ಆರ್ಥಿಕ ಸಾಕ್ಷರತೆ, ಆರ್ಥಿಕ ಯೋಜನೆಗಳ ಅರಿವು ಕಾರ್ಯಕ್ರಮ

KannadaprabhaNewsNetwork |  
Published : Jul 21, 2025, 01:30 AM IST
ಫೋಟೊಪೈಲ್- ೧೭ಎಸ್ಡಿಪಿ೪- ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಆರ್ಥಿಕ ಯೋಜನೆಗಳ ಅರಿವು ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಹಾರ್ಸಿಕಟ್ಟಾ ಕೆವಿಜಿ ಬ್ಯಾಂಕ್‌ನ ವ್ಯವಸ್ಥಾಪಕ ಅಭಿಶಂಕರ ಅವರು ಜನರು ಬ್ಯಾಂಕಿಗೆ ಬರಬೇಕು.

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಬಾರ್ಡ್ ಮತ್ತು ಕೆನರಾ ಡಿಸಿಸಿ ಬ್ಯಾಂಕ್ ಶಿರಸಿ ಸಹಯೋಗದಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಆರ್ಥಿಕ ಯೋಜನೆಗಳ ಅರಿವು ಕಾರ್ಯಕ್ರಮ ನಡೆಯಿತು.ನಬಾರ್ಡ್‌ನ ಡಿಡಿಎಂ ಸುಶೀಲ್‌ಕುಮಾರ ಮಾತನಾಡಿ, ನಬಾರ್ಡ್ ೪೩ ವರ್ಷ ಪೂರೈಸಿ ೪೪ನೇ ವರ್ಷದ ಸಂಭ್ರಮದಲ್ಲಿದೆ. ನಬಾರ್ಡ್‌ ಆರ್ಥಿಕ ವ್ಯವಹಾರ, ನಬಾರ್ಡ್ ನಡೆದು ಬಂದ ದಾರಿ ಕುರಿತು ಹಾಗೂ ನಬಾರ್ಡ್ ಯಾವ ರೀತಿಯಾಗಿ ಗ್ರಾಮೀಣ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದೆ ಎಂದು ವಿವರಿಸಿದರು.

ನಂತರ ಸಂಘದ ಸದಸ್ಯರೊಂದಿಗೆ ಹಾಗೂ ವಿವಿಧ ಹಾಲು ಸಂಘ, ಸಂಜೀವಿನಿ ಒಕ್ಕೂಟ, ಮಹಿಳಾ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಕೆಡಿಸಿಸಿ ಬ್ಯಾಂಕ್‌ನ ಸಿದ್ದಾಪುರ ಶಾಖೆಯ ಪ್ರಕಾಶ ದೀಕ್ಷಿತ್ ಅವರು ಆರ್ಥಿಕ ಸೇರ್ಪಡೆ, ಬ್ಯಾಂಕಿಂಗ್ ಸೇವೆ, ವಿಮೆ, ಸಾಮಾಜಿಕ ಭದ್ರತೆ,ಡಿಜಿಟಲ್ ಬ್ಯಾಂಕ್ ವ್ಯವಹಾರದ ಕುರಿತು ಮಾಹಿತಿ ನೀಡಿದರು.

ಹಾರ್ಸಿಕಟ್ಟಾ ಕೆವಿಜಿ ಬ್ಯಾಂಕ್‌ನ ವ್ಯವಸ್ಥಾಪಕ ಅಭಿಶಂಕರ ಅವರು ಜನರು ಬ್ಯಾಂಕಿಗೆ ಬರಬೇಕು. ಅಲ್ಲಿಯ ಸೌಲಭ್ಯವನ್ನು ತಿಳಿದುಕೊಂಡು ವ್ಯವಹಾರ ಮಾಡಬೇಕು. ಬ್ಯಾಂಕಿನ ಲಾಕರ್ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.

ಕೆನರಾ ಡಿಸಿಸಿ ಬ್ಯಾಂಕ್‌ನ ಎಜಿಎಂ ಅನಿತಾ ನೇರಲಕಟ್ಟಿ ಬ್ಯಾಂಕಿನ ವ್ಯವಹಾರದ ಕುರಿತು ಮಾಹಿತಿ ನೀಡಿ ೦ಪರ್ಸಂಟ್‌ನಲ್ಲಿ ನೀಡುತ್ತಿರುವ ಹೈನುಗಾರಿಕೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಮೊಬೈಲ್‌ಗೆ ಬರುವ ಎಸ್‌ಎಂಎಸ್ ಕುರಿತು ಜಾಗೃತರಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಕೆನರಾ ಡಿಸಿಸಿ ಬ್ಯಾಂಕ್‌ನವರು ಕೆಸಿಸಿ ಸಾಲ ಸೌಲಭ್ಯ ನೀಡುತ್ತಿರುವ ನಿಯಮಾವಳಿಯಲ್ಲಿ ಸರಳತೆ ತರಬೇಕೆಂದು ಸದಸ್ಯರು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಅಧ್ಯಕ್ಷತೆ ವಹಿಸಿದ್ದರು. ಹಾರ್ಸಿಕಟ್ಟಾ ಗ್ರಾಪಂ ಸದಸ್ಯರಾದ ಅನಂತ ಹೆಗಡೆ ಹೊಸಗದ್ದೆ, ಗೋಪಾಲಕೃಷ್ಣ ಗಾಳಿಳಿಜಡ್ಡಿ, ಕದಂಬ ವಿವಿಧೋದ್ದೇಶ ಸೇವಾಸಹಕಾರಿ ಸಂಘದ ನಿರ್ದೇಶಕ ರಮಾನಂದ ಹರಗಿ ಇತರರಿದ್ದರು.

ಸಂಜೀವಿನಿ ಒಕ್ಕೂಟದ ಪ್ರೇಮಾ ನಾಯ್ಕ ಹಾಗೂ ಮಾದಲಮನೆ ಹಾಲು ಉತ್ಪಾದಕ ಸಂಘದ ಮಂಜುಳಾ ನಾಯ್ಕ ಮಾತನಾಡಿದರು.

ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಿದ್ದಾಪುರ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ ಭಟ್ಟ ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

PREV

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು