ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಆರ್ಥಿಕ ದಿವಾಳಿ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Apr 04, 2024, 01:03 AM IST
ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಆರ್ಥಿಕ ಪರಸ್ಥೀತಿಯನ್ನು ದಿವಾಳಿ, | Kannada Prabha

ಸಾರಾಂಶ

ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದ ಜನ ಪರ ಅಭಿವೃದ್ಧಿ ಕಾರ್ಯಗಳನ್ನು ಬದಿಗಿಟ್ಟು ತಮ್ಮ ೫ ಗ್ಯಾರಂಟಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ೫ ಗ್ಯಾರಂಟಿಗಳಲ್ಲಿ ವಿದ್ಯಾನಿಧಿ ಹಾಗೂ ಹತ್ತು ಕೆಜಿ ಅಕ್ಕಿ ಯೋಜನೆ ಹಳ್ಳ ಹಿಡಿದು ತುಕ್ಕು ಹಿಡಿಯುತ್ತಿದೆ ಎಂದು ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಎಬ್ಬಿಸಿದೆ. ಪ್ರಸ್ತುತ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸಂಕಷ್ಟದಲ್ಲಿರುವ ರಾಜ್ಯದ ಜನತೆಯನ್ನು ತಿರುಗಿ ನೋಡದ ಕಾಂಗ್ರೆಸ್ ಸರಕಾರ ಇದ್ದು ಸತ್ತಂಗೆ. ಕಾರಣ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಮೂರನೇ ಬಾರಿ ರಾಜ್ಯದಲ್ಲಿ ೨೮ ಕ್ಷೇತ್ರದಲ್ಲಿ ಆಶೀರ್ವಾದ ಮಾಡಬೇಕು ಎಂದು ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಚಾರ ನಡೆಸಿ ನಂತರ ಕಡೂರ ಗ್ರಾಮದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದ ಜನ ಪರ ಅಭಿವೃದ್ಧಿ ಕಾರ್ಯಗಳನ್ನು ಬದಿಗಿಟ್ಟು ತಮ್ಮ ೫ ಗ್ಯಾರಂಟಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ೫ ಗ್ಯಾರಂಟಿಗಳಲ್ಲಿ ವಿದ್ಯಾನಿಧಿ ಹಾಗೂ ಹತ್ತು ಕೆಜಿ ಅಕ್ಕಿ ಯೋಜನೆ ಹಳ್ಳ ಹಿಡಿದು ತುಕ್ಕು ಹಿಡಿಯುತ್ತಿದೆ.

ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಕಾಂಗ್ರೆಸ್ ಮುಖಂಡ ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸಭೆಯಲ್ಲಿ ಮೋದಿ ಸರಕಾರಕ್ಕೆ ೪೦೦ ಸ್ಥಾನ ಸಿಗುವ ಭವಿಷ್ಯ ನುಡಿಯುವ ಮೂಲಕ ರಾಹುಲ್ ಕನಸನ್ನು ನುಚ್ಚು ನೂರು ಮಾಡಿದ್ದಾರೆ.

ತಾಲೂಕಿನ ಶಾಸಕ ಯು.ಬಿ. ಬಣಕಾರ ಸರಳ ಸಜ್ಜನಿಕೆಯ ರಾಜಕಾರಣಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದು, ತಾಲೂಕಿನ ಅಭಿವೃದ್ದಿಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮತ್ತೊಮ್ಮೆ ಪೂಜೆ ಮಾಡಿ ಅನುಷ್ಠಾನಗೊಳಿಸುತ್ತಿರುವುದೇ ಅವರ ಸಾಧನೆಯಾಗಿದೆ.

ಇದೇ ಸಂದರ್ಭದಲ್ಲಿ ಪಾಲಕ್ಷಗೌಡ ಪಾಟೀಲ್, ಲಿಂಗರಾಜ ಚಪ್ಪರದಳ್ಳಿ, ಡಿ.ಎಂ. ಸಾಲಿ, ದೇವರಾಜ ನಾಗಣ್ಣನವರ, ಎಸ್.ಎಸ್. ಪಾಟೀಲ್, ಸೃಷ್ಟಿ ಪಾಟೀಲ್, ಆನಂದಪ್ಪ ಹಾದಿಮನಿ, ಎನ್.ಎಂ. ಈಟೇರ್, ಶಿವಕುಮಾರ ತಿಪಶೆಟ್ಟಿ, ಸುಶೀಲ್ ನಾಡಿಗೇರ, ಲತಾ ಬಣಕಾರ, ಕಾವ್ಯಾ ಹಾದಿಮನಿ, ರವಿಶಂಕರ ಬಾಳಿಕಾಯಿ, ಬಸಮ್ಮ ಅಬಲೂರ, ಜಗದೀಶ ಲಕ್ಕನಗೌಡ್ರ, ಸುಮಿತ್ರ ಬತ್ತಿಕೋಪ್ಪ, ಗೀತಾ ದಂಡಗಿಹಳ್ಳಿ, ಶೇಖಪ್ಪ ತುಮ್ಮಿನಕಟ್ಟಿ ಮುಂತಾದವರು ಇದ್ದರು.ಮೋದಿ ಬಂದ ಮೇಲೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರದ ಕಾಲ ಅಂತ್ಯ

ಕೇಂದ್ರದಲ್ಲಿ ನರೇಂದ್ರ ಮೋದಿಯವರು ಬಂದ ಮೇಲೆ ಸಮ್ಮಿಶ್ರ ಸರ್ಕಾರದ ಕಾಲ ಮುಗಿದು ಹೋಗಿದೆ. ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಏಕ ಪಕ್ಷದ ಆಡಳಿತ ಒಳ್ಳೆಯದು ಎಂದು ದೇಶದ ಜನರು ತೀರ್ಮಾನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕುಡುಪಲಿ, ಕಡೂರು, ಬುಳ್ಳಾಪೂರ, ಹಳ್ಳೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಈ ಚುನಾವಣೆಯ ಕೇಂದ್ರಬಿಂದುವಾಗಿದ್ದಾರೆ. ಸಾಮಾನ್ಯವಾಗಿ ಎರಡು ವ್ಯಕ್ತಿತ್ವದ ನಡುವೆ ಚುನಾವಣೆಯಾಗುತ್ತದೆ. ಆದರೆ, ಇಲ್ಲಿ ನರೇಂದ್ರ ಮೋದಿ ಪರ ಹಾಗೂ ನರೇಂದ್ರ ಮೋದಿ ವಿರುದ್ಧ ಚುನಾವಣೆ ನಡೆಯುತ್ತಿದೆ. ದೇಶದಲ್ಲಿ ನರೇಂದ್ರ ಮೋದಿಯಂತಹ ವ್ಯಕ್ತಿತ್ವ ಬೇರೆ ಯಾರೂ ಇಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ