ಶರಣರ ವಚನಗಳು ಬದುಕಿನ ಜ್ಞಾನದ ಖನಿ: ವಿ.ಜಿ. ವಳಗೇರಿ

KannadaprabhaNewsNetwork |  
Published : Jul 21, 2025, 12:00 AM IST
ಕಾರ್ಯಕ್ರಮದಲ್ಲಿ ತಾಲೂಕಾಧ್ಯಕ್ಷ ಜಿ.ಎಂ.ಓ ಕಾರಣ್ಣನವರ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ ಮೌಲ್ಯವೇ ಶರಣ ಸಾಹಿತ್ಯ. ಅರಿವೆ ಗುರು ಎಂಬ ಸತ್ಯ ಇಲ್ಲಿದೆ. ವಚನ ಬದುಕಿನ ಜ್ಞಾನದ ಖನಿ. ಆದರೆ ಎಲ್ಲ ಮನೆ ಮನಗಳಿಗೆ ವಚನ ಸಾಹಿತ್ಯ ತಲುಪುವಂತಾಗಬೇಕು.

ಹಾವೇರಿ: ವಿಶ್ವವೇ ಒಪ್ಪುವ ಮೌಲ್ಯ ಬಿತ್ತಿ ಬೆಳೆದ ಶರಣ ಸಾಹಿತ್ಯದ ಚಿಂತನೆಗಳ ಫಲವಾಗಿ ಜಗಜ್ಯೋತಿ ಬಸವಣ್ಣನಾವರಾದಿಯಾಗಿ ಶರಣರು ಬೆಳಗುವ ಭವ್ಯ ಬೆಳಕಾದರು ಎಂದು ಹಾವೇರಿ ಜಿಲ್ಲಾ ಬಸವ ಬಳಗದ ಅಧ್ಯಕ್ಷ ವಿ.ಜಿ. ವಳಗೇರಿ ತಿಳಿಸಿದರು.

ನಗರದ ಭಗತ್ ಪಿಯು ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಆಯೋಜಿಸಿದ್ದ ವಚನ ಸಾಹಿತ್ಯ ಹಾಗೂ ಫ.ಗು. ಹಳಕಟ್ಟಿ ಒಂದು ಚಿಂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಮೌಲ್ಯವೇ ಶರಣ ಸಾಹಿತ್ಯ. ಅರಿವೆ ಗುರು ಎಂಬ ಸತ್ಯ ಇಲ್ಲಿದೆ. ವಚನ ಬದುಕಿನ ಜ್ಞಾನದ ಖನಿ. ಆದರೆ ಎಲ್ಲ ಮನೆ ಮನಗಳಿಗೆ ವಚನ ಸಾಹಿತ್ಯ ತಲುಪುವಂತಾಗಬೇಕು ಎಂದರು.

ಶಸಾಪ ಯುವ ಘಟಕದ ಜಿಲ್ಲಾಧ್ಯಕ್ಷ ಜಗದೀಶ ಹತ್ತಿಕೋಟಿ ಮಾತನಾಡಿ, ಭಕ್ತಿಯ ಶುಭಾಶಯ ನುಡಿದವರು ಶರಣರು. ಜ್ಞಾನ ಕ್ರೋಡಿಕರಿಸಬೇಕಾಗಿದೆಯೇ ಹೊರತು, ಭೌತಿಕ ಸಂಪತ್ತನ್ನಲ್ಲ. ಸಮಾಜ ಬದುಕಿ ನಾನೂ ಬದುಕಬೇಕು ಎಂಬ ಸತ್ಯ ಶರಣರದ್ದಾಗಿದೆ. ಅಹಂಕಾರ ಹೊರಗಿಟ್ಟು ಸಹಕಾರ ತತ್ವದಲ್ಲಿ ನಂಬಿಕೆ ಇಟ್ಟು ಬದುಕುವುದೇ ಶರಣ ಧರ್ಮ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಂ.ಓ ಕಾರಣ್ಣನವರ ಮಾತನಾಡಿ, ಸ್ತ್ರೀ ಸ್ವಾತಂತ್ರ್ಯಕ್ಕೆ ಶಕ್ತಿ ತುಂಬಿ ಸಾತ್ವಿಕ ಜೀವನ ಸಿದ್ಧಾಂತ ಅರುಹಿದ ಶರಣರ ಚಿಂತನೆ ಸಾರ್ವಕಾಲಿಕವಾದುದು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ, ತಾಲೂಕು ಕಾರ್ಯದರ್ಶಿ ಎಂ.ಬಿ. ಸತೀಶ, ಶಿವಾನಂದ ಹೊಸಮನಿ, ರತನ್ ಕಾಶಪ್ಪನವರ, ಆಸ್ಮಾ ತಳಕಲ್ಲ, ರಶ್ಮಿ ಬಾಗರ, ಪ್ರಕಾಶ ದೆಮ್ಮಟ್ಟಿ, ಲಕ್ಷ್ಮೀ ಕರಾಟೆ, ಪುಷ್ಪಾ ಕಡೂರ, ಬಸವರಾಜಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವೀರಶೈವ ಲಿಂಗಾಯತ ಸಮಾವೇಶದಲ್ಲಿ ಪಾಲ್ಗೊಳ್ಳಲು ಮನವಿ

ಹಿರೇಕೆರೂರು: ದಾವಣಗೆರೆಯಲ್ಲಿ ಜು. 21 ಮತ್ತು 22ರಂದು ಜರುಗಲಿರುವ ವೀರಶೈವ ಲಿಂಗಾಯತ ಸಮಾವೇಶಕ್ಕೆ ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿನ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮಾವೇಶದಲ್ಲಿ ಪಂಚಪೀಠಾಧೀಶ್ವರರು, ಉಪಪಂಗಡಗಳ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಶಂಕರ ಬಿದರಿ ಉಪಸ್ಥಿತರಿರುವರು. ತಾಲೂಕಿನ ಸಮಸ್ತ ಸಮಾಜದವರು ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು