ಆರ್ಥಿಕ ಸಾಕ್ಷರತೆ ವ್ಯಕ್ತಿಯ ಜೀವನದ ಪ್ರಮುಖ ಅಂಶ

KannadaprabhaNewsNetwork |  
Published : Jul 21, 2025, 12:00 AM IST
20ಎಚ್ಎಸಬ್ನ್7 :  ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ’ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್‌ವರ್ಕ್ ವತಿಯಿಂದ ಫೈನಾನ್ಸ್ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ’ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಆರ್ಥಿಕ ಸಾಕ್ಷರತೆ ಯಾವುದೇ ವ್ಯಕ್ತಿಯ ಜೀವನದ ಪ್ರಮುಖ ಅಂಶವಾಗಿದ್ದು, ಸರ್ಕಾರಿ ವಿಮಾ ಯೋಜನೆಗಳನ್ನು ಬಳಸುವುದು ಮತ್ತು ವಂಚನೆ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಅಗತ್ಯ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ ತಿಳಿಸಿದರು. ಸಮಾಜದಲ್ಲಿ ಆರ್ಥಿಕ ಸಾಕ್ಷರತೆ ಯಾವುದೇ ವ್ಯಕ್ತಿಯ ಜೀವನದ ಪ್ರಮುಖ ಅಂಶವಾಗಿದೆ ಎಂದರು. ಬಜೆಟ್ ನಿರ್ವಹಣೆ, ಹೂಡಿಕೆ, ಸಾಲದ ಆಯ್ಕೆಗಳು, ವಿಮಾ ರಕ್ಷಣೆ, ಸರ್ಕಾರಿ ವಿಮಾ ಯೋಜನೆಗಳನ್ನು ಬಳಸುವುದು ಮತ್ತು ವಂಚನೆ ತಡೆಗಟ್ಟುವ ಕ್ರಮಗಳು ಸೇರಿದಂತೆ ವಿವಿಧ ಹಣಕಾಸು ವಿಷಯಗಳ ಕುರಿತು ಮಾಹಿತಿ ನೀಡಿದಲ್ಲದೇ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಆರ್ಥಿಕ ಸಾಕ್ಷರತೆ ಯಾವುದೇ ವ್ಯಕ್ತಿಯ ಜೀವನದ ಪ್ರಮುಖ ಅಂಶವಾಗಿದ್ದು, ಸರ್ಕಾರಿ ವಿಮಾ ಯೋಜನೆಗಳನ್ನು ಬಳಸುವುದು ಮತ್ತು ವಂಚನೆ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಅಗತ್ಯ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್‌ವರ್ಕ್ ವತಿಯಿಂದ ಫೈನಾನ್ಸ್ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಆರ್ಥಿಕ ಸಾಕ್ಷರತೆ ಯಾವುದೇ ವ್ಯಕ್ತಿಯ ಜೀವನದ ಪ್ರಮುಖ ಅಂಶವಾಗಿದೆ ಎಂದರು. ಬಜೆಟ್ ನಿರ್ವಹಣೆ, ಹೂಡಿಕೆ, ಸಾಲದ ಆಯ್ಕೆಗಳು, ವಿಮಾ ರಕ್ಷಣೆ, ಸರ್ಕಾರಿ ವಿಮಾ ಯೋಜನೆಗಳನ್ನು ಬಳಸುವುದು ಮತ್ತು ವಂಚನೆ ತಡೆಗಟ್ಟುವ ಕ್ರಮಗಳು ಸೇರಿದಂತೆ ವಿವಿಧ ಹಣಕಾಸು ವಿಷಯಗಳ ಕುರಿತು ಮಾಹಿತಿ ನೀಡಿದಲ್ಲದೇ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು.

ಮೈಕ್ರೋಫೈನಾನ್ಸ್ ಇಂಡಸ್ಟ್ರಿ ನೆಟ್ ವರ್ಕ್‌ನ ಎಮ್.ಎಸ್. ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸಾಕ್ಷರತೆಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಎಂ.ಎಫ್.ಐ.ಎಂ. ಸದಸ್ಯರಾಗಿರುವ ಎಲ್ಲಾ ಮೈಕ್ರೋಫೈನಾನ್ಸ್ ಕಂಪನಿಗಳು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನಿಯಂತ್ರಿಸಲ್ಪಡುತ್ತವೆ ಎಂಬುದನ್ನು ಸ್ಪಷ್ಟಪಡಿಸಿದರು. ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ ೨೦೨೫ ಅನಿಯಂತ್ರಿತ ಘಟಕಗಳ ಕಾರ್ಯಾಚರಣೆಗಳನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ ಮತ್ತು ಈ ಸುಗ್ರೀವಾಜ್ಞೆಯು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ನೋಂದಾಯಿಸಲಾದ ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದರು. ಹಣಕಾಸು ಪದ್ಧತಿಗಳ ಕುರಿತು ಗ್ರಾಮಸ್ಥರಿಗೆ ಅಮೂಲ್ಯವಾದ ಸಲಹೆಯನ್ನು ನೀಡುತ್ತಾ, ಸಾಲಗಾರರು ಮರುಪಾವತಿಯಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಹೊಂದಿದ್ದರೆ ಮತ್ತು ನಿಯಂತ್ರಿತ ಸಂಸ್ಥೆಯು ಒದಗಿಸಿದ ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, ಸಾಲಗಾರರು ಗ್ರಾಹಕರ ಕುಂದುಕೊರತೆ ಪರಿಹಾರ ಕಾರ್ಯವಿಧಾನ ಅಳವಡಿಸಿಕೊಳ್ಳಬಹುದು ಎಂದು ಹೇಳಿದರು. ತಾಲ್ಲೂಕಿನ ತಹಶಿಲ್ದಾರ್ ಶ್ರೇಣಿ ೨ ಶ್ರೀ ಮೋಹನ್‌ಕುಮಾರ್ ಯು ಎಮ್ ಅವರು ಮಹಿಳೆಯರು ಸಾಲವನ್ನು ಅವಶ್ಯಕತೆಯಿದ್ದರೆ ಮಾತ್ರ ಪಡೆಯಬೇಕು ಹಾಗೂ ಮೈಕ್ರೋ ಫೈನಾನ್ಸ್ ಸಾಲಗಳನ್ನು ಆದಾಯೋತ್ಪನ್ನ ಚಟುವಟಿಕೆಗಳಿಗೆ ಬಳಸಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಹಾಗೂ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸುವುದರಿಂದ ಅವಶ್ಯಕತೆಯಿದ್ದಾಗ ಆರ್‌.ಬಿ.ಐ. ನಿಯಂತ್ರಿತ ಸಂಸ್ಥೆಗಳಿಂದ ಸಾಲ ಪಡೆಯುವುದು ಸೂಕ್ತ ಎಂದು ಕಿವಿಮಾತು ಹೇಳಿ, ಒಈIಓ ಸಂಸ್ಥೆಯ ಈ ಕಾರ್ಯಾಗಾರವನ್ನು ಶ್ಲಾಘಿಸಿ ಇಂಥಹಾ ಕಾರ್ಯಕ್ರಮಗಳಿಂದಾಗಿ ಮಹಿಳಾ ಸಾಲಗಾರರು ಸಾಲಗಳನ್ನು ಪಡೆಯುವಾಗ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವರು ಹಣಕಾಸು, ಜೀವನೋಪಾಯ, ಕುಟುಂಬ ಮತ್ತು ಸಾಮಾಜಿಕ ಭದ್ರತಾ ಅಂಶಗಳ ಕುರಿತು ಉತ್ತಮ ಮಾರ್ಗಗಳನ್ನು ಅನ್ವೇಷಿಸುತ್ತಾರೆ ಎಂದರು. ಈ ಕಾರ್ಯಕ್ರಮವನ್ನು ಕ್ರೆಡಿಟ್‌ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ಸಂಸ್ಥೆಯು ಪ್ರಾಯೋಜಿಸಿದ್ದು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಃI ನೋಂದಾಯಿತ ಎಲ್ಲಾ ಮೈಕ್ರೋಫೈನಾನ್ಸ್ ಸಂಸ್ಥೆಗಳೂ ತಮ್ಮನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಕ್ರೆಡಿಟ್‌ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ಸಂಸ್ಥೆಯ ವಲಯ ವ್ಯವಸ್ಥಾಪಕರಾದ ವಿಭಾಗೀಯ ವ್ಯವಸ್ಥಾಪಕರು ಎಂ.ಕೆ. ಲೋಕೇಶ್, ಪ್ರಾದೇಶಿಕ ವ್ಯವಸ್ಥಾಪಕರು ಪ್ರದೀಪ್, ಗ್ರಾಮೀಣ ಕೂಟ ಸಂಸ್ಥೆಯ ಡಿವಿಜನಲ್ ಮ್ಯಾನೇಜರ್ ಸಿ.ವಿ. ಲೋಕೇಶ್, ಮೋಹನ್, ಚಿದಾನಂದ್, ಚೈತನ್ಯ ಇಂಡಿಯ ಫೈನಾನ್ಸ್ ನವೀನ್ ಕುಮಾರ್ ಇತರರು ಉಪಸ್ಥಿತರಿದ್ದರು. ಪ್ರೀತಿ ಮತ್ತು ವಿಮಲ ಪ್ರಾರ್ಥಿಸಿದರು.

PREV

Recommended Stories

ಪ್ರೇಮದ ಇನ್ನೊಂದು ಹೆಸರೇ ಅಮೃತಾ ಪ್ರೀತಮ್
ಹೋಬೋ ಸೆಕ್ಷುಯಾಲಿಟಿ : ಒಂದು ಹಗುರ ಸಂಬಂಧದ ಕಥೆ!