ಡಿವೈಡರ್ ಕಾಮಗಾರಿ 2 ತಿಂಗಳೊಳಗೆ ಮುಗಿಸಿ: ಶಾಸಕ ಆರ್‌. ಬಸನಗೌಡ ತುರ್ವಿಹಾಳ

KannadaprabhaNewsNetwork |  
Published : Dec 27, 2023, 01:32 AM IST
26-ಎಂಎಸ್ಕೆ -01: | Kannada Prabha

ಸಾರಾಂಶ

ಮಸ್ಕಿಯಲ್ಲಿ ರಸ್ತೆ ಡಿವೈಡರ್ ಹಾಗೂ ಚರಂಡಿ ಕಾಮಗಾರಿಯನ್ನು ಶಾಸಕರು ವೀಕ್ಷಿಸಿ, ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಪಟ್ಟಣದಲ್ಲಿ 10 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಡಿವೈಡರ್ ಹಾಗೂ ಚರಂಡಿ ಕಾಮಗಾರಿ ಆದಷ್ಟು ಬೇಗ ಮುಗಿಸಿ ಇಲ್ಲದಿದ್ದರೆ ಇದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಆಗುತ್ತದೆ ಎಂದು ಶಾಸಕ ಆರ್‌. ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದಲ್ಲಿ ಸೋಮವಾರ 10 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಡಿವೈಡರ್ ಮತ್ತು ಚರಂಡಿ ಕಾಮಗಾರಿಯನ್ನುವೀಕ್ಷಣೆ ಮಾಡಿ ಬಳಿಕ

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿಯನ್ನು ರಾತ್ರಿ ಸಮಯದಲ್ಲಿಯೂ ಮಾಡಬೇಕು. ಹಗಲು ಹೊತ್ತಿನಲ್ಲಿ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿ ಇರುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಅಲ್ಲದೇ ಕಾಮಗಾರಿಯೂ ಬೇಗ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಾಮಗಾರಿಯನ್ನು ರಾತ್ರಿಯೇ ಮಾಡಿದರೆ ಆದಷ್ಟು ಬೇಗ ಮುಗಿಸಲು ಅನೂಕೂಲವಾಗುತ್ತದೆ ಎಂದರು.

ರಸ್ತೆ ಡಿವೈಡರ್ ಹಾಗೂ ಚರಂಡಿ ಕಾಮಗಾರಿಯನ್ನು ಇನ್ನೆರಡು ತಿಂಗಳಲ್ಲಿ ಮಾಡಿ ಮುಗಿಸಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಅರಮನೆ ಸುಧಾ, ಹೆದ್ದಾರಿ ಪ್ರಾಧಿಕಾರದ ಎಇಇ ಸೋಮನಗೌಡ ಪಾಟೀಲ್, ಎಂಜಿನಿಯರ್ ಡಿ.ಎಂ.ಮೇಲಿನಮನೆ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ನೀರಾವರಿ ಇಲಾಖೆಯ ಮಲ್ಲಯ್ಯ ಕೆ, ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್ಐ ತಾರಾಬಾಯಿ ಕಾಂಗ್ರೆಸ್ ಮುಖಂಡರಾದ ಶ್ರೀಶೈಲಪ್ಪ ಬ್ಯಾಳಿ, ಮಲ್ಲಯ್ಯ ಬಳ್ಳಾ, ಸಿದ್ದನಗೌಡ ಮಾಟೂರ್, ಮಲ್ಲಯ್ಯ ಮುರಾರಿ, ರವಿ ಮಡಿವಾಳ, ಆನಂದ ವೀರಾಪುರ, ಬಸನಗೌಡ ಮುದಬಾಳ, ಕೃಷ್ಣ ಚಿಗರಿ, ನಾರಾಯಣಪ್ಪ ಕಾಸ್ಲಿ, ಕರಿಗೌಡ ಗುಡದೂರು, ಕರಿಯಪ್ಪ ಹಾಲಾಪೂರು, ಕಾಸಿಂ.ಡಿ.ಮುರಾರಿ, ನಿಸಾರ್ ಅಹ್ಮದ್, ಗಂಗಾಧರ ಮುರಾರಿ, ಮಹಿಬೂಬ್ ಹಣಿಗಿ ಸೇರಿದಂತೆ ಇತರರು ಇದ್ದರು.5(ಎ) ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಮಸ್ಕಿ ಕ್ಷೇತ್ರದ ರೈತರಿಗೆ ಅನೂಕೂಲಕ್ಕಾಗಿ ಕೊಟ್ಟ ಮಾತಿನಂತೆ ರೈತರ ಹಿತ ಕಾಪಾಪಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನಮ್ಮ ನಾಯಕರು ರೈತರಿಗೆ ಕೊಟ್ಟ ಭರವಸೆಯಂತೆ 5 (ಎ) ನಾಲಾ ಯೋಜನೆ ಜಾರಿ ಮಾಡಲು ಬದ್ಧ ಯಾವುದೇ ಕಾರಣಕ್ಕೂ ಕೊಟ್ಟ ಮಾತಿನಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸರ್ಕಾರ ಸದನದಲ್ಲಿ 5 (ಎ) ಯೋಜನೆ ಜಾರಿ ಮಾಡಲು ಆಗುವುದಿಲ್ಲವೆಂದು ಎಲ್ಲೂ ಹೇಳಿಲ್ಲ. ಯೋಜನೆ ಜಾರಿ ಕುರಿತು ಈಗಾಗಲೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವುಕುಮಾರ ಅವರೊಂದಿಗೆ ಮಾತನಾಡಿದೇವೆ. ಆದಷ್ಟು ಬೇಗ ಸಭೆ ಕರೆದು 5ಎ ನಾಲಾ ಜಾರಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದ್ದೆ. ರೈತರು ಯಾವುದೇ ಕಾರಣಕ್ಕೂ ಉಹಾ ಪೋಹ ಸುದ್ದಿಗಳಿಗೆ ಕಿವಿಗೊಡದೆ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ