ಶಿರಹಟ್ಟಿ: ಪಟ್ಟಣದ ತಾಲೂಕು ಪಶು ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅವಘಡದಲ್ಲಿ ಆಸ್ಪತ್ರೆಯಲ್ಲಿದ್ದ ಸಿರೆಂಜ್ ಬಾಕ್ಸ್‌ಗೆ ಬೆಂಕಿ ತಗುಲಿ ಅಂದಾಜು ₹೨೦ ಸಾವಿರ ಬೆಲೆಬಾಳುವ ಸಿರೆಂಜ್ ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳದವರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಸಿರೆಂಜ್ ಬಾಕ್ಸ್ ಪ್ಲಾಸ್ಟಿಕ್ ವಸ್ತುವಿನಿಂದ ಕೂಡಿದ್ದರಿಂದ ವಿದ್ಯುತ್ ಶಾರ್ಟ್‌ನಿಂದಾಗಿ ಬೆಂಕಿ ತಗುಲಿ ಏಕಾಏಕಿ ತಾಲೂಕು ಪಶು ಆಸ್ಪತ್ರೆಯ ಮಧ್ಯಭಾಗದ ಕಟ್ಟಡ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸಾರ್ವಜನಿಕರು ಗುಂಪುಗೂಡಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಪಶು ಆಸ್ಪತ್ರೆಯ ಮಧ್ಯ ಭಾಗದ ಕೊಠಡಿಯು ಕಟ್ಟಿಗೆಯ ಚಾವಣಿಯಾಗಿದ್ದರಿಂದ ಬೆಂಕಿ ಬಹುಬೇಗನ ಹಬ್ಬಲು ಪ್ರಾರಂಭಿಸಿತು.ಸಾರ್ವಜನಿಕರು ತುರ್ತಾಗಿ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯ ಮತ್ತು ಕಾರ್ಯಪ್ರಜ್ಞೆಯಿಮದ ಭಾರೀ ಅಗ್ನಿ ಅನಾಹುತ ತಪ್ಪಿದೆ. ಹಬ್ಬಿಕೊಂಡಿದ್ದ ಬೆಂಕಿಯೂ ಪಶು ಆಸ್ಪತ್ರೆಯ ಉಳಿದ ಭಾಗದ ಕಟ್ಟಡಕ್ಕೆ ಆವರಿಸದಂತೆ ಅಗ್ನಿಶಾಮಕ ಸಿಬ್ಬಂದಿಗಳಾದ ಸುರೇಶ ಹೆಗಡಿ, ಪ್ರಶಾಂತರಡ್ಡಿ ಬಟಕೂರ್ಕಿ, ರಶೀದ ಮಸೂತಿ ಮುಂತಾದವರು ತುರ್ತು ಕ್ರಮವಹಿಸಿದರು.ಪಶು ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಡಾ. ನಿಂಗಪ್ಪ ಓಲೇಕಾರ ಅವರು ನೀಡಿದ ಮಾಹಿತಿಯಂತೆ ಪಶು ಆಸ್ಪತ್ರೆಗೆ ಹತ್ತಿಕೊಂಡಿದ್ದ ಬೆಂಕಿಯನ್ನು ಸಮಯಕ್ಕೆ ಸರಿಯಾಗಿ ಸಂಪೂರ್ಣವಾಗಿ ನಂದಿಸಲಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಸಧ್ಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಯಾವುದೇ ಅಡಚಣೆ ಇಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿಯವರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ತಿಳಿಸಿದ್ದಾರೆ.ಇಂದು ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ