ಸರ್ಕಾರಿ ಜಾಗ ಹುಡುಕಿ, ನಿರಾಶ್ರಿತರಿಗೆ ನಿವೇಶನ ಸೌಲಭ್ಯ

KannadaprabhaNewsNetwork |  
Published : Oct 17, 2024, 01:00 AM IST
15ಜೆಎಲ್ಆರ್ಚಿತ್ರ2) ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆ ನೀರು ನುಗ್ಗಿ ಮನೆ ಕಳೆದಕೊಂಡ ಹಿನ್ನೆಲೆ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ನಿರಾಶ್ರಿತರ ಸಭೆಯಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿದರು. | Kannada Prabha

ಸಾರಾಂಶ

ಕೆರೆ ನೀರು ಮನೆಗಳಿಗೆ ನುಗ್ಗಿ ಬೀದಿಗೆ ಬಿದ್ದಿರುವ ಕುಟುಂಬಗಳನ್ನು ಕಂಡು ಮನಸ್ಸಿಗೆ ನೋವುಂಟಾಗಿದೆ. ಹಿರೇಮಲ್ಲನಹೊಳೆ ಗ್ರಾಮದಲ್ಲಿ ಒಂದು ಕಡೆ ಕೆರೆ ತುಂಬಿದ ಸಂಭ್ರಮ, ಮತ್ತೊಂದೆಡೆ ಮನೆಗಳು ಜಲಾವೃತವಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ತಾಲೂಕು ಆಡಳಿತ ನಿಮ್ಮ ನೆರವಿಗೆ ಸದಾ ಇರಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- ಹಿರೇಮಲ್ಲನಹೊಳೆಯಲ್ಲಿ ನಿರಾಶ್ರಿತರ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಭರವಸೆ - - - ಕನ್ನಡಪ್ರಭ ವಾರ್ತೆ ಜಗಳೂರು

ಕೆರೆ ನೀರು ಮನೆಗಳಿಗೆ ನುಗ್ಗಿ ಬೀದಿಗೆ ಬಿದ್ದಿರುವ ಕುಟುಂಬಗಳನ್ನು ಕಂಡು ಮನಸ್ಸಿಗೆ ನೋವುಂಟಾಗಿದೆ. ಹಿರೇಮಲ್ಲನಹೊಳೆ ಗ್ರಾಮದಲ್ಲಿ ಒಂದು ಕಡೆ ಕೆರೆ ತುಂಬಿದ ಸಂಭ್ರಮ, ಮತ್ತೊಂದೆಡೆ ಮನೆಗಳು ಜಲಾವೃತವಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ತಾಲೂಕು ಆಡಳಿತ ನಿಮ್ಮ ನೆರವಿಗೆ ಸದಾ ಇರಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆ ನೀರು ನುಗ್ಗಿ ಮನೆ ಕಳೆದುಕೊಂಡ ಹಿನ್ನೆಲೆ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ನಿರಾಶ್ರಿತರ ಸಭೆಯಲ್ಲಿ ಅವರು ಮಾತನಾಡಿದರು.

ಮನೆಗಳಿಗೆ ಕೆರೆ ನೀರು ನುಗ್ಗಿದೆ, ಮುಂದಿನ ಜೀವನ ಹೇಗೆ ಎಂಬ ಭಯ ಬೇಡ. ನಿಮ್ಮೊಂದಿಗೆ ನಾನಿದ್ದೇನೆ. ಸರ್ಕಾರಿ ಜಾಗ ಹುಡುಕಿ ನಿರಾಶ್ರಿತರಿಗೆ ನಿವೇಶನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ನೀರಿನಲ್ಲಿ ಮುಳುಗಿರುವ ಮನೆಗಳಿಗೆ ಸಂಪರ್ಕವಿರುವ ವಿದ್ಯುತ್ ತೆಗೆಯಲು ಸಂಬಂಧಿಸಿ ಬೆಸ್ಕಾಂ ಅಧಿಕಾರಿಗಳು, ಲೈನ್ ಮ್ಯಾನ್‌ಗಳಿಗೆ ತಿಳಿಸಲಾಗಿದೆ. ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿ ನೆರವು ಪಡೆದು, ಆರೋಗ್ಯವಾಗಿ ಇರಬೇಕು ಎಂದು ಮನವಿ ಮಾಡಿದರು.

ಆರೋಗ್ಯ ತಪಾಸಣೆ:

ಗ್ರಾಮದಲ್ಲಿ ನೀರಿನಮಟ್ಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಬುಧವಾರ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಎಲ್ಲರ ಆರೋಗ್ಯ ಪರೀಕ್ಷೆ ಮಾಡಬೇಕು. ಉಚಿತವಾಗಿ ಔಷಧಗಳನ್ನು ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ವಿಶ್ವನಾಥ್ ಅವರಿಗೆ ಮೊಬೈಲ್ ಕರೆ ಮೂಲಕ ಸೂಚನೆ ನೀಡಿದರು.

ತಹಸೀಲ್ದಾರ್ ಸೈಯದ್ ಕಲಿಂಉಲ್ಲಾ ಮಾತನಾಡಿ, ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆದು ನಿತ್ಯ ಮೂರು ಹೊತ್ತು ಆಹಾರ ನೀಡಲು ಅಡುಗೆಯವರನ್ನು ನೇಮಿಸಲಾಗಿದೆ. ಇನ್ನು ನಿವೇಶನಕ್ಕೆ ಸಂಬಂಧಿಸಿದಂತೆ ಗ್ರಾಮದ ಸಮೀಪ 1 ಎಕರೆ ಜಾಗದಲ್ಲಿ ನಿವೇಶನ ಮಾಡಿ, ಅರ್ಹರಿಗೆ ಸೌಲಭ್ಯ ಹಂಚಲು ಶಾಸಕರು ಸೂಚನೆ ನೀಡಿದ್ದಾರೆ ಎಂದರು.

ಸಿಡಿಪಿಒ ಬೀರೇಂದ್ರಕುಮಾರ್, ಶಾಂತಮ್ಮ ಅನುರಾಧ, ಗ್ರಾಪಂ ಸದಸ್ಯ ಸುರೇಶ್, ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಟಿ.ರವಿಕುಮಾರ್, ಪತ್ರಕರ್ತ ಧನ್ಯಕುಮಾರ್, ಶಿವಣ್ಣ, ಬಾಣೇಶ್, ಕೃಷ್ಣ ರೆಡ್ಡಿ, ಜೆ.ಎಸ್. ತಿಪ್ಪೇಸ್ವಾಮಿ, ಪರಶುರಾಮ್, ಚನ್ನಬಸವನಗೌಡ, ಮಹಮದ್ ಗೌಸ್ ಮತ್ತಿತರರಿದ್ದರು.

- - - -15ಜೆಎಲ್ಆರ್ಚಿತ್ರ2:

ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ನಿರಾಶ್ರಿತರ ಸಭೆಯಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ