ಟು ಹಣ ನಿಗಧಿ ಪಡಿಸಿ ನೀಡಲಾಗುವುದು ಈಗಾಗಲೇ ಇವರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದರು.ಅಂಬೇಡ್ಕರ್ ಸೇವಾ ಕೇಂದ್ರ ತೆರೆದು ಕಟ್ಟಡ ಕಾರ್ಮಿಕರ ನಕಲಿ ಕಾರ್ಮಿಕರ ನೋಂದಣಿ ಗುರುತಿಸಿ ಅವರ ಕಾರ್ಡ್ ರದ್ದು ಪಡಿಸಲಾಗುವುದು ಈಗಾಗಲೇ ರಾಜ್ಯದಲ್ಲಿ 58 ಲಕ್ಷದಲ್ಲಿ 20 ಲಕ್ಷ ಕಾರ್ಡ್ ತೆಗೆದು ಹಾಕಲಾಗಿದೆ. ಉಳಿದಂತ ಕಾರ್ಡ್‍ದಾರರಿಗೆ ಸೌಲಭ್ಯ ನೀಡಲಾಗುವುದು,ಮೊಬೈಲ್ ಮೆಡಿಕಲ್ಸ್ ಯುನಿಟ್ ಯೋಜನೆಯಡಿ ರಾಜ್ಯದಾದ್ಯಂತ 100 ಅಂಬುಲೆನ್ಸ್ ನೀಡಲಾಗುವುದು ಪ್ರತಿ ಜಿಲ್ಲೆಗೆ ಕನಿಷ್ಠ 3 ಸ್ಮಾರ್ಟ್ ಅಂಬುಲೆನ್ಸ್ ದೊರಕಲಿದ್ದು, ಇವುಗಳು ಕಾರ್ಮಿಕರ ಮನೆ ಬಾಗಿಲಿಗೆ ತೆರಳಿ ಅವರ ಆರೋಗ್ಯ ತಪಾಸಣೆ ಮಾಡಿ ಔಷಧಿ ವಿತರಿಸುವ ಗುರಿ ಹೊಂದಿದೆ.ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಕೆ.ಎಸ್.ಆನಂದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್ ಮತ್ತಿತರರು ಇದ್ದರು.

-- ಕೋಟ್‌ --

ಸತೀಶ್ ಜಾರಕಿ ಹೊಳಿಯವರ ಔತಣ ಕೂಟಕ್ಕೆ ತಾವು ಹೋಗಿರಲಿಲ್ಲ. ಅದೂ ಅಲ್ಲದೆ ಹೋಗುವ ಅವಶ್ಯಕತೆಯೇ ಇರಲಿಲ್ಲ. ಇತ್ತೀಚೆಗೆ ಸೌಹಾರ್ದಯುತವಾಗಿ ಮಾತನಾಡಿಸಿದರೂ ಕೂಡ ಅದಕ್ಕೆ ರೆಕ್ಕೆ ಪುಕ್ಕ ಕಟ್ಟಲಾಗುತ್ತದೆ. ಎಂದು ನಗುತ್ತಲೇ ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಸಂತೋಷ್, ಸಿ.ಟಿ ರವಿಯವರ ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರತಿಕ್ರಿಯಿಸಿ ಈ ಪ್ರಕರಣ ಮಗಿದಿದ್ದು ಮುಂದಿನ ಕ್ರಮ ಕಾನೂನು ಚೌಕಟ್ಟಿನಡಿ ನಡೆಯುತ್ತದೆ ಎಂದು ಉತ್ತರಿಸಿದರು.4ಕೆಕೆಡಿಯು2.

ಕಡೂರು ಪ್ರವಾಸಿ ಮಂದಿರಕ್ಕೆ ಆಗಮಿಸಿದ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಡಾ.ಅಂಶುಮಂತ್, ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ